ಗದಗ

ಇಂದು ಬಸವದಳದ ಶರಣ ಸಂಗಮ

Published On :

ಗದಗ: ಶಿವಾನಂದ ನಗರದ ಬಸವ ಮಂಟಪದಲ್ಲಿ ಮಾ. 24ರ ಬೆಳಗ್ಗೆ 11.30ಕ್ಕೆ ಬಸವದಳದ ಶರಣ ಸಂಗಮ ಕಾರ್ಯಕ್ರಮ ಗದಗ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಬಸವದಳ ಗದಗ-ಬೆಟಗೇರಿ ಆಶ್ರಯದಲ್ಲಿ ನಡೆಯಲಿದ್ದು, ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯ ವಚನ ಚಿಂತನೆ ಏರ್ಪಡಿಸಲಾಗಿದೆ. ಮಹಾಂತದೇವರು ಜೆ.ಟಿ. ಮಠ ಗದಗ ಸಾನ್ನಿಧ್ಯ, ಎಂ.ಬಿ. ಲಿಂಗಧಾಳ ಅಧ್ಯಕ್ಷತೆ ವಹಿಸುವರು. ವಚನ ಚಿಂತನೆ ಕುರಿತು ಎನ್.ಎಚ್. ಹಿರೇಸಕ್ಕರಗೌಡ್ರ ಮಾತನಾಡುವರು. ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಪ್ರಕಾಶ ಅಸುಂಡಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಪದಾಧಿಕಾರಿಗಳ ಆಯ್ಕೆ
ಗದಗ:
ಜಿಲ್ಲೆಯ ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ ಈಚೆಗೆ ಜರುಗಿತು. ಗಜೇಂದ್ರಗಡ ಪಟ್ಟಣದ ನಗರ ಘಟಕದ ಅಧ್ಯಕ್ಷರಾಗಿ ಭಾಸ್ಕರ ರಾಯಬಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಹನಮಂತರಾವ್ ಚವ್ಹಾಣ, ಯುವ ಮೋರ್ಚಾ ಅಧ್ಯಕ್ಷರಾಗಿ ಮಹಾಂತೇಶ ತಿಗರಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಗಪ್ಪ ಯಲಿಗಾರ ಹಾಗೂ ಮಹಿಳಾ ಮೋರ್ಚಾ ಗಜೇಂದ್ರಗಡ ಘಟಕದ ಅಧ್ಯಕ್ಷರಾಗಿ ಕವಿತಾ ಜಾಲಿಹಾಳ, ಪ್ರಧಾನ ಕಾರ್ಯದರ್ಶಿಯಾಗಿ ಗೀತಾ ಗಾಣಿಗೇರ ಹಾಗೂ ನರೇಗಲ್ಲ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಉಮೇಶ ಸಂಗನಾಳಮಠ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಮಲ್ಲನಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿ.ಸಿ. ಪಾಟೀಲ ಆರೋಗ್ಯಕ್ಕಾಗಿ ಪೂಜೆ
ನರಗುಂದ:
  ಗುಂಡೇಟಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಸಿ.ಸಿ. ಪಾಟೀಲರು ಬೇಗನೆ ಗುಣಮುಖರಾಗುವಂತೆ ಪಟ್ಟಣದ ನೀರಾವರಿ ಕಾಲೋನಿಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ತಾಲೂಕು ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸಂಜೀವಕುಮಾರ ಮುಧೋಳ, ಅಧ್ಯಕ್ಷ ಸುನೀಲ ನಾಗಠಾಣ, ಪುರಸಭೆ ಸದಸ್ಯ ಮಹೇಶ ಬಡಿಗೇರ, ಸುರೇಶ ನರಸಾಪುರ, ಶರಣಪ್ಪ ಹೂಗಾರ, ಪ್ರಕಾಶ ನಂದಿ, ಅಂದಾನಯ್ಯ ಹಿರೇಮಠ, ಅರುಣ ಕುಟಗಣಕಟ್ಟಿ, ರುದ್ರಯ್ಯ ಹಿರೇಮಠ, ಹರೀಶ ಬನಪ್ಪನವರ, ಡಿ.ಬಿ. ಪಾಟೀಲ, ಶ್ರೀನಾಥ ಮುಧೋಳ, ಬಸವರಾಜ ಹುಬ್ಬಳ್ಳಿ, ಅಪ್ಪಯ್ಯ ಹಿರೇಮಠ, ಪ್ರಕಾಶ ವಿಠಪ್ಪನವರ, ಬಸವರಾಜ ದಿಬ್ಬದಮನಿ, ಚಿದಾನಂದ ಸುರಕೋಡ, ಶರಣಪ್ಪಗೌಡ ಪಾಟೀಲ, ವಿಜಯಕುಮಾರ ಮಾಯಾಚಾರಿ, ಶಿವು ದಿಬ್ಬದಮನಿ, ಆನಂದ ನಂದಿಕೋಲಮಠ, ಗುರುನಾಥ ಬಡಿಗೇರ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.