ಸಹೋದರತ್ವ ಭಾವನೆಯಿಂದ ಬಾಳಿರಿ
ಮುಂಡರಗಿ: ಪಂಚಮಸಾಲಿ ಸಮಾಜ ಸಂಘಟಿತವಾಗಬೇಕು. ಎಲ್ಲರೂ ಸಹೋದರತ್ವ ಮನೋಭಾವನೆಯಿಂದ ಬಾಳಬೇಕೆಂದು ತಾಲೂಕು ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಕೊಟ್ರಗೌಡ ಪಾಟೀಲ ಹೇಳಿದರು.
ಅವರು ಸ್ಥಳೀಯ ಕೋಟೆ ಶಾಲೆಯ ಸಭಾಭವನದಲ್ಲಿ ಸೋಮವಾರ ವೀರಶೈವ ಪಂಚಮಸಾಲಿ ಸಂಘದಿಂದ ಹಮ್ಮಿಕೊಂಡಿದ್ದ ವಿಜಯದಶಮಿ ಹಬ್ಬದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಪಂಚಮಸಾಲಿ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಹೆಚ್ಚು ಸಂಘಟಿತರಾಗುತ್ತಿಲ್ಲ. ಎಲ್ಲರೂ ಸಂಘಟಿತರಾದಾಗ ಮಾತ್ರ ಸಂಘಕ್ಕೆ ಬಲ ಬರುತ್ತದೆ. ಅ. 26ರಂದು ತಾಲೂಕು ಸಂಘಟನೆ ಮತ್ತು ಪಂಚಮಸಾಲಿ ನೌಕರರ ಸಂಘದ ಆಶ್ರಯದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ 190ನೇ ಜಯಂತಿ ಉತ್ಸವವನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲರೂ ತನು-ಮನ ಧನದಿಂದ ಸಹಾಯ ಮಾಡಬೇಕೆಂದರು. ಸಾನ್ನಿಧ್ಯವಹಿಸಿದ್ದ ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ವಿಜಯದಶಮಿ ಹಬ್ಬದ ನೆಪದಲ್ಲಿ ಮುಂಡರಗಿಯಲ್ಲಿ ಪಂಚಮಸಾಲಿ ಸಮಾಜದವರೆಲ್ಲರೂ ಒಂದೆಡೆ ಸೇರಿ ಚಿಂತನ-ಮಂಥನ ಮಾಡುತ್ತಿರುವುದು ಸಂತಸದ ವಿಚಾರ. ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಿ ವೀರರಾಣಿ ಚೆನ್ನಮ್ಮಳ ಜಯಂತಿಯನ್ನು ಆಚರಿಸೋಣ ಎಂದರು. ಪ್ರೊ. ಆರ್.ಎಲ್. ಪೊಲೀಸ್‌ಪಾಟೀಲ. ವಿ. ಮುದ್ದಿ, ಬಸವರಾಜ ದೇಸಾಯಿ ಸಂಘಟನೆ ಕುರಿತು ಮಾತನಾಡಿದರು. ಶಹರ ಘಟಕದ ಅಧ್ಯಕ್ಷ ಬಿ.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನೌಕರರ ಸಂಘದ ಅಧ್ಯಕ್ಷ ಪ್ರೊ. ಎ.ವೈ. ನವಲಗುಂದ, ಮಂಜುನಾಥ ಇಟಗಿ, ನಾಗರಾಜ ಹೊಂಬಳಗಟ್ಟಿ, ಬಸವರಾಜ ನವಲಗುಂದ, ಎಸ್.ಎಸ್. ಇನಾಮತಿ, ಮಂಜು ಮುಧೋಳ, ಯಲ್ಲಪ್ಪ ಹೊಂಬಳಗಟ್ಟಿ, ಅಶೋಕ ಹಂದ್ರಾಳ ಮುಂತಾದವರು ಪಾಲ್ಗೊಂಡಿದ್ದರು.
ನಂತರ ಎಲ್ಲರೂ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು. ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿದರು. ಸಿ.ವಿ. ಪಾಟೀಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

