ವಾರ್ಡ್ ಅಭಿವೃದ್ಧಿಗೆ ಆದ್ಯತೆ
ರೋಣ: ಜನತೆಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಜತೆಗೆ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜನತೆ ತಮ್ಮ ಮೇಲಿಟ್ಟ ನಂಬಿಕೆ ಉಳಿಸಿಕೊಳ್ಳುವುದಾಗಿ ಪುರಸಭೆ ಸದಸ್ಯ ಶಫೀಕ ಮೂಗನೂರ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ 22ನೇ ವಾರ್ಡಿನ ಜನತೆ ಹಾಗೂ ಕಲ್ಯಾಣ ನಗರ ಹಿತರಕ್ಷಣಾ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ವಾರ್ಡ್ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಜನತೆಗೆ ತೊಂದರೆಯಾದರೆ ಕೂಡಲೇ ಪರಿಹರಿಸುವ ಮನೋಭಾವ ಹೊಂದಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ಅದರಿಂದ ಇತರರಿಗೆ ಒಳಿತಾಗಲಿ. ನಿಸ್ವಾರ್ಥ ಸೇವಾಗುಣ ರಾಜಕಾರಣಿಗಳಲ್ಲಿ ಬೆಳೆಯಲಿ ಎಂದು ಆಶಿಸಿದರು. ಜಿಲ್ಲಾ ಕಾಂಗ್ರೆಸ್ ಮಹಾಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿ, ಸುಭಾಸ ನೀಲಗಾರ ಮಾತನಾಡಿದರು. ಸಾನ್ನಿಧ್ಯವನ್ನು ಪಟ್ಟಣದ ದರ್ಗಾದ ಶಾವಲಿ ಸುಲೇಮಾನ ಅಜ್ಜನವರು ವಹಿಸಿದ್ದರು. ಸಂಗಪ್ಪ ವಕ್ರದ, ಶಿವಣ್ಣ ಬೇನಹಾಳ, ನಿಂಗಪ್ಪ ಶೆಟ್ಟರ, ಮೇಘರಾಜ ಶಿಂಗ್ರಿ, ಪೀರಸಾಬ ಮಾರನಬಸರಿ, ಶಿವಣ್ಣ ಮಣ್ಣೇರಿ, ಮಲ್ಲಯ್ಯ ವಿರಕ್ತಮಠ, ಮರ್ತುಸಾಬ ಬೇಟಗೇರಿ, ಇಮಾಮಸಾಬ ಕೋಲ್ಕಾರ, ಬಸವರಾಜ ಕಿರೇಸೂರ, ಕರೀಮ ಬಳ್ಳಾರಿ ಉಪಸ್ಥಿತರಿದ್ದರು. ಅಷ್ಫಾಕ ಮುಲ್ಲಾ ಸ್ವಾಗತಿಸಿದರು. ಗೌಸ ಪೀರಣ್ಣವರ ನಿರೂಪಿಸಿದರು. ಲಕ್ಷ್ಮಣ್ಣ ಗೌಡನ್ನವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

