ವೀರಶೈವ ಪಂಚಮಸಾಲಿ ಸಮಾಜ ಸಭೆ
ಗದಗ: ಜಿಲ್ಲಾ ವೀರಶೈವ ಪಂಚಮಸಾಲಿ ಸಭೆ ಈಚೆಗೆ ಸಮಾಜದ ಸಮುದಾಯ ಭವನದಲ್ಲಿ ನಡೆಯಿತು. ಎಫ್.ವಿ. ಮರಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಪಂಚಮಸಾಲಿ ಜಿಲ್ಲಾ ಸಮಾವೇಶ ಮಾಡಲು ಚರ್ಚಿಸಲಾಯಿತು. ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಪಂ, ಚುನಾವಣೆಯಲ್ಲಿ ಆಯ್ಕೆಯಾದ ಸಮಾಜದ ಸದಸ್ಯರನ್ನು ಸನ್ಮಾನಿಸುವುದು, ಪ್ರತಿ ತಾಲೂಕಿನಿಂದ ಜಿಲ್ಲೆಗೆ 3 ಸದಸ್ಯರನ್ನು ಆಯ್ಕೆ ಮಾಡುವುದು ಮತ್ತು ಜಿಲ್ಲಾ ಸಮಿತಿಯಿಂದ ಮೂವರನ್ನು ರಾಜ್ಯ ಸಮಿತಿಗೆ ನೇಮಿಸುವುದು, ಜಿಲ್ಲೆಯಾದ್ಯಂತ ವೀರಶೈವ ಪಂಚಮಸಾಲಿ ಸಮಾಜದ ಸದಸ್ಯತ್ವಕ್ಕೆ ಅಭಿಯಾನ ಮಾಡುವುದರ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗದಗ ಜಿಲ್ಲಾ ವೀರಶೈವ ಪಂಚಮಸಾಲಿ ಸಮಾಜದ ಮಹಿಳಾ ಪ್ರದಾನ ಕಾರ್ಯದರ್ಶಿಯಾಗಿ ಎಸ್.ಬಿ. ಪಾಟೀಲರನ್ನು ಆಯ್ಕೆ ಮಾಡಲಾಯಿತು. ಗೌರವಾದ್ಯಕ್ಷ ನಿಂಗಪ್ಪ ಪಡಗದ, ಬಸವರಾಜ ಅಪ್ಪಣ್ಣವರ, ಎಂ.ಎಸ್. ಪರ್ವತಗೌಡ್ರ, ಸೋಮಣ್ಣ ಮುಳಗುಂದ, ಡಾ ಗವಾಯಿ, ಈರಣ್ಣ ಪಾಟೀಲ, ಉಳವಪ್ಪ ಹೊಂಬಳ, ಸಿದ್ದಣ್ಣ ತುರಕಾಣಿ, ಉಮೇಶ ಮುಳ್ಳಾಳ, ಶಿವಣ್ಣ ನಾಗರಾಳ, ಅಂಗಡಿ, ವೀರಣ್ಣ ಕರಬಿಷ್ಠಿ, ಮಾನೇದ ಗುರುಗಳು, ಹುಳ್ಳಿ, ಪಾರ್ವತೆಮ್ಮ ಮರಿಗೌಡ್ರ, ಎಸ್.ಬಿ. ಪಾಟೀಲ, ವಿ.ಕೆ. ಮಟ್ಟಿ, ಜಗದೀಶ ಚೆನ್ನಪ್ಪಗೌಡ್ರ, ಪ್ರಭು ಹಣ್ಣಿ, ರವಿ ಮಣಕವಾಡ ಉಪಸ್ಥಿತರಿದ್ದರು ಎಂದು ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಸವರಾಜ ಅಪ್ಪಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

