ಗದಗ

ಗಜೇಂದ್ರಗಡ: ಬಣ್ಣದಾಟದ ಸಡಗರ

Published On :

ಗಜೇಂದ್ರಗಡ: ಹೋಳಿ ಹುಣ್ಣಿಮೆಯ ಅಂಗವಾಗಿ ಗುರುವಾರ ಗಜೇಂದ್ರಗಡ ಪಟ್ಟಣದ ವಾಣಿಪೇಟೆ, ಡೊಳ್ಳಿನವರ ಓಣಿ, ಸಿಂಹಾಸನ ಪೇಟೆಯಲ್ಲಿ ಪ್ರತಿಷ್ಠಾಪಿಸಿದ ರತಿ ಕಾಮಣ್ಣರ ಮೂರ್ತಿಗಳ ವಿಶೇಷ ಪೂಜೆ ಬಳಿಕ ನಡೆದ ಹಿಂದುಳಿದ ಸಮುದಾಯದ ಮಹಿಳೆಯರ ಜನಪದ ಗೀತೆ ಹಾಗೂ ವಿವಿಧ ಕಲಾವಿದರ ಸಾಂಸ್ಕೃತಿಕ ಮನರಂಜನೆಗಳು ಮೆರಗು ತಂದವು. ಹುಣ್ಣಿಮೆಯ ಮೂರು ದಿನ ಮೊದಲು ರತಿ, ಕಾಮಣ್ಣ ದೇವರನ್ನು ಓಣಿಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಿದರು. ಮದುವೆ-ಮಕ್ಕಳಾಗಲೆಂದು ರತಿ-ಕಾಮಣ್ಣರ ಮೊರೆ ಹೋದರು. ಹುಣ್ಣಿಮೆ ಮಧ್ಯರಾತ್ರಿ ಕಾಮ ದಹನ ಮಾಡಿದ ಕೆಂಡವನ್ನು ಬೆಳಗ್ಗೆ ಮನೆಗೆ ಒಯ್ದು ಕಡಲೆಕಾಳು, ಗೆಣಸು, ಉಳ್ಳಾಗಡ್ಡಿ ಬೇಯಿಸಿ ಪ್ರಸಾದ ಎಂದು ಭಕ್ತಿಯಿಂದ ಸೇವಿಸಿದರು. ಮಹಿಳೆಯರು, ಪುರುಷರು, ಚಿಣ್ಣರು ವಯಸ್ಸಿನ ಭೇದವಿಲ್ಲದೆ ಪರಸ್ಪರ ಬಣ್ಣ ಎರಚಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಚಂದ್ರನ ದರ್ಶನವಾದೊಡನೆ ಬಾಯಿ ಬಡಿದುಕೊಳ್ಳುವ ಆಚರಣೆ ರಂಗು ತಂದಿತು. ದಿನ ಬೆಳಗಾದರೆ ಯುವಕರು, ಮಕ್ಕಳು ಹಲಿಗೆ ಬಾರಿಸುವುದು, ಬಡಾವಣೆಯಲ್ಲಿ ಕಟ್ಟಿಗೆ ಕಳ್ಳತನ ಮಾಡಿ ಒಂದಡೆ ಸಂಗ್ರಹಿಸಿ, ಕಾಮದಹನ ಮಾಡಿ ಗೆಳೆಯರನ್ನು ಸತ್ತ ಹೆಣದಂತೆ ಅಣುಕು ಪ್ರದರ್ಶನ ಮಾಡುವುದು-ಮುಂತಾದ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಕಾಮ-ರತಿಯರ ಮೂರ್ತಿಗಳ ಮೆರವಣಿಗೆಯೂ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.