ಏ. 7ರಂದು ಸ್ಲಂ ಜನರ ಬೃಹತ್ ಸಮಾವೇಶ
ಗದಗ: ಜನಪ್ರತಿನಿಧಿಗಳು ನೀಡುವ ಸುಳ್ಳು ಆಶ್ವಾಸನೆಗಳ ಕುತಂತ್ರವನ್ನು ಸ್ಲಂ ಜನರಿಗೆ ತಿಳಿಸುವ ಉದ್ದೇಶದಿಂದ ಏ. 7ರಂದು ನಗರದಲ್ಲಿ ಸ್ಲಂ ಜನರ ಬೃಹತ್ ಸಮಾವೇಶವನ್ನು ನಡೆಸಲಾಗುವುದು ಎಂದು ಸ್ಲಂ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ ಹೇಳಿದರು.
ಈಚೆಗೆ ಅವರು ನಗರದ ನಗರಸಭೆಯ ಉದ್ಯಾನದಲ್ಲಿ ಗದಗ ಜಿಲ್ಲಾ ಕೊಳಚೆ ಹಿತರಕ್ಷಣಾ ಸಮಿತಿಯ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಚುನಾವಣೆ ವೇಳೆಯಲ್ಲಿ ಸ್ಲಂ ಜನರಿಗೆ ಜನಪ್ರತಿನಿಧಿಗಳು ನೂರಾರು ಸುಳ್ಳು ಭರವಸೆಗಳನ್ನು ನೀಡಿ ಅದರಲ್ಲಿ ಯಾವುದೇ ಒಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೇ ಬಡಜನರ ವಿರೋಧಿ ಯೋಜನೆಗಳಿಗೆ ಮಹತ್ವ ನೀಡುತ್ತಿರುವುದನ್ನು ಗಮನಿಸಿ ಇವರ ಕುತಂತ್ರ ಸಾರ್ವಜನಿಕರಿಗೆ ತಿಳಿಸುವುದೇ ಈ ಸಮಾವೇಶದ ಉದ್ದೇಶವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಯಂತರ ಅನುದಾನ ನಗರಕ್ಕೆ ಬಂದರೂ ಕಳೆದ 5 ವರ್ಷದಲ್ಲಿ ಇದ್ದ ಜನಪ್ರತಿನಿಧಿಗಳು ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಯಾವುದೇ ಅನುದಾನ ನೀಡದೇ ನಗರದಲ್ಲಿ ವಾಸಿಸುವ ಸ್ಲಂ ನಿವಾಸಿಗಳಿಗೆ ಮೋಸ ಮಾಡಿದ್ದಾರೆ. ಹಾಗಾಗಿ ಸ್ಲಂ ಜನರಿಗೆ ಇವರ ದುರಾಡಳಿತ ಬಗ್ಗೆ ಜನಜಾಗೃತಿ ಮೂಡಿಸಲು ಸಮಾವೇಶ ನಡೆಸಲಾಗುತ್ತಿದೆ. ಸಮಾವೇಶದಲ್ಲಿ ಸಾವಿರಾರು ಸ್ಲಂ ನಿವಾಸಿಗಳು ಭಾಗವಹಿಸಲಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಮುಖಂಡ ಬಸವರಾಜ ಯಡ್ಡವಣ್ಣವರ ಮಾತನಾಡಿ, ಕಾರ್ಯಕ್ರಮದ ಪೂರ್ವಭಾವಿಯಾಗಿ ನಗರದ ಎಲ್ಲ ಸ್ಲಂಗಳಲ್ಲಿ ಚುನಾವಣೆಯ ಜಾಗೃತಿಗಾಗಿ ಮತ್ತು ಸ್ಲಂ ಜನರಿಗೆ ಸಮಾವೇಶ ಕುರಿತು ಅರಿವು ಮೂಡಿಸುವ ಮತ್ತು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಲಂ ಜನರು ಸೇರಲು ಆಯಾ ಸ್ಲಂ ಪ್ರದೇಶಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗುವುದು ಎಂದರು.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಯಲ್ಲಪ್ಪ ರಾಮಗಿರಿ, ಶರೀಫ ಬಿಳೆಯಲಿ, ಮಹಿಳಾ ಸಮಿತಿಯ ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ಅಶೋಕ ಕುಸಬಿ, ಪರಶುರಾಮ ಕಾಳೆ, ಅಬುಬಕ್ಕರ ಮಕಾಂದಾರ, ಹೊನ್ನಪ್ಪ ಸಾಕಿ, ರುಣುಕಾ ಆಡಿನ, ರಸೂಲಸಾಬ ಮುಳಗುಂದ, ರವಿಕುಮಾರ ಬೆಳಮಕರ, ಹನುಮಂತ ಕಿರಟಗೇರಿ, ಅನಿಲ ಕಾಳೆ, ರಾಜು ಕಣಗಿಹಾಳ, ಮಮ್ತಾಜಬೇಗಂ ಮಕಾಂದಾರ, ಕಮಲವ್ವ ಬಿದರೂರ, ರಮೇಶ, ರಾಜಾಸಾಬ ಮಲಬಾರ ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳು, ಶಾಖೆಯ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿ ಪದಾಧಿಕಾರಿಗಳು, ಸ್ಲಂ ಯುವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

