ಶರಣರ ಮಾರ್ಗದಲ್ಲಿ ನಡೆದರೆ ಸಮಾಜ ಉದ್ಧಾರ: ಗಡ್ಡದ್ದೇವರಮಠ
ಲಕ್ಷ್ಮೇಶ್ವರ: ಶರಣರ ಮಾರ್ಗದಲ್ಲಿ ನಡೆದರೆ ಸಮಾಜದ ಉದ್ಧಾರ ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇರಮಠ ಹೇಳಿದರು.
ಅವರು ಮಂಗಳವಾರ ಪಟ್ಟಣದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಹಡಪದ ಅಪ್ಪಣ್ಣ ಮತ್ತು ಸವಿತಾ ಸಮಾಜದ ವತಿಯಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿ, ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಣ್ಣ ಬಸವಣ್ಣನವರ ಅನುಯಾಯಿ ಹಡಪದ ಅಪ್ಪಣ್ಣ ಓರ್ವ ಮಹಾನ್ ವಚನಕಾರರಾಗಿದ್ದರು. ಸಮಾಜದಲ್ಲಿನ ಮೇಲು ಕೀಳುಗಳನ್ನು ತಿರಸ್ಕರಿಸಿದ ಬಸವಣ್ಣ ಎಲ್ಲರಿಗೂ ಸಮಾನ ಬಾಳು ಕಲ್ಪಿಸಿದ್ದರು. ರಾಜ್ಯದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿ, ಚಿಕ್ಕ ಸಮಾಜವಾಗಿದ್ದರೂ ಎಲ್ಲ ವರ್ಗದ ಜನರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಬೆರೆತು ತಮ್ಮ ಇತಿಮಿತಿಯೊಳಗೆ ಇತರರ ಸೇವೆ ಮಾಡುತ್ತಿರುವ ಹಡಪದ ಅಪ್ಪಣ್ಣ ಮತ್ತು ಸವಿತಾ ಸಮಾಜ ಬಾಂಧವರ ಸೇವೆ ಶ್ಲಾಘನೀಯ. 12ನೇ ಶತಮಾನದ ಮಹಾಮಾನವತಾವಾದಿ ಬಸವಣ್ಣನವರ ಅತ್ಯಂತ ನಂಬಿಗಸ್ಥ ಶರಣ ಹಡಪದ ಅಪ್ಪಣ್ಣನವರು ತಮ್ಮ ಜೀವಮಾನದುದ್ದಕ್ಕೂ ನುಡಿದಂತೆ ನಡೆದು ಸಮಾಜದ ಪೂಜ್ಯನೀಯರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಪುರಸಭೆಯ ಎಲ್ಲ 23 ವಾರ್ಡ್ಗಳ ಸದಸ್ಯರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ರಾಮಣ್ಣ ಲಮಾಣಿ, ಲೋಕೇಶ ದೊಡ್ಡಮನಿ, ಸಮಾಜದ ಮುಂಡರಗಿ ತಾಲೂಕಾಧ್ಯಕ್ಷ ದೇವರಾಜ ಹಡಪದ ಮಾತನಾಡಿದರು. ಸಮಾಜದ ಅಧ್ಯಕ್ಷ ವೀರಣ್ಣ ಹಡಪದ ಅಧ್ಯಕ್ಷತೆ ವಹಿಸಿದ್ದರು. ಸುರೇಶ ನಾವ್ಹಿ, ಮಲ್ಲಪ್ಪ ಕಾಯಕದ, ಸೋಮು ನಾವಿ, ಸೋಮೇಶ ನಾವಿ, ಶಂಕರ ನಾವಿ, ನಾಗರಾಜ ನಾವಿ, ಮಲ್ಲಿಕಾರ್ಜುನ ನಾವಿ, ವಿನೋದ ಎಸ್.ಎಚ್., ಅಮರೇಶ ತೆಂಬದಮನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

