ಎಸ್,ಬಿಐನಿಂದ ಗ್ರಾಹಕರಿಗೆ ಉತ್ತಮ ಸೌಲಭ್ಯ: ಆನಂದ್
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 29
ಮಳೆ ಕೊರತೆ ಹಾಗೂ ವಿದ್ಯುತ್ ಅಭಾವದ ಮಧ್ಯೆಯೂ ಮುಂಡರಗಿ ತಾಲೂಕಿನಂತಹ ಪ್ರದೇಶದಲ್ಲಿ ಎಸ್,ಬಿಐ ಗ್ರಾಹಕರಿಗೆ ಉತ್ತಮ ಸೌಲಭ್ಯ ಒದಗಿಸುತ್ತಿದೆ ಎಂದು ಗಂಗಾಪುರ ವಿಜಯನಗರ ಷುಗರ್ಸ್ ಎಂ.ಡಿ. ಆನಂದ ರಡ್ಡಿ ಹೇಳಿದರು.
ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ 5 ವಾರ್ಷಿಕೋತ್ಸವ, ಸಣ್ಣ ಮತ್ತು ಮಧ್ಯಮ ಉದ್ಯಮ ಗ್ರಾಹಕರ ಸಮಾವೇಶವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದೊಡ್ಡ ದೊಡ್ಡ ವ್ಯಾಪಾರ-ವಹಿವಾಟುಗಳನ್ನು ನಡೆಸಲು ಬ್ಯಾಂಕ್,ಗಳ ಪಾತ್ರ ಪ್ರಮುಖವಾಗಿದೆ. ಅನೇಕ ವ್ಯವಹಾರಗಳಿಗೆ ಬ್ಯಾಂಕ್ ನೆರವಾಗುತ್ತಿವೆ. ಗ್ರಾಹಕರಿಗಾಗಿ ಹಲವು ರೀತಿಯ ಯೋಜನೆಗಳನ್ನು ಎಸ್,ಬಿಐ ನೀಡಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಸ್,ಬಿಐ ಅಗ್ರ ಸ್ಥಾನದಲ್ಲಿದೆ ಎಂದರು.
ಮುಂಡರಗಿ ಎಸ್,ಬಿಐ ವ್ಯವಸ್ಥಾಪಕ ಶಿವಲಿಂಗಯ್ಯ ಮಾತನಾಡಿ, 5 ವರ್ಷದಲ್ಲಿ ಬ್ಯಾಂಕ್ ರು. 96 ಕೋಟಿಗಳನ್ನು ಸಾಲದ ರೂಪದಲ್ಲಿ ನೀಡಲಾಗಿದ್ದು, ವ್ಯವಸಾಯದ ಕ್ಷೇತ್ರಕ್ಕೆ ರು. 25 ಕೋಟಿ, ವಿವಿಧ ರೀತಿಯ ಉದ್ಯೋಗ ಕೈಗೊಳ್ಳುವವರಿಗೆ ರು. 65 ಕೋಟಿ, ಗೃಹ ಸಾಲ ಯೋಜನೆಯ ಅಡಿ ರು. 4 ಕೋಟಿ, ವಾಹನ, ಇತರ ಖರೀದಿಗಾಗಿ ರು. 70 ಲಕ್ಷ ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಬ್ಯಾಂಕ್,ನಿಂದ 2 ಸರ್ಕಾರಿ ಶಾಲೆಗಳಿಗೆ ಸೀಲಿಂಗ್ ಫ್ಯಾನ್, 13 ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ನೀಡಲಾಗಿದೆ. 3 ಬಡ ಹೆಣ್ಣು ಮಕ್ಕಳಿಗೆ ಎಸ್,ಎಸ್,ಎಲ್,ಸಿ ವರೆಗೆ ಶಿಕ್ಷಣ ಕೊಡಿಸಲು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಸೇವೆ ಮಾಡಲು ತಾಲೂಕಿನ ಜನತೆ ಇದೇ ರೀತಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್,ನ ಹಿರಿಯ ವ್ಯವಸ್ಥಾಪಕ ಕೃಷ್ಣಮೂರ್ತಿ ಗ್ರಾಹಕರೊಂದಿಗೆ ಸಂವಾದ ನಡೆಸಿದರು. ಅತಿ ಹೆಚ್ಚು ವ್ಯವಹಾರ ಮಾಡಿದ ಗ್ರಾಹಕರನ್ನು ಸನ್ಮಾನಿಸಲಾಯಿತು.
ವಸಂತಕುಮಾರ, ವಿಜಯಕುಮಾರ, ಕೆ. ಧರ್ಮೇಂದ್ರ, ಚಂದನ್, ರತನ್,ಕುಮಾರ, ನಾರಾಯಣಪ್ಪ ಇಲ್ಲೂರ, ಕರಬಸಪ್ಪ ಹಂಚಿನಾಳ, ರಮೇಶ ಭೂಮರಡ್ಡಿ, ಈಶ್ವರಪ್ಪ ಹಂಚಿನಾಳ, ಕೊಟ್ರೇಶ ಅಂಗಡಿ, ಎಸ್.ವಿ. ಪಾಟೀಲ್, ಡಾ. ಅನ್ನದಾನಿ ಮೇಟಿ, ಅಂದಪ್ಪ ಗೋಡಿ, ರಾಮಸ್ವಾಮಿ ಹೆಗ್ಗಡಾಳ, ರವಿಶಂಕರ ಹೆಬ್ಬಾಳ ಮುಂತಾದವರು ಉಪಸ್ಥಿತರಿದ್ದರು. ವರದರಾಜು ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

