ಮಹಿಳೆಯರಿಗೆ ವಿವಿಧ ಸ್ಪರ್ಧೆ
ಗದಗ: ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಗದಗ ಮತ್ತು ಲಿಂಗಾಯತ ಪ್ರಗತಿಶೀಲ ಸಂಘ ತೋಂಟದಾರ್ಯ ಮಠ ಗದಗ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 9ರಂದು ಮಧ್ಯಾಹ್ನ 2ಕ್ಕೆ ಸ್ಥಳೀಯ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಇಲ್ಲಿನ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಅಂದು ಮಧ್ಯಾಹ್ನ 2ಕ್ಕೆ ಪುಲಾವ್ ಸ್ಪರ್ಧೆ, 2.30ಕ್ಕೆ ರಂಗೋಲಿ (ಫ್ರೀ ಹ್ಯಾಂಡ್), 3 ಗಂಟೆಗೆ ಜಾನಪದ ಗೀತೆ, 4ಕ್ಕೆ ಯೋಗಾಸನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಹೆಚ್ಚಿನ ಮಾಹಿತಿಗಾಗಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ನಿರ್ಮಲಾ ಪಾಟೀಲ ಹಾಗೂ ಖಜಾಂಚಿ ಅಕ್ಕಮಹಾದೇವಿ ಚಟ್ಟಿ-9480132732, 9844937175 ಇವರಲ್ಲಿ ಹೆಸರು ನೋಂದಾಯಿಸುವಂತೆ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಹೊಳೆಆಲೂರು: ಸ್ಥಳೀಯ ಗಾಡಗೋಳಿ ರಸ್ತೆಯಲ್ಲಿರುವ ಯಚ್ಚರೇಶ್ವರ ಬಾಲವಿಕಾಸ ವಿದ್ಯಾಮಂದಿರದ ಯಚ್ಚರೇಶ್ವರ ಸಂಯುಕ್ತ ಪಪೂ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಈಚೆಗೆ ಕಾಲೇಜಿನ ಸಭಾಭವನದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎ.ಎನ್. ಬಡಿಗೇರ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಡಿ.ಆರ್. ನಾಯಕ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತುಬದ್ದ ಜೀವನ ರೂಪಿಸಿಕೊಳ್ಳಬೇಕು. ವೇಳೆಯ ಮಹತ್ವ ಅರಿತು ಓದು-ಬರಹಗಳ ಜತೆಗೆ ಬುದ್ದಿಮತ್ತೆ ಉಪಯೋಗಿಸಿಕೊಳ್ಳಬೇಕೆಂದರು.
ಪರೀಕ್ಷೆ ಬಂದಾಗಲೇ ಓದಿದರಾಯಿತು ಎಂಬ ಉದಾಸೀನತೆ ಇರಬಾರದು. ಅಂದಿನ ಪಾಠವನ್ನು ಅಂದೆ ಮುಗಿಸಿದಲ್ಲಿ ಪರೀಕ್ಷೆ ಸಮೀಪಿಸಿದಾಗ ರಿವಿಜನ್ ಮಾಡಲು ಆಗುತ್ತದೆ. ಇದರಿಂದ ಹೆಚ್ಚು ಅಂಕ ಗಳಿಸಬಹುದು ಎಂದರು. ದೀಪದಾನವನ್ನು ನೇತ್ರಾವತಿ ಎಸ್.ಎನ್ ನಡೆಸಿಕೊಟ್ಟರು.
ಸಂಸ್ಥೆಯಿಂದ ಉಪನ್ಯಾಸಕರಾದ ಸಿ.ಬಿ. ಕಮ್ಮಾರ, ಬಿ.ಎಚ್. ಮಾರನಬಸರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪ್ರೊ. ವಿ.ಪಿ. ಪಾಟೀಲ ಉಪಸ್ಥಿತರಿದ್ದರು. ಎಸ್.ಆರ್. ವಾಲಿಯವರ ಪ್ರಾರ್ಥಿಸಿದರು. ಎಸ್.ಪಿ. ನದಾಫ್ ಸ್ವಾಗತಿಸಿದರು. ಜಿ.ಎಂ. ಪೊಲೀಸ್ ಪಾಟೀಲ ವಂದಿಸಿದರು. ಎಸ್.ಬಿ. ಹಳ್ಳೂರ ನಿರೂಪಿಸಿದರು.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಭಟ್ಕೋಚಾಳದಿಂದ ಮಿಷನ್ ಕಾಂಪೌಂಡ, ಕರಿಗಾರ ಓಣಿ, ವಿದ್ಯಾರಣ್ಯ ರೋಡ್, ರಜಪೂತ ಓಣಿಯಲ್ಲಿ ಮಂಗಳವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

