ಶಾಂತಿ ಸಂದೇಶ ಸಾರಿದ ಗಾಂಧೀಜಿ
ಗಜೇಂದ್ರಗಡ: ಅಹಿಂಸಾ ತತ್ವದ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮಹಾತ್ಮಾ ಗಾಂಧೀಜಿಯವರ ಆದರ್ಶಗಳು ಸರ್ವಕಾಲಿಕ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಸ್.ಎಂ. ಆರಗಿದ್ದಿ ಹೇಳಿದರು. ಸ್ಥಳಿಯ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 145ನೇ ಜಯಂತಿ ಹಾಗೂ ಭಾರತದ 2ನೇ ಪ್ರಧಾನಮಂತ್ರಿ ಲಾಲ ಬಹದ್ದೂರ್ ಶಾಸ್ತ್ರೀಯವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯೋಪಾದ್ಯಾಯ ಬಿ.ವೈ. ಕರ್ನೂಲ ಮುಂತಾದವರು ಮಾತನಾಡಿದರು. ಅಶ್ರಫಲಿ ಗೊಡೇಕಾರ, ಕೆ.ಎಂ. ಹಿರೇಹಾಳ, ಅಬ್ದುಲ್ಸಾಬ್ ಕಾತರಕಿ, ಎಸ್.ಕೆ. ಖೇಡಗಿ, ಬಿ.ಎಚ್. ಬಾಗವಾನ, ಎಸ್.ಬಿ. ಹನಮಕ್ಕನವರ ಉಪಸ್ಥಿತರಿದ್ದರು.
ರಾಜ್ಯ ಮಟ್ಟಕ್ಕೆ ಆಯ್ಕೆ: ಗದಗನಲ್ಲಿ ನಡೆದ ಅಲ್ಪಸಂಖ್ಯಾತ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಥಳೀಯ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಅಮೀನ ಬಾನು ಚಿನ್ನೂರ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಚರ್ಚಾ ಸ್ಪರ್ಧೆಯಲ್ಲಿ ಸಮೀನ ಹುನಗುಂದ ದ್ವೀತಿಯ ಹಾಗೂ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಮುನ್ಶಾದ ಚಿಕೆನಕೊಪ್ಪ ತೃತಿಯ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲೆಯಲ್ಲಿ: ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 145ನೇ ಜಯಂತಿ ಹಾಗೂ ಭಾರತದ 2ನೇ ಪ್ರಧಾನಮಂತ್ರಿ ಲಾಲ ಬಹದ್ದೂರ್ ಶಾಸ್ತ್ರೀಯವರ ಜನ್ಮ ದಿನಾಚರಣೆ ನಡೆಯಿತು. ಮಹಾತ್ಮರ ಭಾವಚಿತ್ರಗಳಿಗೆ ಮುಖ್ಯೋಪಾಧ್ಯಾಯ ಎಂ.ಡಿ. ಸರಕಾವಸ ಪೂಜೆ ಸಲ್ಲಸಿ ಮಾತನಾಡಿದರು. ನ್ಯಾಯವಾದಿ ಕೆ.ಕೆ. ಲಕ್ಷ್ಮೇಶ್ವರ, ಎ.ಬಿ. ರೆಡ್ಡೇರ, ಎಂ.ಐ. ಬೇಲೇರಿ, ಬಿ.ಎ. ಡಾಲಾಯತ್, ಎಸ್.ಎಂ. ಡಂಬಳ, ಎಸ್.ಎಂ. ಮತ್ತೆ, ವಿ.ಎಂ. ಬಡಿಗೇರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

