ಮೈಲಾರಲಿಂಗೇಶ್ವರ ಸರಪಳಿ ಪವಾಡ
ಗದಗ: ನಗರದ ಗಂಗಾಪುರ ಪೇಟೆಯಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಸರಪಳಿ ಪವಾಡ ನಡೆಯಿತು.
ಹಿಂದೆ ಮಣಿಕ-ಮಲ್ಲ ಎಂಬ ರಾಕ್ಷಸ ಸಹೋದರರು ಮೈಲಾರಲಿಂಗೇಶ್ವರನನ್ನು ಸರಪಳಿಯಿಂದ ಬಂಧಿಯನ್ನಾಗಿಸಿದ್ದರು. ವಿಜಯದಶಮಿ ದಿನದಂದೇ ಸರಪಳಿಯನ್ನು ಹರಿವ ಅವರಿಗೆ ಬಿಡುಗಡೆ ಭಾಗ್ಯ ದೊರೆತು ಮಣಿಕ-ಮಲ್ಲಾಸುರರನ್ನು ಸಂಹರಿಸಿದನು ಎಂಬ ಹಿನ್ನೆಲೆಯಲ್ಲಿ ಇಲ್ಲಿನ ದೇವಸ್ಥಾನದಲ್ಲಿ ವಿಜಯ ದಶಮಿಯಂದೇ ಈ ವಿಶೇಷ ಆಚರಣೆ ಮಾಡಲಾಗುತ್ತಿದೆ. ಸರಪಳಿ ಪವಾಡ ಮಾಡುವ ಗೊಗ್ಗಯ್ಯ (ಗೌಡಪ್ಪಗೌಡ ಬೆಣಕಲ್) ಘಟಸ್ಥಾಪನೆ ದಿನದಿಂದ ವಿಜಯದಶಮಿ ದಿನದವರಗೆ ಭಯ-ಭಕ್ತಿಯಿಂದ ನಿರಾಹಾರ ಉಪಾವಾಸ ಮಾಡುತ್ತಾರೆ. ವಿಜಯದಶಮಿ ದಿನದಂದು ಈ ಸರಪಳಿ ಪವಾಡಕ್ಕಾಗಿ ದೇವಸ್ಥಾನದಲ್ಲಿ 5 ಜನ ಮುತ್ತೈದೆಯರೊಂದಿಗೆ ಗಂಗಾಪೂಜೆ ಮಾಡಿ ಕರಿಕಂಬಳಿ ಮೇಲೆ ಪೂಜೆ ಮಾಡಿ, ದೇವರ ಆಶೀರ್ವಾದ ಪಡೆದು ನಂತರ ಸರಪಳಿಯನ್ನು ಜೋರಾಗಿ ಎಳೆಯುತ್ತಾರೆ. ಗೊಗ್ಗಯ್ಯ ಮುಷ್ಠಿಯ ತುದಿಯಲ್ಲಿ ಸರಪಳಿ ಹರಿದರೆ ನಾಡಿಗೆ ಉತ್ತಮ ಫಲ, ಮಧ್ಯದಲ್ಲಿ ಹರಿದರೆ ಸಾಧಾರಣ ಫಲ, ಕೊನೆಯ ತುದಿ ಹರಿದರೆ ಸಂಕಷ್ಟಗಳು ಎದುರಾಗಲಿವೆ ಎಂಬ ನಂಬಿಕೆ ಭಕ್ತರಲ್ಲಿದೆ.
ಸರಪಳಿ ಪವಾಡದ ನಂತರ ಮೈಲಾರಲಿಂಗೇಶ್ವರನ ಪಲ್ಲಕ್ಕಿಯು ಡೊಳ್ಳು, ವಾದ್ಯಗಳೊಂದಿಗೆ ಬನ್ನಿ ಮುಡಿಯುವುದಕ್ಕೆ ಊರ ಹೊರಗಿನ ಬಯಲು ಆಂಜನೇಯ ದೇವಸ್ಥಾನಕ್ಕೆ ತೆರಳಿತು. ಮೆರವಣಿಗೆಯಲ್ಲಿ ನಾಗರಾಜ ಮೆಣಸಗಿ, ರವಿ ಜೋಗಿನ, ಎಂ.ಸಿ. ಅರಣಿ, ಶ್ರೀಶೈಲಗೌಡ ಪಾಟೀಲ, ನಿಂಗಪ್ಪ ಮೆಣಸಗಿ, ಶೇಖರಗೌಡ ಪಾಟೀಲ, ಶೇಖಪ್ಪ ಮೆಣಸಗಿ, ವಿರೂಪಾಕ್ಷ ಪಟ್ಟೇದ, ಎಸ್.ಕೆ. ಮ್ಯಾಗೇರಿ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು. ಸರಪಳಿ ಪವಾಡದಲ್ಲಿ ಸರಪಳಿಯ ಕೊನೆಯ ತುದಿ ಹರಿದಿದ್ದರಿಂದ ರಾಜಕೀಯವಾಗಿ, ಸಾಮಾಜಿಕವಾಗಿ ಕಷ್ಟ-ನಷ್ಟಗಳು ಎದುರಾಗಲಿವೆ ಎಂದು ಭಕ್ತರು ಮಾತನಾಡುತ್ತಿರುವುದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

