ಗದಗ

ಸಾಮಾಜಿಕ ಕಾರ್ಯದಿಂದ ನೆಮ್ಮದಿ

Published On :

ರೋಣ: ವ್ಯಕ್ತಿ ತನ್ನ ಸಾಧನೆ ಮೂಲಕ ಉತ್ತುಂಗಕ್ಕೇರಲು ಸತತ ಪರಿಶ್ರಮ ವಹಿಸುವುದರೊಂದಿಗೆ ಸದಾ ಕ್ರಿಯಾಶೀಲತೆ, ಸಮಯಪ್ರಜ್ಞೆ, ಸೇವಾ ಮನೋಭಾವ ಅತ್ಯಂತ ಮುಖ್ಯವಾಗಿದ್ದು, ಆ ದಿಶೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ರೋಣ ತಾಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ರಾಜಣ್ಣ ಹುಲಿ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ರೋಣ ತಾಲೂಕು ಬಣಜಿಗರ ಸಂಘದಿಂದ ಭಾನುವಾರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯ ವ್ಯಕ್ತಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ, ಪ್ರೋತ್ಸಾಹಿಸಿದಲ್ಲಿ ಅವರಿಗೆ ಇನ್ನೂ ಜವಾಬ್ದಾರಿ ಹೆಚ್ಚುತ್ತದೆ. ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿ ಅಂತವರು ಶಿಕ್ಷಣದಿಂದ ವಂಚಿತರಾಗಿದ್ದಲ್ಲಿ ಸಂಘಗಳು ಅಂತವರಿಗೆ ನೆರವು, ಸಹಕಾರ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಯತ್ನಿಸಬೇಕು. ಒಂದು ಸಮಾಜ ಮುಂದೆ ಬರಲು ಶಿಕ್ಷಣ ಮುಖ್ಯವಾಗಿದೆ. ಆತ್ಮವಿಶ್ವಾಸ, ಹೊಂದಾಣಿಕೆ, ಸಹಕಾರ ಮನೋಭಾನೆಗಳಿದ್ದಲ್ಲಿ ಸಂಘಟನೆ ಬಲಗೊಳ್ಳುತ್ತದೆ ಎಂದರು. ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ನ್ಯಾಯವಾದಿ ಎಂ.ವಿ. ಯಾಳಗಿ, ಪರಪ್ಪ ನವಲಗುಂದ, ಸಂಗಪ್ಪ ಮೆಣಸಿನಕಾಯಿ, ಶಕುಂತಲಾ ಜಕ್ಕಲಿ ಮಾತನಾಡಿದರು. ಡಾ೤ ಎ.ಸಿ. ಹುಲಿ, ಎಪಿಎಂಸಿ ಸದಸ್ಯ ಎಂ.ವಿ. ಅರಳಿ,  ಐ.ಎಸ್. ಶೀಲವಂತರ, ಗುರುಪಾದಪ್ಪ ಪಟ್ಟಣಶೆಟ್ಟಿ, ಗಜೇಂದ್ರಗಡ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ನಿರ್ಮಲಾ ಐಹೊಳ್ಳಿ, ಸಂತೋಷ ಸಂಕನೂರ, ಮಂಜುನಾಥ ಅಂಗಡಿ, ಮಲ್ಲಿಕಾರ್ಜುನ ಗೋನಾಳ, ಮುತ್ತಪ್ಪ ಅಕ್ಕಿಶೆಟ್ಟರ್ ಮುಂತಾದವರು ಉಪಸ್ಥಿತರಿದ್ದರು. ಚಂದ್ರಶೇಖರ್ ಐಹೊಳ್ಳಿ ನಿರೂಪಿಸಿದರು. ಪ್ರಕಾಶ ವಾಲಿ ಸ್ವಾಗತಿಸಿದರು. ವೀರೇಶ ನಂದ್ಯಾಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.