ಶರಣರ ಅವಹೇಳನ: ಶ್ರೀಗಳ ಖಂಡನೆ
ನರಗುಂದ: ವಿಶ್ವಗುರು ಬಸವಣ್ಣ ಅವರ ಬಗ್ಗೆ ಸಿದ್ಧರಾಮೇಶ್ವರ ಚರಿತ್ರೆ ತಿರುಚಿ ಅದರಲ್ಲಿ ಅವಹೇಳನಕಾರಿ ಪುಟಗಳನ್ನು ಸೇರಿಸಿ ಲಿಂಗಾಯತ ಧರ್ಮಕ್ಕೆ ಅವಮಾನ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಭೈರನಹಟ್ಟಿ ಮಠದ ಶಾಂತಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.
16ನೇ ಶತಮಾನದಲ್ಲಿ ರಚಿಸಿದ ಸಿದ್ಧರಾಮೇಶ್ವರ ಚರಿತ್ರೆಯನ್ನು 2006ರಲ್ಲಿ ಮರು ಮುದ್ರಿಸುವಾಗ ತಿರುಚಿದ್ದು, ಅದರಲ್ಲಿ ಅವಹೇಳನಕಾರಿ ಶಬ್ದಗಳನ್ನು ಪ್ರಯೋಗಿಸಿ ಹೆಚ್ಚಿನ ಪುಟಗಳನ್ನು ಮುದ್ರಿಸಲಾಗಿದೆ. ಕೃತಿಯಲ್ಲಿ ಹೆಚ್ಚಿನ ಪುಟಗಳುನ್ನು ತೆಗೆದು ಹಾಕಲು ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಒತ್ತಾಯಿಸಿದ್ದಾರೆ.
ಪತ್ರವನದ ಮಠದ ಸಿದ್ಧವೀರ ಶ್ರೀ, ಚನ್ನಬಸಪ್ಪ ಕಂಠಿ, ಚನ್ನು ನಂದಿ, ಈ ಕೃತಿ ತಿದ್ದುಪಡಿ ಮಾಡಿದ್ದನ್ನು ಖಂಡಿಸಿದರು. ಬಸವ ಕೇಂದ್ರ ಅಧ್ಯಕ್ಷ ಸಿ.ಎಚ್. ಕೋರಿ, ವೀರಭದ್ರಸ್ವಾಮಿ, ಎಂ.ವಿ. ಪಠಾಣ, ಜಿ.ಎಸ್. ಕಲ್ಲೂರಮಠ, ರಾಘವೇಂದ್ರ ಗುಜಮಾಗಡಿ, ಎಸ್.ವಿ. ಗೋವಶ್ವರ, ಹೊನ್ನಪ್ಪ ಗಡೇಕಾರ, ಶಿವಪ್ಪ ಬೋಳಶಟ್ಟಿ, ಪ್ರಕಾಶ ನಂದಿ, ಮುರಗೇಶ ಕುರಣೆ, ಅಂದಾನಯ್ಯ ಹಿರೇಮಠ, ನಿಂಗಪ್ಪ ಗಾಣಿಗೇರ, ಮೌನೇಶ ಬಡಿಗೇರ, ಚೇತನ ಕಾಲಚಟ್ಟಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

