ಗದಗ

ಕೋಟುಮಚಗಿ: ಇಂದು ಜೋಡೆತ್ತಿನ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 18
ತಾಲೂಕಿನ ಕೋಟುಮಚಗಿ ಗ್ರಾಮದ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸದ ಅಂಗವಾಗಿ ಮೇ 19ರ ಬೆಳಗ್ಗೆ 8ಕ್ಕೆ ಉತ್ತರ ಕರ್ನಾಟದಲ್ಲಿಯೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಜೋಡೆತ್ತಿನ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂನ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಹೇಳಿದರು.
ಅವರು ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇ 20ರಂದು ನಡೆವ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಲವು ವಿಧಾಯಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಜನಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ರಸಮಂಜರಿ ಕಾರ್ಯಕ್ರಮ, ಗೀಗೀ ಪದ ಹಾಗೂ ಧರ್ಮ ಸಭೆಗಳನ್ನು ನಡೆಸುತ್ತ ಆಚರಿಸಲಾಗುತ್ತಿದೆ. ಇಂದಿನ ಆಧುನಿಕ, ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳ ಭರಾಟೆಯಲ್ಲಿ ರೈತರು ತಮ್ಮ ಮೂಲ ಉದ್ಯೋಗ ಕೃಷಿ ಹಾಗೂ ಕೃಷಿ ಚಟುವಟಿಕೆ ಮರೆಯುತ್ತಿದ್ದಾರೆ. ಗ್ರಾಮೀಣ ಕಲೆ, ಸಂಸ್ಕೃತಿ, ಕ್ರೀಡೆ, ಕೋಮು ಸೌಹಾರ್ದತೆ, ಸಾವಯವ ಕೃಷಿ, ಹಿರಿಯರ ಸಂಪ್ರದಾಯ ಕಡೆಗಣಿಸುವತ್ತ ಸಾಗಿದೆ. ಗ್ರಾಮೀಣ ಸೊಗಡು ಅಳಿವಿನ ಅಂಚಿನಿಂದ ಹೊರ ಬಂದು ಅದಕ್ಕೆ ಹೊಸರೂಪ ನೀಡಿ ಗ್ರಾಮೀಣ ಕಲೆ, ಕ್ರೀಡೆ, ರೈತರ ಸ್ಪರ್ಧೆಗಳನ್ನು ಉತ್ತೇಜಿಸಿ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಾರಿ ಗ್ರಾಮಸ್ಥರು ಹಾಗೂ ಸೋಮೇಶ್ವರ ಗೆಳೆಯರ ಬಳಗ ಹಾಗೂ ಯುವಕ ಮಂಡಳಗಳು, ಭಜನಾ ಸಂಘಗಳು, ಮುಖಂಡರು ಸಭೆ ಸೇರಿ ಎಲ್ಲರ ಸಹಕಾರದೊಂದಿಗೆ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವದ ಮುನ್ನಾ ದಿನ ಮೇ 19ರಂದು ರಾಜ್ಯ ಮಟ್ಟದ ಜೋಡೆತ್ತಿನ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಗದಗ ಜಿಲ್ಲೆ ಸೇರಿದಂತೆ ಧಾರವಾಡ, ಬೆಳಗಾವಿ, ಕೊಪ್ಪಳ, ಗುಲ್ಬರ್ಗಾ, ಹಾವೇರಿ, ರಾಯಚೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತ ಬಾಂಧವರು ತಮ್ಮ ವಿವಿಧ ತಳಿಗಳ ಎತ್ತುಗಳ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 10 ಗ್ರಾಂ ಚಿನ್ನ, ರು. 10 ಸಾವಿರ, ದ್ವಿತೀಯ ಬಹುಮಾನ 5 ಗ್ರಾಂ ಚಿನ್ನ, ರು. 5 ಸಾವಿರ, ತೃತೀಯ ಬಹುಮಾನ 5 ಗ್ರಾಂ ಚಿನ್ನ, 4ನೇ ಬಹುಮಾನ 2.5 ಗ್ರಾಂ ಚಿನ್ನ ರು. 2500, 5ನೇ ಬಹುಮಾನ 10 ತೊಲೆ ಬೆಳ್ಳಿ ಕಡೇವು, 6ನೇ ಬಹುಮಾನ 5 ತೊಲೆ ಬೆಳ್ಳಿ ಕಡೇವು, 7ನೇ ಬಹುಮಾನ ಒಂದು ಜತೆ ಜೂಲ, 8ನೇ ಬಹುಮಾನ ಒಂದು ಜೊತೆ ಗೆಜ್ಜೆ ಸರ, 9ನೇ ಬಹುಮಾನ 1 ಜತೆ ಹಿತ್ತಾಳೆ ಸರಪಳಿ ಬಹುಮಾನ ಒಳಗೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ಹೆಸರು ನೋಂದಾಯಿಸಲು ಹಾಗೂ ಮಾಹಿತಿಗಾಗಿ 9739695405, 9620627855, 9916654622, 9742186922 ಇಲ್ಲಿಗೆ ಸಂಪರ್ಕಿಸುವಂತೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.