ಇಂದು ದತ್ತಿ ಉಪನ್ಯಾಸ
ಗದಗ: ಗದಗ ತಾಲೂಕು ಕಸಾಪ ಮಾ. 29ರಂದು ಬೆಳಗ್ಗೆ 10.30ಕ್ಕೆ ಸಂಭಾಪುರ ರಸ್ತೆಯ ಪೊಲೀಸ್ ಕ್ವಾರ್ಟರ್ಸ್ನ ಕಾಶೀ ಪೀಠದ ಬಳಿ ಇರುವ ಅನ್ನಪೂರ್ಣಾ ಗಡಾದ ಅವರ ನಿವಾಸದಲ್ಲಿ ಗೃಹಗೋಷ್ಠಿ, ದತ್ತಿ ಉಪನ್ಯಾಸ, ವಿಶ್ವ ಮಹಿಳಾ ದಿನಾಚರಣೆ ಹಾಗೂ ವಚನ ಗಾಯನ ಕಾರ್ಯಕ್ರಮ ಆಯೋಜಿಸಿದೆ. ಬಸವಣ್ಣನಿಂದಾದ ಸಾಮಾಜಿಕ ಪರಿವರ್ತನೆ, ಬಸವ ಸಂದೇಶದ ಪ್ರಸ್ತುತತೆ, ಬಸವಣ್ಣ-ಬುದ್ಧ-ಕಾರ್ಲ್ಮಾರ್ಕ್ಸ್ ದತ್ತಿ ಉಪನ್ಯಾಸ ನಡೆಯಲಿದೆ. ಸಾಹಿತಿ ಪ್ರೊ ಕವಿತಾ ಕಾಶಪ್ಪನವರ ಜಾಗತಿಕ ಮಟ್ಟದಲ್ಲಿ ಸ್ತ್ರೀಯರ ಸ್ಥಿತಿ-ಗತಿ ವಿಷಯವಾಗಿ ಉಪನ್ಯಾಸ ನೀಡುವರು. ಅತಿಥಿಗಳಾಗಿ ದತ್ತಿ ದಾನಿಗಳಾದ ಅಂದಾನೆಪ್ಪ ಪಟ್ಟಣಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಡಾ ಶಿವಪ್ಪ ಕುರಿ, ಬೆಟದಯ್ಯ ಹಿರೇಮಠ ಆಗಮಿಸುವರು. ಗದಗ ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ ನಾಗರತ್ನಾ ಕಾಳಗಿ ಬಸವಣ್ಣ ಮತ್ತು ಅಕ್ಕಮಹಾದೇವಿ ಅವರ ವಚನಗಳನ್ನು ಹಾಡಲಿದ್ದಾರೆ ಎಂದು ಕಸಾಪ ಗೌರವ ಕಾರ್ಯದರ್ಶಿ ಕವಿತಾ ಬಸವರಾಜ ದಂಡಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

