ಗದಗ

ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ

Published On :

ಗಜೇಂದ್ರಗಡ: ಬೆಣಸಮಟ್ಟಿ ಗ್ರಾಮದಲ್ಲಿ ನಕಲಿ ಮದ್ಯ ಮಾರಾಟ ಅವ್ಯಾಹತವಾಗಿದ್ದರೂ ಕಡಿವಾಣ ಹಾಕುವಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಶನಿವಾರ ಕುಂಟೋಜಿ ಗ್ರಾಪಂ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹಲವಾರು ತಿಂಗಳಿಂದ ಬೆಣಸಮಟ್ಟಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಕುರಿತು ಅಬಕಾರಿ ಇಲಾಖೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಇದರಲ್ಲಿ ಅಬಕಾರಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಮದ್ಯದ ಹಾವಳಿಯಿಂದ ಪುರುಷರು ಕೃಷಿ ಚಟುವಟಿಕೆ ಕೈಬಿಟ್ಟು ಕುಡಿತದ ದಾಸರಾಗಿ ನಿತ್ಯ ಜಗಳವಾಡುತ್ತಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ನಕಲಿ ಮದ್ಯದಿಂದಾಗಿ ರೋಗಪೀಡಿತರೂ ಆಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಹಿಂದೊಮ್ಮೆ ಗ್ರಾಮಸ್ಥರೇ ನಕಲಿ ಮದ್ಯ ಮಾರಾಟ ಸ್ಥಗಿತಗೊಳಿಸಿದ್ದರು. ಈಗ ಮತ್ತೆ ಅಕ್ರಮ ಮದ್ಯ ವಹಿವಾಟು ಎಗ್ಗಿಲ್ಲದೆ ಸಾಗಿದೆ. ಅಬಕಾರಿ ಅಧಿಕಾರಿಗಳು ಹಣ ಪಡೆದು ದಂಧೆಗೆ ಸಹಕಾರ ನೀಡುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಬಿ. ಕಡಬಲಕಟ್ಟಿ ಅವರ ಮೂಲಕ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ತಾಪಂ ಮಾಜಿ ಸದಸ್ಯ ಕೇಶಪ್ಪ ಪೂಜಾರ, ಬಸಯ್ಯ ಹಿರೇಮಠ, ಕುಮಾರ ರಾಠೋಡ, ಶೇಖಪ್ಪ ಪೂಜಾರ, ಪಂಪಣ್ಣ ರಾಠೋಡ, ಅರ್ಜುನ ರಾಠೋಡ, ಸಂಗನಗೌಡ ಪಾಟೀಲ, ಮಂಜುನಾಥ ಡೊಳ್ಳೀನ, ಮಹಾಂತೇಶ ಪೂಜಾರ, ಶರಣಪ್ಪ ಪೂಜಾರ, ರವಿ ಪೂಜಾರ, ದೇವೇಂದ್ರ ಡೊಳ್ಳಿನ, ಕುಮಾರ ಪೂಜಾರ, ಕೃಷ್ಣಪ್ಪ ಪೂಜಾರ, ಪರಶುರಾಮ ರಾಠೋಡ, ಲಕ್ಷ್ಮವ್ವ ಗಡಾದ, ಸುಶೀಲವ್ವ ಡೊಳ್ಳಿನ, ಲಕ್ಷ್ಮವ್ವ ಪೂಜಾರ, ದೇವವ್ವ ಪೂಜಾರ, ದ್ಯಾಮವ್ವ ಪಮ್ಮಾರ, ನೀಲವ್ವ ಡೊಳ್ಳಿನ, ಸುನಂದಾ ಪಾಟೀಲ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.