ಗದಗ

ಬಯಲಾಟಕ್ಕೆ ಪ್ರೋತ್ಸಾಹ ಅಗತ್ಯ: ಶ್ರೀ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 1  
ಬಯಲಾಟ ಕಲೆ ಪ್ರಾಚೀನ ಜಾನಪದ ಪರಂಪರೆಯಿಂದ ಬಂದಿದ್ದು, ಆಧುನಿಕ ಭರಾಟೆಯಲ್ಲಿ ಪ್ರೇಕ್ಷಕರ ಪ್ರೋತ್ಸಾಹವಿಲ್ಲದೆ ಸೊರಗುತ್ತಿದೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಸಮೀಪದ ಬೆಟಗೇರಿಯಲ್ಲಿ ಹೊಸಗರಡಿ ಜಾನಪದ ಕಲಾಮೇಳದ ವತಿಯಿಂದ ಹಳೆ ಬನಶಂಕರಿ ಜಾತ್ರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಐರಾವಣ-ಮೈರಾವಣ ಮೂಡಲಪಾಯ ಬಯಲಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಯಲಾಟ ಕಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಹೊಸಗರಡಿ ಜಾನಪದ ಕಲಾಮೇಳದ ಪರಿಶ್ರಮ ಶ್ಲಾಘನೀಯ. ಅಂದಿನ ಬಯಲಾಟ, ಜಾನಪದ ಕಲಾ ಪರಂಪರೆ ಉಳಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು.
ಜಾನಪದ ಕಲಾಮೇಳದ ಅಧ್ಯಕ್ಷ ಉಸ್ಮಾನ ಜಾಲಗಾರ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಕವಿ ಡಿ.ವಿ. ಬಡಿಗೇರ, ಉಪನ್ಯಾಸಕ ಬಾಹುಬಲಿ ಜೈನರ, ಗೌರಿಗುಡಿ-ಬ್ರಹ್ಮದೇವ ಟ್ರಸ್ಟ್ ಅಧ್ಯಕ್ಷ ಎ.ಡಿ. ಕಬಾಡಿ, ನಿಂಗಪ್ಪ ಚೇಗೂರ ಅತಿಥಿಗಳಾಗಿದ್ದರು.
ಅಶೋಕ ಸುತಾರ (ಸೂತ್ರಧಾರ), ಅಮರಸಿಂಗ್ ರಜಪೂತ (ಹಿನ್ನೆಲೆ ಗಾಯನ), ಮಲ್ಲೇಶಪ್ಪ ಮಕಾಪುರ (ಮದ್ದಳೆ), ನಿಜಲಿಂಗಪ್ಪ ಕರಿಬಿಷ್ಠಿ (ಹಾರ್ಮೋನಿಯಂ) ಕಾರ್ಯಕ್ರಮ ನಡೆಸಿಕೊಟ್ಟರು. ಡಿ.ಎಚ್. ಸೀತಿಮನಿ, ಪ್ರಕಾಶ ಬಡೆಗೇರ, ಹನುಮಾನಸಿಂಗ್ ಬ್ಯಾಳಿ, ನರಸಪ್ಪ ಪೋಪ್ತಿ, ಈಶ್ವರ ಗೋಟೂರ, ಕೇಶಪ್ಪ ಗೋಂದಕಾರ, ಸಂಕಣ್ಣ ಗುಡಿಸಲ, ಶ್ರೀನಿವಾಸ ಹಡಪದ, ಮೈಲಾರಪ್ಪ ನಾಗರಾಳ, ಸಂಗಪ್ಪ ಪಟ್ಟೆದ, ನೀಲಕಂಠಯ್ಯ ಹಿರೇಮಠ, ಬಾಳಪ್ಪ ಮನಗೂಳಿ, ಕಾಳಪ್ಪ ಬಾರಾಟಕ್ಕೆ, ಸತ್ಯಪ್ಪ ಧೂಳಾ, ಚಂದ್ರಕಾಂತ ಕೋಣಿ, ಮಲ್ಲೇಶಗೌಡ್ರ ತಿಮ್ಮನಗೌಡ್ರ, ಮಲ್ಲೇಶ ಕುರಟ್ಟಿ, ಅಣ್ಣಾರಾಂ ಸಿಂಗ್ ರಜಪೂತ, ಗಣೇಶ ರಜಪೂತ, ರವಿಚಂದ್ರ ಕೊಳ್ಳಿ ಪಾತ್ರಧಾರಿಗಳಾಗಿದ್ದರು. ನಿರ್ವಹಿಸಿದರು. ಸುಭಾಷ ಮಳಗಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.