ಗದಗ

ಮದ್ಯ ಮಾರಾಟ ನಿಷೇಧ

Published On :

ಗದಗ: ಮಾ. 27ರಿಂದ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ಈ ಹಬ್ಬದ ಆಚರಣೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಗದಗ ಶಹರ, ಬೆಟಗೇರಿ ಬಡಾವಣೆ ಮತ್ತು ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಾ. 30ರ ಮಧ್ಯರಾತ್ರಿಯಿಂದ ಏ. 1ರ ಬೆಳಗಿನ 6 ಗಂಟೆಯ ವರೆಗೆ, ನರೇಗಲ್ ಮತ್ತು ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ. 26ರ ಸಂಜೆ 6 ಗಂಟೆಯಿಂದ ಮಾ. 29ರ ಸಂಜೆ 6 ಗಂಟೆಯ ವರೆಗೆ, ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ. 26 ರ ಮಧ್ಯ ರಾತ್ರಿಯಿಂದ ಮಾ. 28ರ ಮಧ್ಯರಾತ್ರಿಯವರೆಗೆ, ಗದಗ ಗ್ರಾಮೀಣ, ಮುಳಗುಂದ, ಗಜೇಂದ್ರಗಡ, ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ. 27ರ ಬೆಳಗಿನ 6 ಗಂಟೆಯಿಂದ ಮಾ. 28ರ ಮಧ್ಯರಾತ್ರಿಯವರೆಗೆ, ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ. 27 ಬೆಳಗಿನ 6 ಗಂಟೆಯಿಂದ ಮಾ. 29ರ ಬೆಳಗಿನ 6 ಗಂಟೆಯವರೆಗೆ, ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ. 30ರ ಸಂಜೆ 6 ಗಂಟೆಯಿಂದ ಮಾ. 31ರ ಮಧ್ಯರಾತ್ರಿಯ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಕಾರಣ ಈ ದಿನಗಳಂದು ಗದಗ ಜಿಲ್ಲೆಯಲ್ಲಿರುವ ಬಾರ್‌ಗಳು, ಕ್ಲಬ್‌ಗಳು, ಬಿಯರ್, ಭಾರತೀಯ ತಯಾರಿಕೆಯ ಮದ್ಯದ ಅಂಗಡಿಗಳು ಹಾಗೂ ಡಿಪೋಗಳು ಮುಚ್ಚಬೇಕು. ಅಲ್ಲದೇ ಪರಿಸ್ಥಿತಿಗೆ ಅನಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ವಲಯ ಅಬಕಾರಿ ಇನ್ಸ್‌ಪೆಕ್ಟರ್ ಹಾಗೂ ಅಬಕಾರಿ ಉಪ-ಆಯುಕ್ತರು, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 (2) ರ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗದಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದ್ದಾರೆ.

ಜನಪರ ಬಜೆಟ್ ಮಂಡನೆಯಾಗಬೇಕು
ಗದಗ:
ದೇಶದಲ್ಲಿ ವಿವಿಧ ಸರ್ಕಾರಗಳು ಮಂಡಿಸುತ್ತಿರುವ ಬಜೆಟ್‌ಗಳು ಕೇವಲ ಕೊರತೆಯನ್ನೇ ಹೊಂದಿದ್ದು, ಅವುಗಳು ಜನಪರವಾಗಿರುವ ಯೋಜನೆಗಳನ್ನು ನೀಡುವಂತ ಬಜೆಟ್‌ಗಳಾಗಬೇಕೆಂದು ಗದಗ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರು ಹೇಳಿದರು
ಈಚೆಗೆ ಅವರು ಮನೊರಮಾ ಬಿಬಿಎ ಹಾಗೂ ಬಿಸಿಎ ಕಾಲೇಜು ಹಾಗೂ ಗದಗ ಜಿಲ್ಲಾ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ವಾಣಿಜ್ಯೋಧ್ಯಮ ಸಂಸ್ಥೆಯ ಸಹಯೋಗದಲ್ಲಿ ನಡೆದ ಬಜೆಟ್ ಸಮ್ಮಿಟ್-2013 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾ. ಬಿ.ಎಸ್. ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಮನೋರಮಾ ಬಾಯಿ ಮೋಹನ ಕುಡತರಕರ ಫೌಂಡೇಷನದ ಚೇರಮನ್ ನರಸಿಂಹ ಕುಡತರಕರ, ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸುರಕೋಡ, ಉಪಸ್ಥಿತರಿದ್ದರು. ಡಾ. ರಾಜಶೇಖರ ದಾನರಡ್ಡಿ ನಿರೂಪಿಸಿದರು. ಸಂಜೀವ ದೇಶಪಾಂಡೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.