ಗಾಂಧೀಜಿಯವರ ಬದುಕು ಮಾದರಿ
ಗದಗ: ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯಂತೆ ಎಲ್ಲರೂ ಸರಳ, ಸಾತ್ವಿಕ ಜೀವನ ನಡೆಸಲು ಮುಂದಾಗುವಂತೆ ಹಿರಿಯ ಗಾಂಧಿವಾದಿ ಆರ್.ಕೆ. ಜಮಾದಾರ ಕರೆ ನೀಡಿದರು.
ಅವರು ವಾರ್ತಾ ಇಲಾಖೆ, ಗದಗ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಬುಧವಾರ ನಗರದ ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ಪಪೂ ಕಾಲೇಜಿನಲ್ಲಿ ಮಹಾತ್ಮಾಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಗಾಂಧೀಜಿ ವಿಚಾರಧಾರೆ, ವಿಚಾರ ಸಂಕಿರಣ ಉದ್ಘಾಟಿಸಿ, ವಾರ್ತಾ ಇಲಾಖೆ ಹೊರತಂದಿರುವ ವಿಶೇಷ ಸಂಚಿಕೆ, ಮಡಿಕೆ ಪತ್ರ ಹಾಗೂ ಗಾಂಧೀಜಿ ಸಾಕ್ಷ್ಯ ಚಿತ್ರದ ಸಿಡಿ ಬಿಡುಗಡೆ ಮಾಡಿ ಮಾತನಾಡಿದರು. ಗಾಂಧೀಜಿ ಅವರ ಸರಳ ಬದುಕು, ಸಾತ್ವಿಕ ಜೀವನ ಎಲ್ಲರಿಗೂ ಮಾದರಿಯಾಗಿದೆ. ಅಧಿಕಾರವನ್ನು ಇಷ್ಟಪಡದೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ದುಬಾರಿ ಜೀವನ ಶೈಲಿ ಅಳವಡಿಕೆಯಿಂದ ಜಗತ್ತಿನಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿದೆ. ಗಾಂಧೀಜಿ ತತ್ವಗಳ ಅಳವಡಿಕೆಯಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ಅಹಿಂಸೆ, ಸತ್ಯಾಗ್ರಹದ ಮಹಾ ಅಸ್ತ್ರಗಳನ್ನು ಬ್ರಿಟಿಷರ ಮೇಲೆ ಪ್ರಯೋಗಿಸುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಬಾಪೂಜಿ ಅವರು ಬದುಕಿನ ಎಲ್ಲ ವಿಚಾರಗಳ ಬಗ್ಗೆಯೂ ತಮ್ಮದೇ ತತ್ವಗಳನ್ನು ಮೈಗೂಡಿಸಿಕೊಂಡು, ಸಮಾಜಕ್ಕೆ ಅವರ ಜೀವನದ ಮೂಲಕವೇ ಸಂದೇಶ ಸಾರಿದರು.
ಗಾಂಧೀಜಿ ಗುಣ ಮೈಗೂಡಿಸಿಕೊಳ್ಳುವಲ್ಲಿ ಹಿರಿಯ ಗಾಂಧಿವಾದಿ ದಿ. ವೀರಪ್ಪ ಕೌತಾಳ ಅವರು ತಮಗೆ ಮಾರ್ಗದರ್ಶನ ನೀಡಿದರು ಎಂದು ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ, ವಿಶ್ವದ ಎಲ್ಲ ದೇಶಗಳು ಗಾಂಧೀಜಿಯವರನ್ನು ಸ್ಮರಿಸುತ್ತವೆ. ಅಂಚೆಚೀಟಿ, ಪ್ರತಿಮೆ, ಪುಸ್ತಕಗಳ ಮೂಲಕ ವಿಶ್ವದಾದ್ಯಂತ ಗಾಂಧಿ ತತ್ವಗಳು ಪ್ರಸಾರವಾಗುತ್ತಿವೆ. ದಿ. ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯೂ ಇಂದೇ ಆಗಿದ್ದು, ಶಾಸ್ತ್ರೀಜಿ ಅವರು ಸಮಯವನ್ನು ವ್ಯರ್ಥ ಮಾಡದ ರಾಜಕಾರಣಿಯಾಗಿದ್ದರು ಎಂದರು. ವಾರ್ತಾಧಿಕಾರಿ ಎಸ್. ಶಂಕರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಜಿ.ಎನ್. ಕುರ್ತಕೋಟಿ, ಬಿ.ವಿ. ಸಜ್ಜನರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

