ಇಂದಿನಿಂದ ಶಿರೋಳದಲ್ಲಿ ಎನ್ನೆಸ್ಸೆಸ್ ಶಿಬಿರ
ಮುಂಡರಗಿ: ಸ್ಥಳೀಯ ಜ. ಅನ್ನದಾನೀಶ್ವರ ವಿದ್ಯಾ ಸಮಿತಿಯ ಜ. ಅಸಂಪಪೂ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ದತ್ತುಗ್ರಾಮ ಶಿರೋಳದಲ್ಲಿ ಅ. 5ರಿಂದ 11ರ ವರೆಗೆ ಎನ್ನೆಸ್ಸೆಸ್ ಶಿಬಿರ ಜರುಗಲಿದೆ ಎಂದು ಕಾಲೇಜಿನ ಪ್ರಾಚಾರ್ಯ ವಿ.ಎಫ್. ಅಂಗಡಿ, ಶಿಬಿರಾಧಿಕಾರಿ ಪ್ರೊ ಸಿ.ಎಸ್. ಅರಸನಾಳ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಅ. 5ರಂದು ಸಂಜೆ 6ಕ್ಕೆ ಶಿಬಿರದ ಉದ್ಘಾಟನೆ ಜರುಗಲಿದ್ದು, ಶಾಸಕ ರಾಮಕೃಷ್ಣ ದೊಡ್ಡಮನಿ ಉದ್ಘಾಟಿಸುವರು. ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಬಿ.ಎಸ್. ಹಿರೇಗೌಡ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ವೈ.ಎನ್. ಗೌಡರ, ಹೇಮಂತಗೌಡ ಪಾಟೀಲ ಮುಂತಾದವರು ಪಾಲ್ಗೊಳ್ಳುವರು. 6ರಂದು ಸಂಜೆ 6ಕ್ಕೆ ನೆಲ-ಜಲ ಮತ್ತು ಅರಣ್ಯ ಸಂರಕ್ಷಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಜರುಗಲಿದ್ದು, ಎಸ್.ಬಿ. ಹಿರೇಮಠ ಅಧ್ಯಕ್ಷತೆ ವಹಿಸುವರು. ಈಶ್ವರಪ್ಪ ಹಂಚಿನಾಳ, ಎಫ್.ಜಿ. ವೀರನಗೌಡ್ರ ಮತ್ತು ಪ್ರಕಾಶ ದೊಡ್ಡಮನಿ ಉಪನ್ಯಾಸ ನೀಡುವರು. ಶರಣು ಸೊಲಗಿ ಅವರಿಂದ ಪರಿಸರ ಜಾಗೃತಿ ಗೀತೆಗಳು ಮತ್ತು ದೇವಪ್ಪ ಇಟಗಿ ಅವರಿಂದ ಶಿಶುನಾಳ ಶರೀಫರ ತತ್ವಪದಗಳ ಹಾಡುಗಾರಿಕೆ ನಡೆಯುವುದು. 7ರಂದು ಭಾವೈಕ್ಯತೆಯಲ್ಲಿ-ಹಳ್ಳಿಗರ ಪಾತ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಬಸಪ್ಪ ಹಂಚಿನಾಳ ವಹಿಸುವರು. ಎ.ವೈ. ನವಲಗುಂದ, ಕಾಶೀನಾಥ ಬಿಳಿಮಗ್ಗದ ನೀಡುವರು. 8ರಂದು ಬೆಳಗ್ಗೆ 10ಕ್ಕೆ ಶಾಸಕ ರಾಮಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ ಪುರಸಭೆ, ವಿವೇಕ ಜಾಗೃತ ಬಳಗ, ಬಸವ ಜಾಗೃತಿ ಫೌಂಡೇಶನ್, ಸರ್ಕಾರಿ ಐಟಿಐ ಕಾಲೇಜು ಮುಂಡರಗಿ ಇವರ ಸಹಕಾರದಲ್ಲಿ ಶಿರೋಳ ಗ್ರಾಮದ ಸಂಪೂರ್ಣ ಸ್ವಚ್ಛತೆ ಮತ್ತು ಗೃಹೋಪಯೋಗಿ ಸಾಮಾನುಗಳ ದುರಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಜೆ 6ಕ್ಕೆ ಮಹಿಳಾ ಸಾಕ್ಷರತೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಆರ್. ಇನಾಮದಾರ ವಹಿಸುವರು. ಪಿ.ಬಿ. ಹಿರೇಮಠ ಮತ್ತು ಭಾಗ್ಯಲಕ್ಷ್ಮೀ ಇನಾಮತಿ ಉಪನ್ಯಾಸ ನೀಡುವರು. 9ರಂದು ಬೆಳಗ್ಗೆ 10ಕ್ಕೆ ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಪಶುಸಂಗೋಪನಾ ಇಲಾಖೆ ಸಹಕಾರದಲ್ಲಿ ಜಾನುವಾರಗಳ ತಪಾಸಣಾ ಶಿಬಿರ ನಡೆಯುವುದು. ಸಂಜೆ 6ಕ್ಕೆ ಡಾ ಅನ್ನದಾನಿ ಮೇಟಿ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಣಾ ಮಾರ್ಗೋಪಾಯಗಳು ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. 