ಗದಗ

ಎನ್ನೆಸ್ಸೆಸ್ ಶಿಬಿರದಲ್ಲಿಂದು

Published On :

ಗದಗ:  ಕನ್ನಡ ಕಿರಣ ಶಿಕ್ಷಣ ಸಮಿತಿಯ ಬಿ.ಎಸ್.ಡಬ್ಲ್ಯೂ ಮಹಾವಿದ್ಯಾಲಯ ಹಾಗೂ ಸಮಾಜಕಾರ್ಯ (ಎಂ.ಎಸ್.ಡಬ್ಲ್ಯೂ.) ಸ್ನಾತಕೋತ್ತರ ಕೇಂದ್ರ ಗದಗ ಇದರ ಆಶ್ರಯದಲ್ಲಿ ತಾಲೂಕಿನ ಹೊನ್ನಿಗನೂರಿನ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮೀಣ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮ ಕುರಿತು ವಿಶೇಷ ಎನ್.ಎಸ್.ಎಸ್. ಶಿಬಿರವನ್ನು ಅ. 8ರ ಸಂಜೆ 6.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಪ್ರಗತಿಪರ ರೈತ ಕುಬೇರಪ್ಪ ಬೆನಹಾಳ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕರಾಗಿ ಡಾ. ಸದಾಶಿವಪ್ಪ ಟಿ, ಕೃಷ್ಣಾ ದೊಡ್ಡಮನಿ, ಸುರೇಶ ಕಪ್ಪತ್ತನವರ ಆಗಮಿಸುವರು. ಅತಿಥಿಗಳಾಗಿ ಎಚ್.ಬಿ. ಮೂಲಿಮನಿ, ಬಾಳನಗೌಡ ಪವಾಡಿಗೌಡ್ರ, ಚನ್ನಪ್ಪಗೌಡ ಭೀಮಪ್ಪನವರ, ಎಂ.ಎಸ್. ಕೋಟಿ, ಎ.ಬಿ. ಭಾವಿ, ಪಿ.ಎಸ್. ಬಾವಿ, ವಿ.ಎಂ. ಮೂಲಿಮನಿ, ಶ್ರೀಶೈಲಪ್ಪ ಸೂಳಿಭಾವಿ, ಮಹಾಂತೇಶ ಅಯ್ಯನಗೌಡ್ರ, ಶಂಕ್ರಪ್ಪ ಹೊಸಮನಿ, ಶರಣಗೌಡ ಲಗಳಿ, ಬಸಪ್ಪ ಲಕ್ಕುಂಡಿ ಮುಂತಾದವರು ಉಪಸ್ಥಿತರಿರುವರು ಎಂದು ಶಿಬಿರದ ನಿರ್ದೇಶಕ ಪಿ.ಎಸ್. ಗಾಣಿಗೇರ, ಎಸ್.ಜಿ. ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಉಪನ್ಯಾಸ
ಗದಗ: ತಾಲೂಕಿನ ಅಂತೂರು-ಬೆಂತೂರು ಗ್ರಾಮದಲ್ಲಿ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಎನ್.ಎಸ್.ಎಸ್. ಶಿಬಿರದ ಅಂಗವಾಗಿ ಅ. 8ರ  ಸಂಜೆ 6ಗಂಟೆಗೆ ಜನಪದ ಚಿತ್ರಕಲೆಯ ಮಹತ್ವ ಕುರಿತು ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. ಉಪನ್ಯಾಸಕರಾಗಿ ಚಿತ್ರಕಲಾ ಶಿಕ್ಷಕ ವಿಜಯ ಕಿರೇಸೂರ ಆಗಮಿಸುವರು. ಮಹಾವಿದಾಯಲದ ಪ್ರಾಚಾರ್ಯ ವಿ.ಕೆ. ಸೊರಟೂರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಗ್ರಾಪಂ ಸದಸ್ಯ ಮಹಾವೀರ ಜೈನರ್, ಎಸ್.ಡಿ.ಎಂ.ಸಿ. ಸದಸ್ಯ ಎಂ.ಎಂ. ಚಿಂಚಲಿ, ಮನೋಹರ ಕೊರವನವರ, ಪಂಚಾಕ್ಷರಯ್ಯ ಬೆಟಗೇರಿಮಠ, ವಿರೂಪಾಕ್ಷಪ್ಪ ಮಣಕವಾಡ, ಯಲ್ಲಪ್ಪ ಮಜ್ಜಿಗುಡ್ಡ, ಸಲ್ಮಾಬೇಗಂ, ಮರಿಯಪ್ಪ ಆಲೂರ, ಪಂಚಯ್ಯ ನೀಲಗುಂದಮಠ, ರವಿ ಹುಚ್ಚಣ್ಣವರ ಮುಂತಾದವರು ಆಗಮಿಸುವರು ಎಂದು ಶಿಬಿರಾಧಿಕಾರಿ ಪ್ರೊ. ಬಿ.ಪಿ. ಜೈನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪಘಾತ: ಇಬ್ಬರ ಸಾವು
ನರಗುಂದ: ತಾಲೂಕಿನ ಬೆಳ್ಳೇರಿ ಗ್ರಾಮದ ಸಮೀಪದಲ್ಲಿ ಸೋಮವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಜರುಗಿದೆ. ಮೃತರನ್ನು ರಾಮದುರ್ಗ ತಾಲೂಕಿನ ಗೊನ್ನಾಗರ ಗ್ರಾಮದ ಬಸವರಾಜ ಮಲ್ಲನಗೌಡರ (25), ಬಸವರಾಜ ಜಕ್ಕಣ್ಣವರ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೈಕ್ ಸವಾರ ಸಾವು
ನರಗುಂದ: ಚಕ್ಕಡಿಯೊಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕಲಕೇರಿ ಗ್ರಾಮದ ಬಳಿ ಭಾನುವಾರ  ಜರುಗಿದೆ. ಮೃತನನ್ನು ರಾಮದುರ್ಗ ತಾಲೂಕಿನ ಓಬಳಪುರ ಗ್ರಾಮದ ಪುಂಡಲೀಕಪ್ಪ ಕರಡಿಗುಡ್ಡ (25) ಎಂದು ಗುರುತಿಸಲಾಗಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.