ಭಾವನೆಗಳ ಸಾರವೇ ಜಾನಪದ ಸಾಹಿತ್ಯ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮಾ. 29
ಜಾನಪದ ಸಾಹಿತ್ಯ ಸಾಗರವಿದ್ದಂತೆ. ಜನಪದರ ಅಮೂಲ್ಯವಾದ ಅನುಭವ ಮತ್ತು ಭಾವನೆಗಳ ಸಾರವೇ ಜಾನಪದ ಸಾಹಿತ್ಯವಾಗಿದೆ ಎಂದು ಸಾಹಿತಿ, ಶಿಕ್ಷಕ ಸಿ.ಜಿ. ಹಿರೇಮಠ ಅಭಿಪ್ರಾಯ ಪಟ್ಟರು.
ಅವರು ಮಂಗಳವಾರ ಪಟ್ಟಣದ ಬಾಪೂಜಿ ಐಟಿಐ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಜನರು ತಮ್ಮ ದುಃಖ- ದುಮ್ಮಾನಗಳನ್ನು, ಸುಖ- ಸಂತೋಷಗಳನ್ನು ಬೇರೆಯವರಿಗೆ ಹಾಡಿನ ಮೂಲಕ ಇಲ್ಲವೇ ಕಥೆಗಳ ಮೂಲಕ ಹೇಳುವ ಸಾಹಿತ್ಯ ಜಾನಪದ ಸಾಹಿತ್ಯವಾಗಿದೆ. ಹೀಗೆ ಇಂದಿನ ಎಲ್ಲ ರೀತಿಯ ಸಾಹಿತ್ಯಕ್ಕೆ ಮೂಲ ಪ್ರೇರಣಾ ಶಕ್ತಿಯಾಗಿರುವುದು ಜಾನಪದ ಸಾಹಿತ್ಯ. ಜಾನಪದ ಸಾಹಿತ್ಯವು ನಿಂತ ನೀರಾಗಿರದೇ ಸದಾ ಹರಿಯುವ ತೊರೆಯಾಗಿ ಹೊಸ ತನವನ್ನು ಹುಟ್ಟು ಹಾಕುತ್ತ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತ ಸಾಗಿರುವುದು ನಿಜಕ್ಕೂ ವಿಸ್ಮಯದ ಸಂಗತಿಯಾಗಿದೆ ಎಂದರು.
ಉಪನ್ಯಾಸಕ ವಸಂತರಾವ್ ಜೋಶಿ ಅವರು ಜಿ.ಎಫ್.ಉಪನಾಳ ಕುರಿತು ಉಪನ್ಯಾಸ ನೀಡಿ, ಜನಸಾಮಾನ್ಯರ ನೋವನ್ನು ತನ್ನ ನೋವೆಂದು ಬಗೆದು ಅವರ ಬದುಕಿಗೆ ಆಸರೆಯಾಗುವ ಅಪರೂಪದ ವ್ಯಕ್ತಿತ್ವ ಗೂಳಪ್ಪ ಉಪನಾಳ ಅವರದಾಗಿತ್ತು. ಅನಕ್ಷರಸ್ಥರಾಗಿದ್ದು ಶಿರಹಟ್ಟಿ ತಾಲೂಕಿಗೆ ಅದರಲ್ಲೂ ಲಕ್ಷ್ಮೇಶ್ವರದ ಅಭಿವೃದ್ಧಿಗೆ ಅಮೋಘ ಕಾಣಿಕೆ ನೀಡಿದವರಲ್ಲಿ ಗೂಳಪ್ಪ ಉಪನಾಳ ಅಗ್ರಗಣ್ಯರಾಗಿದ್ದಾರೆ ಎಂದರು.
ಉದ್ಘಾಟನೆ ನೆರವೇರಿಸಿದ ದೇವಣ್ಣ ಬಳಿಗಾರ ಮಾತನಾಡಿ, ಮಾಜಿ ಶಾಸಕ ದಿ. ಗೂಳಪ್ಪ ಉಪನಾಳ ನಮ್ಮಂತ ಯುವಕರಿಗೆ ಮಾರ್ಗದರ್ಶಕರಾಗಿದ್ದರು. ಅವರ ಪ್ರಯತ್ನದ ಫಲವಾಗಿ ಲಕ್ಷ್ಮೇಶ್ವರದಲ್ಲಿ ಅನೇಕ ಕೈಗಾರಿಕೆ ಬೆಳೆಯಲು ಸಹಾಯವಾಯಿತು ಎಂದರು. ಇದೇ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕಾ ಕಸಾಪ ಅಧ್ಯಕ್ಷ ಕೆ.ಎ.ಬಳಿಗೇರ ಹಾಗೂ ಬಾಪೂಜಿ ಐಟಿಐ ಕಾಲೇಜಿನ ಪ್ರಾಚಾರ್ಯ ಕೆ.ನಾಗರಾಜಪ್ಪ, ತಾಲೂಕು ಗೌರವ ಕಾರ್ಯದರ್ಶಿ ಅಶೋಕ ಸೊರಟೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಉಪನಾಳ ಮತ್ತು ಕಾಲೇಜಿನ ಉಪನ್ಯಾಸಕ ವರ್ಗ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