10ರಂದು ಜಾನಪದ ಸಾಹಿತ್ಯ ಅಂದು-ಇಂದು ಕಾರ್ಯಕ್ರಮ ಜರುಗಲಿದೆ. 11ರಂದು ಸಂಜೆ 6ಕ್ಕೆ ಶಿಬಿರದ ಸಮಾರೋಪ ಸಮಾರಂಭ ಜರುಗಲಿದ್ದು, ಪ್ರಾ. ವಿ.ಎಪ್. ಅಂಗಡಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಎ.ಕೆ. ಬೆಲ್ಲದ, ಕಾಂತರಾಜ ಹಿರೇಮಠ, ಎಸ್.ಬಿ. ಬಾರಿಕಾಯಿ, ಬಿ.ಜಿ. ಬನ್ನಿಕೊಪ್ಪ, ಎಸ್.ವಿ. ಲಿಂಬಿಕಾಯಿ, ಎಸ್.ಎಂ. ಹೊಸಮಠ ಮುಂತಾದವರು ಉಪಸ್ಥಿತರಿರುವರು ಎಂದು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರೊ ಸಿ.ಎಸ್. ಅರಸನಾಳ, ಸಹ ಶಿಬಿರಾಧಿಕಾರಿ ಪ್ರೊ ಎನ್.ಎಫ್. ಅಕ್ಕೂರ, ಎಸ್.ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ನವರಾತ್ರಿ ಉತ್ಸವ
ಹೊಳೆ ಆಲೂರು: ಸ್ಥಳೀಯ ಗಂಗೋಜಿ ಅವರ ಓಣಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಂಬಾಭವಾನಿ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ನವರಾತ್ರಿ ಉತ್ಸವ ಅಂಗವಾಗಿ ಅ. 5ರಿಂದ 15ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ. 5ರ ಬೆಳಗ್ಗೆ 5 ಗಂಟೆಗೆ ಶ್ರೀದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಅಲಂಕಾರ ಪೂಜೆ, ಸಂಜೆ 5ಕ್ಕೆ ಘಟಸ್ಥಾಪನೆ, ಆರತಿ, ನೈವೇದ್ಯ, ಭಜನೆ, ಮಹಾಮಂಗಳಾರತಿ, ಮಂತ್ರಪುಷ್ಪ, ಸಂಗೀತ ಸೇವೆ ಪ್ರತಿನಿತ್ಯ ಜರುಗಲಿವೆ. 13ರಂದು ಮಹಾನವಮಿ ಖಂಡೆ, ಘಟ ವಿಸರ್ಜನೆ, ನವರಾತ್ರಿ ಸಮಾಪ್ತಿ, ನೈವೇದ್ಯ, ಮಹಾಮಂಗಳಾರತಿ, ಪ್ರಸಾದ ವಿತರಣೆ ಜರುಗಲಿವೆ. 15 ರಂದು ಮಂಗಳವಾರ ಬೆಳಗ್ಗೆ 10.30 ಕ್ಕೆ ಶ್ರೀದೇವಿಗೆ ಲಲಿತ ಸಹಸ್ರನಾಮಾವಳಿ, ಕುಂಕುಮಾರ್ಚನೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವ್ಯಾಟ್: ದೂರು ಸಲ್ಲಿಸಿ
ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷರ ನಿಯೋಗದೊಂದಿಗೆ ಅ. 3ರಂದು ಧಾರವಾಡ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರನ್ನು ಭೇಟಿ ಮಾಡಿ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮದಾರರು ಎದುರಿಸುತ್ತಿರುವಂಥ ಅನೇಕ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಇನ್ನು ವಾಣಿಜ್ಯ ತೆರಿಗೆ ವಿಷಯವಾಗಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ನಲ್ಲಿ ಸಂಸ್ಥೆಯ ಸದಸ್ಯರು, ವ್ಯಾಪಾರಸ್ಥರು ಎದುರಿಸುತ್ತಿರುವಂಥ ಯಾವುದೇ ತೊಂದರೆಗಳಿದ್ದರೆ ಅ. 7ರಂದು ಸಂಜೆ 5 ಗಂಟೆ ಒಳಗಾಗಿ ಲಿಖಿತವಾಗಿ ಸಂಸ್ಥೆಗೆ ತಿಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ಹಾಗೂ ಸಂಸ್ಥೆಯ ತೆರಿಗೆ ಉಪ ಸಮಿತಿ ಚೇರ್ಮನ್ ವಿ.