ಗದಗ

ಬಣವೆಗಳಿಗೆ ಆಕಸ್ಮಿಕ ಬೆಂಕಿ

Published On :

ನರೇಗಲ್ಲ:  ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೂರು ಬಣವೆಗಳು ಸಂಪೂರ್ಣ ಸುಟ್ಟುಹೋಗಿ, ರು. 1.65 ಲಕ್ಷ ನಷ್ಟ ಸಂಭವಿಸಿದ ಘಟನೆ ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಗುರುಲಿಂಗಪ್ಪ ನೀರಲೋಟಿ ಅವರಿಗೆ ಸೇರಿದ ಬಣವೆ, ತೇಗದ ಚಕ್ಕಡಿ ಗಾಲಿ, ಕಡಲೆ ಹಾಗೂ ಒಕ್ಕಲುತನದ ಸಾಮಗ್ರಿಗಳು ಸುಟ್ಟಿವೆ. ಬಸಪ್ಪ ನೀರಲೋಟಿ ಹಾಗೂ ಬಸವಣ್ಣೆಪ್ಪ ಮಡಿವಾಳ ಅವರ ತಲಾ ಒಂದು ಬಣವೆ ಭಸ್ಮವಾಗಿವೆ. ಬಣವೆಗಳ ಪಕ್ಕದಲ್ಲಿದ ಶೆಡ್‌ಗೂ ಬೆಂಕಿ ಆವರಿಸಿ, 25ಕ್ಕೂ ಅಧಿಕ ತಗಡುಗಳು ಹಾಳಾಗಿವೆ. ಶೆಡ್‌ನಲ್ಲಿದ್ದ 2 ದನ, ಕರು ಹಾಗೂ ಎಮ್ಮೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಆಗಮಿಸಿದ ಮೂರು  ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟು, ಕೊನೆಗೂ ಯಶಸ್ವಿಯಾದವು. ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.