17ರಂದು ಬೆಂಗಳೂರಿನಲ್ಲಿ ಮೋದಿ ಸಮಾವೇಶ: ಟಿಕೆಟ್ ವಿತರಣೆ
ಗದಗ: ಬೆಂಗಳೂರಿನಲ್ಲಿ ನ. 17 ರಂದು ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಸಮಾವೇಶಕ್ಕೆ ಭಾಗವಹಿಸಲು ಪ್ರತಿನಿಧಿ ಟಿಕೆಟ್ ನೀಡುವ ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಸ್ಲಂ ಮೋರ್ಚಾ ವತಿಯಿಂದ ಬೆಟಗೇರಿ ಬಸ್ ನಿಲ್ದಾಣದ ಹತ್ತಿರ ಬುಧವಾರ ಆಯೋಜಿಸಲಾಗಿತ್ತು.
ಜಿಲ್ಲಾ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಅರವಿಂದ ಹುಲ್ಲೂರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ಭಾರತದಲ್ಲಿಯೇ ಗುಜರಾತ ರಾಜ್ಯವು ಅಭಿವೃದ್ಧಿ ಹೊಂದಿ ಪ್ರಸಿದ್ಧಿಯಾಗಿದೆ. ಈ ರಾಜ್ಯದ ಸಿಎಂ ನರೇಂದ್ರ ಮೋದಿಯವರನ್ನೇ ಬಿಜೆಪಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ. ಬ್ರಹ್ಮಚಾರಿಯಾದ ನರೇಂದ್ರ ಮೋದಿಯವರು ಪ್ರಧಾನಿಯಾದರೆ ಕಾಂಗ್ರೆಸ್ ವಂಶಾಡಳಿತ ಪರಂಪರೆಗೆ ತೆರೆಬಿದ್ದು ಹಾಗೂ ಗುಜರಾತದಂತೆ ದೇಶ ಅಭಿವೃದ್ಧಿಯತ್ತ ಸಾಗಬಲ್ಲದು. ನ. 17 ರಂದು ಬೆಂಗಳೂರಿನಲ್ಲಿ ನಡೆಯುವ ಭಾರತ ಗೆಲ್ಲಿಸಿ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸಲು ಎಲ್ಲ ಬಿಜೆಪಿ ಕಾರ್ಯಕರ್ತರು ಸಮಾವೇಶಕ್ಕೆ ಬರಬೇಕು ಎಂದು ಕರೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ ಮಾತನಾಡಿ, ಈ ದೇಶವನ್ನು ಶಕ್ತಿಶಾಲಿಯನ್ನಾಗಿ ಮಾಡಲು, ಅಭಿವೃದ್ಧಿ ಪಡಿಸಲು ನರೇಂದ್ರ ಮೋದಿ ಅವರೊಬ್ಬರಿಂದಲೇ ಸಾಧ್ಯ ಎಂದರು. ಸಭೆಯಲ್ಲಿ ನೆರೆದಿದ್ದ ಕಾರ್ಯಕರ್ತರು ತಮ್ಮ ಹೆಸರನ್ನು ನೊಂದಣಿ ಮಾಡಿ, ಭಾರತ ಗೆಲ್ಲಿಸಿ ಸಮಾವೇಶದ ಟಿಕೆಟ್ನ್ನು ಪಡೆದರು.
ಅಧ್ಯಕ್ಷತೆ ವಹಿಸಿದ್ದ ಅರವಿಂದ ಹುಲ್ಲೂರ ಮಾತನಾಡಿ, ಪ್ರತಿಯೊಬ್ಬ ಮತದಾರರು ನರೇಂದ್ರ ಮೋದಿಗೆ ಮತ ನೀಡಲು ಸಂಕಲ್ಪಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದಶರತರಾಜ ಕೊಳ್ಳಿ, ಶಿವಾಜಿ ಕಾಂಬಳೇಕರ, ಮಹೇಶ ಕೋಟಿ, ಶಹರ ರೈತ ಮೋರ್ಚಾ ಅಧ್ಯಕ್ಷ ಪಿ.ಡಿ. ಪರಕಾಳೆ, ನಿಂಗಪ್ಪಾ ಮಣ್ಣೂರ, ಅಲ್ಪಸಂಖ್ಯಾತರ ಅಧ್ಯಕ್ಷ ಗೈಬುಸಾಬ ಕಲೆಬಾವಿ, ಶಹರ ಉಪಾಧ್ಯಕ್ಷ ಸುದರ್ಶನ ಹಾನಗಲ್ಲ, ರತ್ನವ್ವ ದಾಸರ, ಶರಣಪ್ಪ ಚುರ್ಚಪ್ಪನವರ, ಅಶೋಕ ಮುಳಗುಂದ, ದೇವೆಂದ್ರ ಗೋಟುರ, ವೆಂಕಟೇಶ ಮಳೇಕರ, ವಿಜಯ ಕಲಾಲ, ಕುಮಾರ ಗದಗ, ಶ್ರೀಕಾಂತ ದೇಸಾಯಿ, ಯಲ್ಲಪ್ಪ ಕಾಂಬಳೇಕರ, ಲಕ್ಷ್ಮಣ ಮಿಸ್ಕಿನ, ಸುಭಾಸ ಗಂಜಿ, ವೀರಭದ್ರ ಗಂಜಿ, ಮಾಲತೇಶ ಮಡಿವಾಳರ, ರಾಜು ಪಪ್ತಿ, ವಿರೂಪಾಕ್ಷಪ್ಪ ಇಂಡಿ, ದೇವಪ್ಪ ಮಡಿವಾಳರ, ಕಿಟ್ಟು ಚಲವಾದಿ, ರವಿ ಕೊಂಗತಿ ಮುಂತಾದವರು ಉಪಸ್ಥಿತರಿದ್ದರು. ಶ್ರೀನಿವಾಸ ಹುಬ್ಬಳ್ಳಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

