ಗದಗ

ಸಮಾಜದ ಒಳಿತಿಗಾಗಿ ಬದುಕಿ: ಶ್ರೀ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಅ. 15
ಧಾರ್ಮಿಕ ಆಚರಣೆಗಳ ಮೂಲಕ ಸಮಾಜದ ಒಳಿತಿಗಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದು ನಿಜವಾದ ಧರ್ಮವಾಗಿದೆ. ದಸರಾ ಹಬ್ಬವು ದುಷ್ಟಶಕ್ತಿ ನಿರ್ಮೂಲನೆಯ ಸಂಕೇತವಾಗಿದೆ ಎಂದು ಹೊಸರಿತ್ತಿಯ ಗುದ್ದಲಿ ಶಿವಯೋಗಿ ಶ್ರೀಗಳು ಹೇಳಿದರು.
ಪಟ್ಟಣದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಭಾನುವಾರ ಸಂಜೆ ನಡೆದ ನಂದಾ ದೀಪರಾಧನೆ ಮಹೋತ್ಸವದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ದೇವಿಯ ಆರಾಧನೆಯು ನಮ್ಮ ಎಲ್ಲ ಕಾರ್ಯಗಳಿಗೆ ಶಕ್ತಿಯನ್ನು ತುಂಬುತ್ತದೆ. ಸಮಾಜ ಮುಖಿಯಾದ ಚಿಂತನೆಗಳನ್ನು ಹೊತ್ತ ಧಾರ್ಮಿಕ ಆಚರಣೆಗಳು ಇಂದು ಅವಶ್ಯ. ಕೇವಲ ನಮ್ಮ ಅವಶ್ಯಕತೆಗಳಿಗಾಗಿ ಹೋರಾಡುವ ಇಂದಿನ ದಿನಗಳಲ್ಲಿ ಪರರ ಚಿಂತನೆಗಾಗಿ ತಮ್ಮ ತನು, ಮನ, ಧನ ಮೀಸಲಿಟ್ಟು ಹೋರಾಟ ಮಾಡುವ ಸಮಾಜಮುಖಿ ಚಿಂತಕರನ್ನು ಸನ್ಮಾನಿಸಿದ್ದು ಹೆಚ್ಚು ಔಚಿತ್ಯ ಪೂರ್ಣವಾಗಿದೆ ಎಂದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಪುರಾತನ ಕಾಲದ ನಮ್ಮ ಪರಂಪರೆ ಬೆಳೆಸಿಕೊಂಡು ಹೋಗವ ಕಾರ್ಯವನ್ನು ಲಿಂಬಯ್ಯಸ್ವಾಮಿ ಪ್ರತಿಷ್ಠಾನವು ಮಾಡುತ್ತಿರುವುದು ಶ್ಲಾಘನೀಯ. ಧಾರ್ಮಿಕ ಆಚರಣೆಗಳು ಹಂತ ಹಂತವಾಗಿ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಆಚರಣೆಗಳು ಅವಶ್ಯವಾಗಿವೆ ಎಂದರು.
ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಸನ್ಮಾನಿತರಾದ ಗೌರಿಶಂಕರ ಸುರಗಿಮಠ, ಶಾಂಬಯ್ಯ ಹಿರೇಮಠ, ಅಧ್ಯಕ್ಷತೆ ವಹಿಸಿದ್ದ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಹಾಗೂ ಪುರಸಭೆಯ ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಪುರಸಭೆಯ ಉಪಾಧ್ಯಕ್ಷ ಎಂ.ಆರ್. ಪಾಟೀಲ, ಈರಣ್ಣ ಹೊಸಮಠ, ವಿರೂಪಾಕ್ಷಪ್ಪ ಪಡಗೇರಿ, ಬಸಣ್ಣ ಗಾಂಜಿ, ಶಂಕರ ಕೋಳಿವಾಡ, ಲಕ್ಷ್ಮೀ ಬನ್ನೂರ, ವಸಂತ ಪಾಟೀಲ ಕುಲಕರ್ಣಿ, ತಾಪಂ ಸದಸ್ಯ ಚೆನ್ನಪ್ಪ ಜಗಲಿ, ಶಿವಪ್ಪ ಮಡಿವಾಳರ ಮುಂತಾದವರು ಉಪಸ್ಥಿತರಿದ್ದರು. ಮಹೇಶ ಲಿಂಬಯ್ಯಸ್ವಾಮಿಮಠ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.