ಗದಗ

ಖಾತ್ರಿ ಯೋಜನೆಗೆ ಚಾಲನೆ

Published On :

ನರಗುಂದ:  ತಾಲೂಕಿನ ಬೈರನಹಟ್ಟಿ ಗ್ರಾಪಂ ವ್ಯಾಪ್ತಿಯ ಮುದ್ಗಣಕಿ ಗ್ರಾಮದಲ್ಲಿ ಈಚೆಗೆ ಜರುಗಿದ ಗಾಂಧಿ ಜಯಂತಿ ನಿಮಿತ್ತ, ಗ್ರಾಪಂ ಅಧ್ಯಕ್ಷ ಹನಮವ್ವ ಮಾದರ ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆ ಸಮಾಜದ ಕೆಳ ವರ್ಗದವರಿಗೆ ಅನುಕೂಲವಾಗಿದೆ. ಗ್ರಾಮವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಸರ್ಕಾರದಿಂದ ಬಂದಂತಹ ಅನುದಾನವನ್ನು ಸಮರ್ಪಕವಾಗಿ ಗ್ರಾಮಕ್ಕೆ ಬಳಸಿ ಗ್ರಾಮವನ್ನು ಅಭಿವೃದ್ಧಿಗೊಳಿಸಲು ಶ್ರಮಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳುವಂತೆ ಸೂಚಿಸಿದರು. ತಾಪಂ ಅಧಿಕಾರಿ ನಂದಕುಮಾರ ಗುಂಡಾ ಮಾತನಾಡಿ, ವ್ಯಾಪ್ತಿಯ ಭೈರನಹಟ್ಟಿಯಲ್ಲೂ ಕೆಲ ದಿನಗಳಲ್ಲಿ ರು. 4 ಲಕ್ಷ ಅನುದಾನದಲ್ಲಿ ಬಡ ಕೂಲಿಕಾರ್ಮಿಕರಿಗೆ ಉದ್ಯೋಗ ಪ್ರಾರಂಭಿಸಲಾಗುವುದು. ಕಾಮಗಾರಿ ಅನುಮೋದನೆ ಕಳುಹಿಸಲಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ಬಿ.ವಿ. ಪಾಟೀಲ, ಯಲ್ಲಪ್ಪ ದೊಡ್ಡಮನಿ, ಗ್ರಾಪಂ ಸದಸ್ಯ ಮಂಜುನಾಥಗೌಡ ಪಾಟೀಲ, ಕಲ್ಲನಗೌಡ ಮರಿಗೌಡರ, ಮುತ್ತು ಬೆಳವಟಿಗೆ ಮುಂತಾದವರು ಉಪಸ್ಥಿತರಿದ್ದರು.

