ಗದಗ

ನಕಲಿ ಹತ್ತಿ ಬೀಜ: ರೈತರ ಪ್ರತಿಭಟನೆ

Published On :

 ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಅ. 2
ಮಹಿಕೋ ಕಂಪನಿಯ ಕನಕ ಬಿಟಿ ಹತ್ತಿ ಬೀಜಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಾರಿ ನಾವು ಬಿತ್ತನೆ ಮಾಡಿದ ಕನಕ ಬಿಟಿ ಹತ್ತಿ ಬೀಜಗಳು ನಕಲಿಯಾಗಿವೆ. ಕನಕ ಬಿಟಿ ಹತ್ತಿಯ ಗಿಡಗಳು ಆಳೆತ್ತರ ಬೆಳೆದಿದ್ದರೂ ಅವುಗಳಲ್ಲಿ ಒಂದು ಕಾಯಿ ಇಲ್ಲ. ಸಾವಿರಾರು ಹಣ ಖರ್ಚು ಮಾಡಿ ಬೆಳೆದ ಬೆಳೆಯು ಹಾಳಾಗಿ ಹೋಗಿದೆ ಎಂದು ಆರೋಪಿಸಿ ಸೋಮವಾರ ಹರದಗಟ್ಟಿ ಗ್ರಾಮದ ರೈತರು ಮಹಿಕೋ ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.
ಹರದಗಟ್ಟಿ ತಾಂಡಾ, ಉಂಡೆನಹಳ್ಳಿ, ದೊಡ್ಡೂರು, ಸುವರ್ಣಗಿರಿ ತಾಂಡಾ, ಲಕ್ಷ್ಮೇಶ್ವರ ಸೇರಿದಂತೆ ನೂರಾರು ಎಕರೆ ಭೂಮಿಯಲ್ಲಿ ಮಹಿಕೋ ಕಂಪನಿಯ ಕನಕ ಬಿಟಿ ಹತ್ತಿ ಬೀಜಗಳನ್ನು ನಾಟಿ ಮಾಡಲಾಗಿದೆ. ಆಳೆತ್ತರ ಬೆಳೆದ ಹತ್ತಿ ಬೆಳೆಯಲ್ಲಿ ಕಾಯಿಗಳು ಮಾತ್ರ ಕಾಣುತ್ತಿಲ್ಲ. ಇದು ರೈತರನ್ನು ಕಂಗೆಡಿಸಿದ್ದು, ಪ್ರತಿಭಟನೆಯ ಹಾದಿ ಹಿಡಿಯುವಂತೆ ಮಾಡಿದೆ ಎನ್ನುತ್ತಾರೆ ಗ್ರಾಮಸ್ಥರು. ಸಾವಿರಾರು ಹಣ  ಖರ್ಚು ಮಾಡಿ ಬೀಜ ಬಿತ್ತಿ, ಗೊಬ್ಬರ ಹಾಕಿ, ಕ್ರಿಮಿನಾಶಕ ಸಿಂಪರಣೆ ಮಾಡಿ ಕಾಲ ಕಾಲಕ್ಕೆ ಸೂಕ್ತ ಉಪಚಾರ ಮಾಡಿದ್ದರೂ ಗಿಡದಲ್ಲಿ ಒಂದು ಕಾಯಿ ಬಿಟ್ಟಿಲ್ಲ. ಅಲ್ಲದೆ ಗಿಡದಲ್ಲಿನ ಹೂವು, ಮೊಗ್ಗುಗಳು ಉದುರಿ ಹೋಗುತ್ತಿವೆ. ಇದರಿಂದ ರೈತರ ನೆಮ್ಮದಿಯು ಹಾಳಾಗಿ ಹೋಗಿದೆ. ಸರ್ಕಾರ ಈ ಕೂಡಲೆ ನಕಲಿ ಬೀಜ ಪೂರೈಸಿದ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು, ರೈತರಿಗೆ ಸೂಕ್ತ ನ್ಯಾಯ ಒದಗಿಸಿ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಸ್ವರೂಪದ ಹೋರಾಟವನ್ನು ಮಾಡಲಾಗುವುದು ಎಂದು ಹರದಗಟ್ಟಿ ಗ್ರಾಮದ ರೈತರಾದ ದೇವಪ್ಪ ಲಮಾಣಿ, ಬಸವಣ್ಣೆಪ್ಪ ನಂದೆಣ್ಣವರ, ನಾನಪ್ಪ ಲಮಾಣಿ, ಕೋಪಣ್ಣ ನಾಯಕ, ತೇಜಪ್ಪ ಲಮಾಣಿ, ಕೃಷ್ಣಾ ಲಮಾಣಿ, ದೇವಪ್ಪ ಲಮಾಣಿ, ಕಾಳಪ್ಪ ಲಮಾಣಿ, ಪರಸಪ್ಪ ಲಮಾಣಿ, ವಲ್ಲಿಸಾಬ ತಾಡಪತ್ರಿ, ಹೇಮಲಪ್ಪ ಲಮಾಣಿ, ಇಸ್ಮಾಯಿಲ್ ದೊಡ್ಡಮನಿ, ಶೇಖಪ್ಪ ಲಮಾಣಿ, ಶಿವಪ್ಪ ಲಮಾಣಿ, ಠಾಕ್ರೆಪ್ಪ ಲಮಾಣಿ, ಓಬಪ್ಪ ಲಮಾಣಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.