ಪಡಿತರ ಅಕ್ಕಿ ವಿತರಣೆಯಲ್ಲಿ ಅಕ್ರಮ ನಡೆದರೆ ಕಠಿಣ ಕ್ರಮ: ಪಾಟೀಲ್
ಗಜೇಂದ್ರಗಡ: ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಪಡಿತರ ವ್ಯವಸ್ಥೆ ಸದ್ಬಳಕೆ ಮಾಡಿಕೊಳ್ಳಬೇಕು. ಬಡವರ ಪಡಿತರ ಅಕ್ಕಿ ವಿತರಣೆಯಲ್ಲಿ ಅನ್ಯಾಯವಾದರೆ ಸುಮ್ಮನಿರುವುದಿಲ್ಲ ಎಂದು ಶಾಸಕ ಜಿ.ಎಸ್. ಪಾಟೀಲ ಎಚ್ಚರಿಕೆ ನೀಡಿದರು.
ಅವರು ಶುಕ್ರವಾರ ಸ್ಥಳೀಯ ಕಟ್ಟಿ ಬಸವೇಶ್ವರ ರಂಗ ಮಂದಿರದಲ್ಲಿ ಆಯೋಜಿಸಿದ್ದ ಅನ್ನಭಾಗ್ಯ ಯೋಜನೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಡವರಿಗೆ ಸರ್ಕಾರ ನೀಡಿರುವ ರು. 1ಕ್ಕೆ ಕೆಜಿ ಅಕ್ಕಿ ವಿತರಣೆಯಲ್ಲಿ ಅಕ್ರಮ ಕಾರ್ಯ ನಡೆದರೆ ಅಂತಹ ನ್ಯಾಯ ಬೆಲೆ ಅಂಗಡಿಗಳ ಪರವಾನಗಿ ರದ್ದತಿಗೆ ಶಿಫಾರಸು ಮಾಡಲಾಗುವುದು. ಬಡವರಿಗೆ ಅಕ್ಕಿಯನ್ನು ಸಮರ್ಪಕವಾಗಿ ವಿತರಣೆ ಮಾಡಲು ನ್ಯಾಯಬೆಲೆ ಅಂಗಡಿಯವರು ಮುಂದಾಗಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ತಾಕೀತು ಮಾಡಿದರು. ಚುನಾವಣೆ ಪೂರ್ವದಲ್ಲಿ ಜನತೆಗೆ ಕೊಟ್ಟ ಭರವಸೆಯಂತೆ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆ ಜಾರಿಯಿಂದ ಬಡ ಕುಟುಂಬಗಳ ಹಸಿವು ನಿವಾರಿಸಲಿದೆ. ರಾಜ್ಯ ಸರ್ಕಾರ ಸಣ್ಣ ರೈತರ ರು. 25 ಸಾವಿರ ವರೆಗಿನ ಸಾಲ, ನೇಕಾರ ಹಾಗೂ ಹಿಂದುಳಿದ ಸಮುದಾಯಗಳ ಸಾಲ ಮನ್ನಾ ಮಾಡಿದೆ. ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ವಸತಿ, ಭಾಗ್ಯಜ್ಯೋತಿ ಯೋಜನೆಯ ಬಾಕಿ ಹಣ ಮನ್ನಾ ಮಾಡಿರುವುದು ಇನ್ನು ಹಲವಾರು ಯೋಜನೆಗಳು ಜನರ ಪ್ರಶಂಸೆಗೆ ಪಾತ್ರವಾಗಿವೆ ಎಂದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಶೋಕ ಬಾಗಮಾರ ಮಾತನಾಡಿ, ಗಜೇಂದ್ರಗಡ ಸ್ವಾತಂತ್ರ್ಯಯೋಧ ವೆಂಕೂಸಾ ಭಾಂಡೆಗೆ ಅವರಿಗೆ ಅಗಸ್ಟ್ 15 ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ಮುಖರ್ಜಿ ಅವರು ಸನ್ಮಾನಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ ಅಧ್ಯಕ್ಷತೆ ವಹಿಸಿದ್ದರು. ಸ್ವಾತಂತ್ರ್ಯಯೋಧ ವೆಂಕೂಸಾ ಭಾಂಡೆಗೆ, ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ವಿ.ಆರ್. ಗುಡಿಸಾಗರ, ರೋಣ ತಹಸೀಲ್ದಾರ್ ಎಂ.ಬಿ.ಪಾಟೀಲ, ಚಂಬಣ್ಣ ಚವಡಿ, ಎಸ್.ಎಂ. ಆರಗಿದ್ದಿ, ವೀರಣ್ಣ ಶೆಟ್ಟರ, ಮೋಹನಸಾ ರಾಯಬಾಗಿ, ಪ್ರಭು ಮೇಟಿ, ಜಿಪಂ ಸದಸ್ಯ ಡಾ. ಬಸವರಡ್ಡೇರ, ತಾಪಂ ಸದಸ್ಯೆ ಗಾಯಿತ್ರಿ ನಾಗನೂರ, ಮಾಲಾನಬಿ ಗಡಾದ, ಅಂದಪ್ಪ ಬಿಚ್ಚೂರ, ವಿ.ಬಿ. ಪಸಾರದ, ಬಸವರಾಜ ಬೆಲ್ಲದ ಉಪಸ್ಥಿತರಿದ್ದರು. ಆಹಾರ ನಿರೀಕ್ಷಕ ಎಂ.ಬಿ. ಮಠದ ನಿರೂಪಿಸಿದರು. ಎಸ್.ಕೆ. ಲಕ್ಕುಂಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

