ಸ್ಮಾರಕ ಭವನ ನಿರ್ಮಾಣವಾಗಲಿ
ಗದಗ: ಕನ್ನಡ ನಾಡಿನ ಶ್ರೇಷ್ಠ ಕವಿಗಳು, ಸುಪ್ರಸಿದ್ಧ ನಾಟಕಕಾರರು, ಕನ್ನಡ ನಾಡಿಗೆ ಮೊದಲು ನಾಡಗೀತೆ ನೀಡಿದ ನಾಡಕವಿ, ಹುಯಿಲಗೋಳ ನಾರಾಯಣರಾವ್ ಅವರ ತವರೂರಿನಲ್ಲಿ ಅವರ ನೆನಪಿಗೆ ಹೇಳುವಂಥ ಸ್ಮಾರಕ ಭವನವಾಗಲಿ, ಅವರನ್ನು ನೆನಪಿಸುವ ದ್ವಾರಬಾಗಿಲು ಇಲ್ಲದ್ದು ಖೇದಕರ. ಕೂಡಲೇ ಜಿಲ್ಲಾಡಳಿತ ನಾಡಕವಿ ಹುಯಿಲಗೋಳ ನಾರಾಯಣರಾವ್ ಅವರ ಸ್ಮಾರಕ ಭವನ ನಿರ್ಮಾಣ ಮಾಡಲಿ ಎಂದು ಹಿರಿಯ ಕವಿ, ನಾಟಕಕಾರ ಸಿ.ಜಿ.ಬಿ. ಹಿರೇಮಠ ಹೇಳಿದರು.
ಶುಕ್ರವಾರ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ನಾಡಕವಿ ಹುಯಿಲಗೋಳ ನಾರಾಯಣರಾವ್ ಕಲಾ ಮತ್ತು ಸಂಸ್ಕೃತಿ ಗದಗ ಹಾಗೂ ಸಿಜಿಬಿಎಚ್ ರಂಗಭೂಮಿ ಮಿತ್ರ ಮಂಡಳಿ ಗದಗ ಆಶ್ರಯದಲ್ಲಿ ನಾಡಕವಿ ಹುಯಿಲಗೋಳ ನಾರಾಯಣರಾವ್ರ 130ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾರಾಯಣರಾವ್ ಅವರು ಬೆಳಗಾವಿಯಲ್ಲಿ 1924ರಲ್ಲಿ ನಡೆದ ಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿಕೊಂಡಾಗ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಎಂಬ ನಾಡಗೀತೆ ಹಾಡುವ ಮೂಲಕ ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿದ್ದಲ್ಲದೇ ದೇಶಕ್ಕೆ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿತು ಎಂದರು.
ನಿಸ್ಸಾರ ಅಹ್ಮದ್ ಖಾಜಿ ಮಾತನಾಡಿ, ನಾಡಕವಿ ಹುಯಿಲಗೋಳ ನಾರಾಯಣರಾವ್ ಅವರ ಪ್ರತಿಯೊಂದು ಕಾರ್ಯಕ್ರಮವನ್ನು ಸರ್ಕಾರವೇ ನಿರ್ಣಯಿಸಲೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಗೌರವಾಧ್ಯಕ್ಷ ಎ.ಎನ್. ಶಾಲಗಾರ, ಬಸವಣ್ಣೆಯ್ಯ ಹಿರೇಮಠ, ರಾಜ್ಯ ಹಮಾಲರ ಒಕ್ಕೂಟದ ಅಧ್ಯಕ್ಷ ಅಯ್ಯಪ್ಪ ನಾಯ್ಕರ, ಪ್ರೊ ಎಂ.ಬಿ. ಹುಲ್ಲೂರ, ಮಹೇಶ ಕರಿಬಿಷ್ಟಿ, ಸಮಿತಿ ಉಪಾಧ್ಯಕ್ಷ ಎನ್.ಕೆ. ಕೊರ್ಲಹಳ್ಳಿ, ಶಿಕ್ಷಕ ಡಿ.ಎಂ. ಕೆರೂರು ಮಾತನಾಡಿದರು. ಎಂ.ಬಿ. ದೇಸಾಯಿ, ಹನಮಂತಗೌಡ ಕಲ್ಮನಿ, ಬಾಬಾಜಾನ ಬಳಗಾನೂರ, ಮಂಜುನಾಥ ಗೌಳಿ, ಅಶೋಕ ಗಾಣಿಗೇರಿ, ಅಶೋಕ ಎನ್, ವೀರಣ್ಣ ಅಂಗಡಿ ಮುಂತಾದವರು ಪಾಲ್ಗೊಂಡಿದ್ದರು.
11ರಂದು ಚುನಾವಣಾ ಸಭೆ
ಗದಗ: ಗದಗ ಜಿಲ್ಲಾಪಂಚಾಯತ್ನ 2ನೇ ಅವಧಿಯ ಉಳಿದ ಅವಧಿಗೆ ಉಪಾಧ್ಯಕ್ಷರ ಆಯ್ಕೆ ಕುರಿತು ಪ್ರಾದೇಶಿಕ ಆಯುಕ್ತರು, ಬೆಳಗಾವಿ ಇವರಿಂದ ಅ. 11 ರಂದು ಮಧ್ಯಾಹ್ನ 1 ಗಂಟೆಗೆ ಚುನಾವಣಾ ಸಭೆ ಕರೆಯಲಾಗಿದೆ ಎಂದು ಜಿಪಂ ಸಿಇಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

