ಗದಗ

ಕಲೆ ಆತ್ಮಾನಂದ ನೀಡುವ ಮಾಧ್ಯಮ: ಪ್ರಾಚಾರ್ಯ ಎಲ್.ಎಂ. ಗುಳೇದಗುಡ್ಡ

Published On :

ಗದಗ: ಕಲೆ ಆತ್ಮಾನಂದವನ್ನು ನೀಡುವ ಮಾಧ್ಯಮ. ಆ ಕಲೆಗಳಲ್ಲಿ ಬಣ್ಣಗಳ ಚೆಲ್ಲಾಟ, ರೇಖೆಗಳ ಹಾರಾಟಗಳಿಂದ ಕಲೆ ಅಭಿವ್ಯಕ್ತಿಯಾಗುತ್ತದೆ. ಬಣ್ಣ ಎಲ್ಲ ರಂಗದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಬಣ್ಣವಿಲ್ಲದೇ ಲೋಕವಿಲ್ಲ ಎಂದು ಎಎಸ್‌ಎಸ್ ಕಾಮರ್ಸ್ ಕಾಲೇಜಿನ ಪ್ರಾಚಾರ್ಯ ಎಲ್.ಎಂ. ಗುಳೇದಗುಡ್ಡ ಹೇಳಿದರು.
ಈಚೆಗೆ ಸ್ಥಳೀಯ ವಿಜಯ ಲಲಿತಕಲಾ ಮಹಾವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಲಾವಿದ ದಿ. ವಿ.ಬಿ. ಹಿರೇಗೌಡ್ರ ಹಾಗೂ ಎನ್. ಮರಿಶಾಮಾಚಾರ್ ಸ್ಮರಣಾರ್ಥ ಹಮ್ಮಿಕೊಂಡ ಹಂಪಿ ಆರ್ಟ ಸ್ಟ್ರೋಕ್ ಕಲಾ ಪ್ರದರ್ಶನದಲ್ಲಿ ಮಾತನಾಡಿದರು.
ದಾವಣಗೇರಿಯ ಕಲಾ ಶಾಲೆಯ ಉಪನ್ಯಾಸಕ ಡಾ. ಎಂ.ಕೆ. ಗಿರೀಶಕುಮಾರ, ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕ ಅಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಹರ ಪೊಲೀಸ್ ಠಾಣೆ ಪಿಎಸ್‌ಐ ಮಹಾಂತೇಶ ಟಿ. ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆ.ವಿ. ಕುಂದಗೋಳ, ಡಾ. ಬಿ.ಎಲ್. ಚವ್ಹಾಣ, ಪ್ರೇಮಾ ಹಿರೇಮಠ, ಕವಿತಾ ದಂಡಿನ, ಆರ್.ವಿ. ಹೆಗಡೆ, ವಿ.ವೈ. ಬಡಿಗೇರ, ವಿಲ್ಸನ್ ಎಸ್.ಎಸ್, ಆರ್.ಡಿ. ಕಡ್ಲಿಕೊಪ್ಪ, ಕೃಷ್ಣಾ ಕೆ.ಎಂ, ವಿ.ಎಫ್. ಕುಂದ್ರಳ್ಳಿ ಇನ್ನಿತರರು ಪಾಲ್ಗೊಂಡಿದ್ದರು. ಬಸವರಾಜ ನೀಲಜೇರಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.