ಬೈಕ್ ಸವಾರ ಸಾವು
ನರಗುಂದ: ಚಕ್ಕಡಿಯೊಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕಲಕೇರಿ ಗ್ರಾಮದ ಬಳಿ ಭಾನುವಾರ  ಜರುಗಿದೆ. ಮೃತನನ್ನು ರಾಮದುರ್ಗ ತಾಲೂಕಿನ ಓಬಳಪುರ ಗ್ರಾಮದ ಪುಂಡಲೀಕಪ್ಪ ಕರಡಿಗುಡ್ಡ (25) ಎಂದು ಗುರುತಿಸಲಾಗಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎನ್ನೆಸ್ಸೆಸ್ ಶಿಬಿರದಲ್ಲಿಂದು
ಗದಗ: ಕನ್ನಡ ಕಿರಣ ಶಿಕ್ಷಣ ಸಮಿತಿಯ ಬಿ.ಎಸ್.ಡಬ್ಲ್ಯೂ ಮಹಾವಿದ್ಯಾಲಯ ಹಾಗೂ ಸಮಾಜಕಾರ್ಯ (ಎಂ.ಎಸ್.ಡಬ್ಲ್ಯೂ) ಸ್ನಾತಕೋತ್ತರ ಕೇಂದ್ರ ಗದಗ ಇದರ ಆಶ್ರಯದಲ್ಲಿ ತಾಲೂಕಿನ ಹೊನ್ನಿಗನೂರಿನ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮೀಣ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮ ಕುರಿತು ವಿಶೇಷ ಎನ್.ಎಸ್.ಎಸ್. ಶಿಬಿರವನ್ನು ಅ. 8ರ ಸಂಜೆ 6.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಪ್ರಗತಿಪರ ರೈತ ಕುಬೇರಪ್ಪ ಬೆನಹಾಳ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕರಾಗಿ ಡಾ. ಸದಾಶಿವಪ್ಪ ಟಿ, ಕೃಷ್ಣಾ ದೊಡ್ಡಮನಿ, ಸುರೇಶ ಕಪ್ಪತ್ತನವರ ಆಗಮಿಸುವರು. ಅತಿಥಿಗಳಾಗಿ ಎಚ್.ಬಿ. ಮೂಲಿಮನಿ, ಬಾಳನಗೌಡ ಪವಾಡಿಗೌಡ್ರ, ಚನ್ನಪ್ಪಗೌಡ ಭೀಮಪ್ಪನವರ, ಎಂ.ಎಸ್. ಕೋಟಿ, ಎ.ಬಿ. ಭಾವಿ, ಪಿ.ಎಸ್. ಬಾವಿ, ವಿ.ಎಂ. ಮೂಲಿಮನಿ, ಶ್ರೀಶೈಲಪ್ಪ ಸೂಳಿಭಾವಿ, ಮಹಾಂತೇಶ ಅಯ್ಯನಗೌಡ್ರ, ಶಂಕ್ರಪ್ಪ ಹೊಸಮನಿ, ಶರಣಗೌಡ ಲಗಳಿ, ಬಸಪ್ಪ ಲಕ್ಕುಂಡಿ ಮುಂತಾದವರು ಉಪಸ್ಥಿತರಿರುವರು ಎಂದು ಶಿಬಿರದ ನಿರ್ದೇಶಕ ಪಿ.ಎಸ್. ಗಾಣಿಗೇರ, ಎಸ್.ಜಿ. ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಉಪನ್ಯಾಸ
ಗದಗ: ತಾಲೂಕಿನ ಅಂತೂರು-ಬೆಂತೂರು ಗ್ರಾಮದಲ್ಲಿ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಎನ್.ಎಸ್.ಎಸ್. ಶಿಬಿರದ ಅಂಗವಾಗಿ ಅ. 8ರ  ಸಂಜೆ 6ಗಂಟೆಗೆ ಜನಪದ ಚಿತ್ರಕಲೆಯ ಮಹತ್ವ ಕುರಿತು ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. ಉಪನ್ಯಾಸಕರಾಗಿ ಚಿತ್ರಕಲಾ ಶಿಕ್ಷಕ ವಿಜಯ ಕಿರೇಸೂರ ಆಗಮಿಸುವರು. ಮಹಾವಿದಾಯಲದ ಪ್ರಾಚಾರ್ಯ ವಿ.ಕೆ. ಸೊರಟೂರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಗ್ರಾಪಂ ಸದಸ್ಯ ಮಹಾವೀರ ಜೈನರ್, ಎಸ್.ಡಿ.ಎಂ.ಸಿ. ಸದಸ್ಯ ಎಂ.ಎಂ. ಚಿಂಚಲಿ, ಮನೋಹರ ಕೊರವನವರ, ಪಂಚಾಕ್ಷರಯ್ಯ ಬೆಟಗೇರಿಮಠ, ವಿರೂಪಾಕ್ಷಪ್ಪ ಮಣಕವಾಡ, ಯಲ್ಲಪ್ಪ ಮಜ್ಜಿಗುಡ್ಡ, ಸಲ್ಮಾಬೇಗಂ, ಮರಿಯಪ್ಪ ಆಲೂರ, ಪಂಚಯ್ಯ ನೀಲಗುಂದಮಠ, ರವಿ ಹುಚ್ಚಣ್ಣವರ ಮುಂತಾದವರು ಆಗಮಿಸುವರು ಎಂದು ಶಿಬಿರಾಧಿಕಾರಿ ಪ್ರೊ. ಬಿ.ಪಿ. ಜೈನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.