ಗದಗ

ಕ್ಯಾರಿಓವರ್ ಪದ್ಧತಿಗೆ ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 22
ಡಿಪ್ಲೋಮಾ ಕ್ಯಾರಿಓವರ್ ಪದ್ಧತಿ ನೀಡಲು ಆಗ್ರಹಿಸಿ ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಎಸ್‌ಎಫ್‌ಐ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.  
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಪೀರು ರಾಠೋಡ ಮಾತನಾಡಿ, ತಾಂತ್ರಿಕ ಶಿಕ್ಷಣ ಮಂಡಳಿಯ ಅವೈಜ್ಞಾನಿಕ ನೀತಿಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಿದೆ. ರಾಜ್ಯದಲ್ಲಿ ಹೊಸ ಪಠ್ಯಕ್ರಮ ಗುಣಮಟ್ಟ ತಕ್ಕಂತೆ ಬೋಧಿಸುವ ಶಿಕ್ಷಕರ ಕೊರತೆಯ ಜತೆ ಅಧ್ಯಯನ ಸಾಮಗ್ರಿಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಮುಂದಿನ ಸೆಮಿಸ್ಟರ್ ಮುಂದುವರಿಯಲು ಅರ್ಹತೆ ಬೇಕೆಂಬ ನಿಯಮದಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕ್ರಮ ಖಂಡನೀಯ ಎಂದರು.
ನಗರ ಸಮಿತಿ ಉಪಾಧ್ಯಕ್ಷ ಶಿವಾನಂದ ಭೋಸಲೆ ಮಾತನಾಡಿ, ರಾಜ್ಯದಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಖಾಸಗೀಕರಣ ನೀತಿಯಿಂದ ವಿಪರೀತ ಶುಲ್ಕ ವಸೂಲಿ ಹಾಗೂ ಆಂತರಿಕ ಅಂಕಗಳ ನೆಪವೊಡ್ಡಿ ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದು ಯಥೇಚ್ಛವಾಗಿ ನಡೆದಿದೆ. ಇದರಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅನೇಕ ಸರ್ಕಾರಿ ಕಾಲೇಜುಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಹೊಸದಾಗಿ ರೂಪಿಸಿರುವ ಪಠ್ಯಕ್ರಮ, ಪರೀಕ್ಷಾ ನೀತಿಗಳು ತರಗತಿ ಮುಗಿಯುವ ಮುನ್ನವೇ ಪರೀಕ್ಷೆಗಳು ಶುರುವಾಗುತ್ತವೆ. ಜತೆಗೆ ಮೌಲ್ಯಮಾಪನ ಸರಿಯಾಗಿ ನಡೆಸದೇ ಇದ್ದುದರಿಂದ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದು, ಕಾರಣ ಈ ಕೂಡಲೇ ಕ್ಯಾರಿಓವರ್ ಪದ್ಧತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿದರು.
ಜಿಲ್ಲಾ ಮುಖಂಡ ಬಾಲು ರಾಠೋಡ, ಶಿವು ಚವ್ಹಾಣ ಮಾತನಾಡಿದರು. ರಾಮು ರಾಠೋಡ, ಶಿವಾಜಿ ಗಡ್ಡದ, ಶರಣು ಬಂಡಿ, ಅಭಿ ಭೀಮನೂರ, ಮಂಜುನಾಥ ಮಿಸ್ಕಿನ್, ಪ್ರವೀಣ ಜೆ, ಸಂತೋಷ ಎಸ್, ಲಲಿತಾ ಹಲಗೇರಿ, ಜಾಂಬ್ಲೆಪ್ಪ ರಾಠೋಡ, ಸೂರಜ, ಸಂತೋಷ, ರಾಘು ಮುಧೋಳ, ರೇಖಾ ಅಪ್ಪಣ್ಣವರ, ರಾಚಯ್ಯಾ ಹಿರೇಮಠ, ಪ್ರಿಯಾಂಕಾ ಬೇಡಗಲ್, ಒಪ್ಪತ್ತೇಶ ಬಳ್ಳಾರಿ, ಆದಿತ್ಯಾ, ಮಂಜುನಾಥ ಸೂಡಿ, ಶ್ರತಿ ಲಕ್ಕಲಕಟ್ಟಿ, ಶಾರುಖಅಲಿ, ತಿರುಪತಿ ರಾಠೋಡ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.