ವೀರಭದ್ರೇಶ್ವರ ಮಂಡಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಜು. 23
ಸ್ವಾವಲಂಬನೆ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆಗಳು ಆರಂಭದಲ್ಲಿರುವ ಆಸಕ್ತಿ, ಉತ್ಸಾಹವನ್ನು ಉಳಿಸಿಕೊಂಡ ಕೆಲಸ ಮಾಡಿದರೆ ಮಾತ್ರ ಸಂಸ್ಥೆಯ ಪ್ರಗತಿ ಹಾಗೂ ಉದ್ದೇಶಗಳು ಈಡೇರಲು ಸಾಧ್ಯ ಎಂದು ಗದಗ ಜಿಲ್ಲಾ ನೆಹರು ಯುವಕ ಕೇಂದ್ರದ ಸಂಯೋಜಕ ಗೋವಿಂದಭಟ್ ಅಭಿಪ್ರಾಯಪಟ್ಟರು.
ಈಚೆಗೆ ಅವರು ಸ್ಥಳೀಯ ಓಂ ಶಿಕ್ಷಣ ಸಂಸ್ಥೆಯಲ್ಲಿ ವೀರಭದ್ರೇಶ್ವರ ಯುವತಿ ಮಂಡಳಿಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘ ಸಂಸ್ಥೆಗಳು ಕ್ರೀಯಾಶೀಲತೆಯಿಂದ ಮುಂದುವರಿದರೆ ಅದರ ಪ್ರತಿಫಲ ಸದಸ್ಯರಿಗೂ, ಸಮಾಜಕ್ಕೂ ಸಿಗುತ್ತದೆ ಮತ್ತು ಅದರ ಹುಟ್ಟು ಸಾರ್ಥಕವಾಗುತ್ತದೆ ಎಂದರು. ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ರಘುನಾಥ ಕೊಂಡಿ ಮಾತನಾಡಿ, ಸಂಸ್ಥೆಯ ಕಾರ್ಯನಿರ್ವಹಣೆ ಹಾಗೂ ಬೆಳವಣಿಗೆಗೆ ಇರುವ ಅವಕಾಶಗಳ ಬಗ್ಗೆ ವಿವರಣೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನರೇಗಲ್ಲ ಪಪಂಗೆ 14ನೇ ವಾರ್ಡ್‌ನಿಂದ ನೂತನವಾಗಿ ಆಯ್ಕೆಯಾದ ಬಸಮ್ಮ ಲಕ್ಕನಗೌಡರ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷೆ ಜಯಶ್ರೀ ಕತ್ತಿಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಓಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಶೋಕ ಬೇವಿನಕಟ್ಟಿ, ಕಳಕಪ್ಪ ಧರ್ಮಾಯತ, ಆನಂದ ಕೊಟಗಿ, ಚಂದ್ರು ಧರ್ಮಾಯತ, ಶಾರಮ್ಮ ಬಂಕದ, ಮಲ್ಲಮ್ಮ ಪಾಟೀಲ, ಸುವರ್ಣ ಕತ್ತಿಶೆಟ್ಟರ, ಸಾವಿತ್ರಿ ಸೋಮಗೊಂಡ, ಸುಜಾತಾ ಧರ್ಮಾಯತ, ಜಯಶ್ರೀ ಕಳಕೊಣ್ಣವರ, ವೀರಮ್ಮ ಜುಟ್ಲದ, ಗಂಗಮ್ಮ ಚಪ್ಪನ್ನಮಠ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಳಕವ್ವ ಗಂಗರಗೊಂಡ ಸ್ವಾಗತಿಸಿದರು. ಬಸವಣ್ಣೆವ್ವ ರೊಟ್ಟಿ ನಿರೂಪಿಸಿದರು. ಶಿಲ್ಪಾ ಧರ್ಮಾಯತ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