ಎಸ್. ಮಾಟಲದಿನ್ನಿ ತಿಳಿಸಿದ್ದಾರೆ. ತಮ್ಮ ತೊಂದರೆಗಳ ಬಗ್ಗೆ ಜಂಟಿ ಆಯುಕ್ತರೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ಕಲ್ಪಿಸಿಕೊಡಲಾಗುವುದು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಸುರಕೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸಾಹಿತ್ಯ ಸಂಜೆ
ಗದಗ: ಅ. 5ರ ಸಂಜೆ 6 ಗಂಟೆಗೆ ನಗರದ ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ಕಸಾಪದಿಂದ ಸಾಹಿತ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ನರೇಗಲ್ಲಿನ ಅನ್ನದಾನೇಶ್ವರ ಪ್ರೌಢಶಾಲೆ ಶಿಕ್ಷಕ ಆರ್.ಕೆ. ಬಾಗವಾನ ಇವರು ಕನ್ನಡ ಸಾಹಿತ್ಯದಲ್ಲಿ ರಂಗಭೂಮಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಗದುಗಿನ ನಿವೃತ್ತ ಉಪನ್ಯಾಸಕ ದೇವೇಂದ್ರ ಮಾಧವನವರ ಇವರು ಸ್ವ-ರಚಿತ ಕವನ ವಾಚಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ ಶಿವಣ್ಣ ಕುರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು, ಸಾಹಿತ್ಯಾಭಿಮಾನಿಗಳು, ಮಹಿಳಾ ಸಾಹಿತಿಗಳು, ಶಾಲಾ ಕಾಲೇಜಿನ ಶಿಕ್ಷಕ, ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ ಸಂಗಮೇಶ ತಮ್ಮನಗೌಡರ, ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ಎನ್ನೆಸ್ಸೆಸ್ ಶಿಬಿರ
ಹೊಳೆ ಆಲೂರು: ಸ್ಥಳೀಯ ಕಲ್ಮೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪಪೂ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಅ. 5ರಿಂದ 11ರ ವರೆಗೆ ದತ್ತು ಗ್ರಾಮ ಸೋಮನಕಟ್ಟಿಯಲ್ಲಿ ಆರಂಭಗೊಳ್ಳಲಿದೆ. ಅ. 5ರಂದು ಸಂಜೆ 5ಕ್ಕೆ ಉದ್ಘಾಟನೆ ಜರುಗಲಿದ್ದು, ಕನ್ನೂರದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸದಸ್ಯೆ ಶಕುಂತಲಾ ಗಾಣಿಗೇರ ಉದ್ಘಾಟಿಸುವರು. ಸಿ.ಜಿ. ಬೀರನೂರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನಾಗರತ್ನಾ ನಾಗನೂರ, ಡಿ.ಜಿ. ಬರಡ್ಡಿ, ಬಸವರಾಜ ಅವರಾದಿ, ಎಂ.ಎಲ್. ಪಂಚಮ ಪಾಟೀಲ, ಈರಪ್ಪ ಬಾರಕೇರ, ಎಚ್.ಬಿ. ಐವಳ್ಳಿ ಆಗಮಿಸಲಿದ್ದಾರೆ ಎಂದು ಶಿಬಿರದ ಅಧ್ಯಕ್ಷ ಪ್ರಾ. ಬಿ.ಬಿ. ಬಿಜ್ಜರಗಿ ಹಾಗೂ ಶಿಬಿರಾಧಿಕಾರಿ ಪ್ರೊ ವಿ.ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

