ಗದಗ

ಪುರಸಭೆ ಸದಸ್ಯತ್ವ ಹಣ ಬಡವರಿಗೆ ನೀಡುವೆ: ವಿಜಯಲಕ್ಷ್ಮೀ ಚಟ್ಟೇರ

Published On :

ಗಜೇಂದ್ರಗಡ: ಸ್ಥಳೀಯ 18ನೇ ವಾರ್ಡಿನ ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಚಟ್ಟೇರ ಅವರು ಸರ್ಕಾರ ಪುರಸಭೆ ಸದಸ್ಯರಿಗೆ ಪ್ರತಿ ತಿಂಗಳು ನೀಡುವ ಗೌರವಧನವನ್ನು ಜತೆಗೆ ಬಟ್ಟೆಯನ್ನು ತಮ್ಮ ವಾರ್ಡಿನ ಆರ್ಥಿಕವಾಗಿ ಹಿಂದುಳಿದ ಮೌಲಾಸಾಬ ಚೋರಗಸ್ತಿ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಚೆಟ್ಟೇರ ಮಾತನಾಡಿ, ನನ್ನನ್ನು ಗಜೇಂದ್ರಗಡ ಪುರಸಭೆಯ ಸದಸ್ಯೆಯನ್ನಾಗಿ ಆಯ್ಕೆಮಾಡಿ, ಪವಿತ್ರವಾದ ಸಾರ್ವಜನಿಕ ಸೇವೆ ಮಾಡುವ ಭಾಗ್ಯ ಒದಗಿಸಿದ ವಾರ್ಡಿನ ಮತದಾರರ ಸೇವೆಯನ್ನು ನಿಷ್ಕಲ್ಮಶ ಮನಸ್ಸಿನಿಂದ ಮಾಡಬೇಕೆಂಬ ಸಂಕಲ್ಪ ಹೊಂದಿದ್ದು, ಈ ನಿಟ್ಟಿನಲ್ಲಿ ನನ್ನ 5 ವರ್ಷದ ಸೇವಾವಧಿಯಲ್ಲಿ ಪ್ರತಿ ತಿಂಗಳು ಸರ್ಕಾರ ನೀಡುವ ಗೌರವಧನವನ್ನು ಬಡ ಕುಟುಂಬಗಳಿಗೆ ನೀಡುತ್ತೇನೆ. ಜತೆಗೆ ವಾರ್ಡಿನ ಸಮಗ್ರ ಅಭಿವೃದ್ಧಿ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ದೊರಕಿಸಿ ಅವರ ಶ್ರೆಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ದೀಪಾ ಗೋಯಲ್, ಅನಸಕ್ಕ ಬೂದಿಹಾಳ, ರಾಜೇಶ್ವರಿ ಕಳ್ಳಿಮಠ, ಮೇಘಾ ಮಳಗಿ, ಖಾಜೇಖಾನ ಗೊಲಗೇರಿ, ಶಿಲ್ಪಾ ತಳವಾರ, ದಾವಲವ್ವ ಬಾಗವಾನ, ಲಲಿತಾ ಮ್ಯಾಗೇರಿ, ಮುತ್ತಣ್ಣ ಚಟ್ಟೇರ, ಎಸ್.ಕೆ. ನಂದನಜವಳೇಕರ, ತುಳಜಪ್ಪ ಸುಳ್ಳದ, ಬುಡ್ನೇಸಾಬ ಗೊಡೇಕಾರ, ಸುಲೇಮಾನ ಮೋಮಿನ್, ಹುಚ್ಚುಸಾಬ್ ಹಿರೇಹಾಳ, ಶಂಕರ ಸವಣೂರ, ಮಂಜುನಾಥ, ತಳವಾರ, ಮುರ್ತುಜಾ ಚಾಮಲಾಪುರ, ಮರ್ಧನಸಾಬ್ ಆರಗಿದ್ದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.