ಇಂದು ಎಸ್.ಬಿ. ಹಿರೇಮಠಗೆ ಪ್ರಶಸ್ತಿ ಪ್ರದಾನ
ರೋಣ: ತಾಲೂಕಿನ ಸವಡಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಶಿಕ್ಷಕ ಎಸ್.ಬಿ. ಹಿರೇಮಠ ಅವರು ಧಾರವಾಡದ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ದತ್ತಿ ನಿಧಿಯಿಂದ 2013ನೇ ಸಾಲಿನ ಉತ್ತಮ ಶಿಕ್ಷಕ ಸಾಹಿತಿ ಪ್ರಶಸ್ತಿಗೆ ಭಾಜನರಾಗಿದ್ದು, ಮಾ. 15ರಂದು ಧಾರವಾಡದಲ್ಲಿ ಜರುಗುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ, ಸನ್ಮಾನಿಸಲಾಗುವುದು.
ಸಾಹಿತಿಯ ಕಿರು ಪರಿಚಯ: ಪ್ರಸ್ತುತ ಎಸ್.ಬಿ. ಹಿರೇಮಠರು ಸವಡಿ ಗ್ರಾಮದ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ ಚಿಕ್ಕಮಣ್ಣೂರ ಗ್ರಾಮದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಸಾಹಿತ್ಯದ ಗೀಳು ಬೆಳೆಸಿಕೊಂಡಿದ್ದಾರೆ. ಎಂಎ, ಎಂಇಡಿ, ಪದವೀಧರರಾದ ಇವರು 1995ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬರೆದ ಕೃತಿಗಳು: ಜನಗಣಮನ (ಕವನ ಸಂಕಲನ), ಚುಕ್ಕಿ ಚಂದ್ರಾಮ (ಮಕ್ಕಳ ಕವನ), ಗೊರಕೆ ಗುಂಡ (ಮಕ್ಕಳ ಕವನ), ನಾನು ಬರ್ತಿನಿ ಸ್ಕೂಲಿಗೆ (ಮಕ್ಕಳ ನಾಟಕ), ಜ್ಞಾನ ಬಂಧುಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿಗ್ಗಜರು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಕಿರು ನಾಟಕಗಳಾದ ಆರೋಗ್ಯ ಜೋಳಿಗೆ, ಬುದ್ಧಂ ಶರಣಂ ಗಚ್ಛಾಮಿ, ಜೀವನ ಮಲ್ಲಿಗೆ, ದಹನ, ವಚನ ಪರಿಪಾಲನೆ, ಮಾಡಿದ್ದುಣ್ಣೋ ಮಾರಾಯಾ, ಸೊಳ್ಳೆ ಬಂತು ಸೊಳ್ಳೆ ನಾಟಕ ಮುದ್ರಣ ಹಂತದಲ್ಲಿವೆ. ನಕ್ಕಾಗ ನಗೆ ಹಿಗ್ಗು ಎಂಬ ಚುಟುಕು ಸಾಹಿತ್ಯ, ಅಲ್ಲದೆ ಅನೇಕ ಲೇಖನ, ನಾಟಕ, ಕವನ ಸಂಕಲನ, ಚುಟುಕುಗಳನ್ನು ರಚಿಸಿ ಶಿಕ್ಷಕ ವೃತ್ತಿಗೆ ಮೆರಗು ತಂದಿದ್ದಾರೆ ಅನೇಕ ಶೈಕ್ಷಣಿಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

