ಗದಗ

ಸಂಭ್ರಮದ ವಿಜಯದಶಮಿ ಆಚರಣೆ

Published On :

ಗಜೇಂದ್ರಗಡ:  ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ದುರ್ಗಾಮಾತೆ, ಶಾಖಾಂಬರಿ, ಅಂಬಾಭವಾನಿ, ತುಳಜಾಭವಾನಿ, ಸೇರಿ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಿದ ದೇವತೆಗಳ ದೇಗುಲಗಳಿಗೆ ಭಕ್ತರು ತೆರಳಿ ಪೂಜೆ ಸಲ್ಲಿಸಿ, ಬಳಿಕ ಶಮಿ (ಬನ್ನಿ) ವೃಕ್ಷಕ್ಕೆ ಪೂಜೆ ಸಲ್ಲಿಸಿ, ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ವಿಜಯ ದಶಮಿಯನ್ನು ಸಂಭ್ರಮದಿಂದ ಆಚರಿಸಿದರು.
ಭಾರತೀಯ ಧಾರ್ಮಿಕ ಆಚರಣೆಯ ಪರಂಪರೆಯಲ್ಲಿ ಮಹತ್ವ ಪಡೆದಿರುವ ಶರನ್ನವರಾತ್ರಿ ದಸರಾ ಹಬ್ಬ ಅತ್ಯಂತ ಪ್ರಾಮುಖ್ಯ ಪಡೆದಿದೆ. ಮಹಾಲಯ ಅಮಾವಾಸ್ಯೆ ನಂತರ ಸತತ ಒಂಭತ್ತು ದಿನಗಳ ವರೆಗೆ ಶಕ್ತಿ ದೇವತೆಗಳಿಗೆ ನಡೆಯುವ ಪೂಜೆಗೆ ವಿಶೇಷ ಮಹತ್ವವಿದೆ. ಸಮಾಜದಲ್ಲಿ ಶಾಂತಿ ನೆಮ್ಮದಿ ಜತೆ ಉತ್ತಮ ಬಾಂಧವ್ಯ ವೃದ್ಧಿಗೊಳಿಸುವ ಈ ಹಬ್ಬದ ಆಚರಣೆ ವೈಶಿಷ್ಟ್ಯತೆ ಪಡೆದುಕೊಂಡಿದೆ. ಸ್ಥಳೀಯ ಜಗದಂಬಾ, ಹಿರೇ ದುರ್ಗಾದೇವಿ ಹಾಗೂ ಬನಶಂಕರಿ ದೇಗುಲಗಳಲ್ಲಿ ಕಳೆದ ಒಂಭತ್ತು ದಿನಗಳಿಂದ ದೇವಿಯ ಆರಾಧನೆಗಾಗಿ ಘಟಸ್ಥಾಪನೆ ನೆರವೇರಿಸಿ ನಿತ್ಯ ಪುರಾಣ, ಕೀರ್ತನೆ, ಭಜನೆಯಂತಹ ಧಾರ್ಮಿಕ ಕೈಂಕರ್ಯಗಳ ಸಂಭ್ರಮ ಭಕ್ತರಲ್ಲಿ ಕಂಗೊಳಿಸಿತು. ಇನ್ನೊಂದೆಡೆ ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯ ದೈವ ದಕ್ಷಿಣ ಕಾಶಿ ಪ್ರಸಿದ್ಧಿಯ ಶ್ರೀ ಕಾಲಕಾಲೇಶ್ವರ ಸುಕ್ಷೇತ್ರಕ್ಕೆ ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ದಸರಾ ಆಚರಣೆಯ ಸಂಭ್ರಮದಲ್ಲಿರುವಾಗ ಭಾನುವಾರ ಸಂಜೆ ಹಾಗೂ ರಾತ್ರಿ ತುಂತುರು ಹನಿಯೊಂದಿಗೆ ಆರಂಭವಾದ ಮಳೆ ಸತತ 4 ಗಂಟೆಗೂ ಹೆಚ್ಚುಕಾಲ ಧಾರಾಕಾರವಾಗಿ ಸುರಿದ ಹಿನ್ನೆಲೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತು. ಸಮೀಪದ ಗೊಗೇರಿ ಗ್ರಾಮದ ಅದಿ ದೇವತೆ ತುಳಜಾ ಭವಾನಿ ದೇಗುಲದ ನೂತನ ರಥೋತ್ಸವ ಹಾಗೂ ಉಚ್ಚಾಯ ಮಹೋತ್ಸವ ಸೋಮವಾರ ಅಸಂಖ್ಯಾತ ಭಕ್ತರ ಮಧ್ಯೆ ಸಂಭ್ರಮದೊಂದಿಗೆ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.