ಗದಗ

ಖಾಸಗಿ ಶಿಕ್ಷಣ ಸಂಸ್ಥೆಗಳ ಮುಚ್ಚಲು ಸರ್ಕಾರ ಹುನ್ನಾರ: ಡಾ. ಬಸವರಾಜ

Published On :

ಗದಗ: ಪ್ರಸ್ತುತ ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರ ದಿನಕ್ಕೊಂದು ಗೊಂದಲಕಾರಿ ಆದೇಶ ಹೊರಡಿಸುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಚ್ಚುವ ಹುನ್ನಾರ ನಡೆಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಅಳಿವು ಉಳಿವಿಗಾಗಿ ಸಂಘಟಿತ ಹೋರಾಟವೊಂದೆ ದಾರಿ ಎಂದು ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಪ್ರಧಾನ ಕಾರ್ಯದರ್ಶಿ ಡಾ. ಬಸವರಾಜ ಧಾರವಾಡ ಹೇಳಿದರು.
ಅವರು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅತಿಥಿಗಳಾಗಿ ಮಾತನಾಡಿದರು.
ಪ್ರಾಥಮಿಕ ಹಂತದಿಂದ ಪಪೂ ಹಂತದ ವರೆಗೆ ಸಾಕಷ್ಟು ಗೊಂದಲಗಳು ಉಂಟಾಗಿವೆ. ನೂತನ ಪಠ್ಯಕ್ರಮ, ನಿರಂತರ ಮೌಲ್ಯಮಾಪನ, ಮೇಲಿಂದ ಮೇಲೆ ತರಬೇತಿಗಳು, ವಿವಿಧ ವಿಷಯಗಳ ಮೇಲೆ ಸಮೀಕ್ಷೆಗಳು ಹೀಗೆ ಸ್ಪಷ್ಟ ಗೊತ್ತು ಗುರಿ ಇಲ್ಲದೇ ಶೈಕ್ಷಣಿಕ ವ್ಯವಸ್ಥೆ ಸಾಗಿದ್ದು, ನಿತ್ಯ ಶಿಕ್ಷಕರು ಆತಂಕಕ್ಕೀಡಾಗಿ ಪಾಠ ಮಾಡುತ್ತಿದ್ದಾರೆ. ಜತೆಗೆ ಸರ್ಕಾರ ಶಿಕ್ಷಕರ ಹಾಗೂ ಮಕ್ಕಳ ವಿಷಯದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾತ್ರ ವಿಶೇಷ ಪ್ರಾತಿನಿಧ್ಯ ನೀಡುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕಡೆಗಣಿಸುತ್ತಿದೆ. ಭವಿಷ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಹೋರಾಡುವ ವಾತಾವರಣ ನಿರ್ಮಾಣವಾಗುತ್ತಿದೆ. ಜತೆಗೆ ಅನಿವಾರ್ಯ ಸಹ ಆಗಿದೆ ಎಂದರು.
ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಕೊಟಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎ.ಬಿ. ಭಜಂತ್ರಿ, ಆರ್.ಎಂ. ನಿಂಬನಗೌಡ್ರ, ಜೆ.ಟಿ. ನರಗುಂದ, ಎಸ್.ಎಂ. ಅಗಡಿ, ಎಸ್.ಐ.ಇಟಗಿ, ಮಲ್ಲಿಕಾರ್ಜುನ ಚಿನ್ನೂರ, ಪಾಂಡಪ್ಪ ದಾಸರ, ಎನ್.ಎಸ್. ಬಟ್ಟೂರ, ಎ.ಎಸ್. ಪಾಟೀಲ, ಎಂ.ಪಿ. ಕ್ಯಾಮನಗೌಡರ, ಆರ್.ವಿ. ಗೊಂಡಬಾಳ, ಬಿ.ಕೆ. ಜಿನಗಿ. ಜೆ.ಸಿ. ನರೇಗಲ್ಲಮಠ, ಎಸ್.ಬಿ. ಕರ್ಜಗಿ, ಎಚ್.ಜಿ.ದೇಸಾಯಿ, ಪಿ.ಕೆ. ಕುಬೇರ, ಜಿ.ವಿ. ಕೌಜಲಗಿ, ಎಂ.ಡಿ. ವಡವಿ, ಎಸ್.ಐ. ಹರಿಜನ, ಎಸ್.ವೈ. ಗೋಣೆಪ್ಪನವರ, ಎಚ್.ಐ. ಗಡಾದ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.