ಸುಸ್ಥಿರ ಬದುಕಿನತ್ತ ಮಹಿಳೆ ಹೆಜ್ಜೆ: ಪ್ರೊ. ಕವಿತಾ
ಕನ್ನಡಪ್ರಭ ವಾರ್ತೆ, ಗದಗ, ಮಾ. 30
ಮಹಿಳೆ ಸುಸ್ಥಿರವಾದ ಬದುಕಿನತ್ತ ದೃಢ ಹೆಜ್ಜೆಗಳನ್ನು ಹಾಕುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ತನ್ನಲ್ಲಿರುವ ಆತಸ್ಥೈರ್ಯ ಹಾಗೂ ಗಟ್ಟಿತನವನ್ನು ತೋರುತ್ತಿದ್ದಾಳೆ ಎಂದು ಪ್ರೊ ಕವಿತಾ ಕಾಶಪ್ಪನವರ ಅಭಿಪ್ರಾಯ ಪಟ್ಟರು.
ಶುಕ್ರವಾರ ಇಲ್ಲಿನ ಕಾಶೀ ಸಂಸ್ಕೃತ ಪಾಠಶಾಲಾ ಆವರಣದಲ್ಲಿ ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ದಿ. ವೀರಪ್ಪ ಪಟ್ಟಣಶೆಟ್ಟಿ ಹಾಗೂ ಫಕ್ಕೀರಮ್ಮ ದತ್ತಿ ಉಪನ್ಯಾಸ, ವಿಶ್ವಮಹಿಳಾ ದಿನಾಚರಣೆ, ಗೃಹಗೋಷ್ಠಿ ಹಾಗೂ ವಚನ ಗಾಯನ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಜಾಗತಿಕ ಮಟ್ಟದಲ್ಲಿ ಸ್ತ್ರೀಯರ ಸ್ಥಿತಿ-ಗತಿ ಕುರಿತು ಮಾತನಾಡಿದರು.
ಮಹಿಳೆಯ ಮಾನವೀಯ ಬದುಕಿಗೆ ಬಲ ತರುವಲ್ಲಿ ಸಹಭಾಗಿಗಳಾಗಿ ಪುರುಷ ಸಹಾಯ ನೀಡುತ್ತಿದ್ದಾನೆ. ಮನುಷ್ಯನ ಪ್ರಗತಿ ಹಾಗೂ ಸಾಧನೆಗಳ ಹಿಂದೆ ಮಹಿಳೆಯ ಶ್ರಮದ ಬೆಲೆ ಬಹಳಷ್ಟಿದೆ. ಸಾಮಾಜಿಕ ಬದಲಾವಣೆಗಳು ಹೆಣ್ಣಿನ ಜೀವನದಲ್ಲಿ ಮಹತ್ತರ ನಿಲುವುಗಳನ್ನು ತಂದೊಡ್ಡಿವೆ ಎಂದರು.
ಉದ್ಘಾಟನೆ ನೆರವೇರಿಸಿದ ಅಂದಾನೆಪ್ಪ ಪಟ್ಟಣಶೆಟ್ಟಿ, ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಶಿವಣ್ಣ ಕುರಿ ಮಾತನಾಡಿದರು. ಕಾಶೀ ಸಂಸ್ಕೃತ ಪಾಠಶಾಲೆಯ ವ್ಯವಸ್ಥಾಪಕ ಬೆಟದಯ್ಯ ಹಿರೇಮಠ, ಗದಗ ತಾಲೂಕು ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ ಹಾಗೂ ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕು ಕಸಾಪ ಅಧ್ಯಕ್ಷ ಪ್ರೊ ಕಿಶೋರಬಾಬು ನಾಗರಕಟ್ಟಿ, ಅನ್ನಪೂರ್ಣಾ ಗಡಾದ ಮಾತನಾಡಿದರು. ಅಂದಾನೆಪ್ಪ ಪಟ್ಟಣಶೆಟ್ಟಿ, ಪ್ರೊ ಕವಿತಾ ಕಾಶಪ್ಪನವರ, ಬೆಟದಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಶಿವಲೀಲಾ ಕರಡ್ಡಿ, ಸಾವಿತ್ರಿ ಹಿರೇಮಠ, ಲೀಲಾವತಿ ಮಾಮರ, ರತ್ನಾ ಪಟ್ಟಣಶೆಟ್ಟಿ, ಸತ್ಯಭಾಮಾ ಕಡಬಿನ, ಪುಷ್ಪಾ ಕುಸಮ್ಮನವರ, ಸಂಗಮ್ಮ ಹಿರೇಮಠ, ಪ್ರತಿಭಾ, ಲಲಿತಾ ದೇಸಾಯಿ, ಕಾವ್ಯಾ ಹಿರೇಮಠ, ಶೀಲಾ ಹಾಸರಡ್ಡಿ, ಪುಷ್ಪಾ ಮಲ್ಲನಗೌಡ್ರ, ಪ್ರೇಮಾ ಕಲ್ಲೇರಿ, ಶಕುಂತಲಾ ಬೇಲೇರಿ, ದ್ರಾಕ್ಷಾಯಿಣಿ ಬೂದಿಹಾಳ, ಶಶಿಕಲಾ ಲಕ್ಕನಗೌಡ್ರ, ಮಂಜುನಾಥ ಬೇಲೇರಿ, ಶಿವಯೋಗಿ ಹಿರೇಮಠ, ಎಲ್.ಪಿ. ಕಂಬಿ, ಡಾ ಅಶೋಕ ಮತ್ತಿಗಟ್ಟಿ ಇತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶಶಿಕಾಂತ ಕೋರ್ಲಹಳ್ಳಿ ಸ್ವಾಗತಿಸಿದರು. ಕವಿತಾ ದಂಡಿನ ನಿರೂಪಿಸಿದರು. ಖಜಾಂಚಿ ಬಿ.ಜಿ. ಹಿರೇಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

