ಗದಗ

ದೇವರ ಧ್ಯಾನದಿಂದ ಜೀವನ ಪಾವನ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿ

Published On :

ನರೇಗಲ್ಲ: ಜೀವನದಲ್ಲಿ ಬಾಹ್ಯ ಅಲಂಕಾರಕ್ಕಿಂತ, ದೇವರು, ಭಜನೆ, ಪೂಜೆ, ಪ್ರಸಾದಗಳೇ ನಿಜವಾದ ಅಲಂಕಾರಗಳಾಗಿವೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  ಸ್ಥಳೀಯ ಅಂಬೇಡ್ಕರ್ ಓಣಿಯಲ್ಲಿ ಈಚೆಗೆ ದುರ್ಗಾ ದೇವಸ್ಥಾನದ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.  ಮಠ ಮಂದಿರಗಳು ಮನುಷ್ಯನ ಮನಸ್ಸು ಮತ್ತು ಹೃದಯಗಳನ್ನು ಸಂಸ್ಕರಿಸಿ, ವಿಕಾಸಿಸಿ ಆತ್ಮ ಸಾಕ್ಷಾತ್ಕಾರ ಗೊಳಿಸುತ್ತವೆ. ಮಕ್ಕಳನ್ನು ಪ್ರತಿದಿನ ತಪ್ಪದೆ ಶಾಲೆಗೆ ಕಳುಹಿಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ, ಸರ್ಕಾರದ ಜನಪರ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಕಳಕಪ್ಪ ಬಂಡಿಹಾಳ ಅವರು ತಮ್ಮ ತಾಯಿ ದಿ. ವೀರಮ್ಮ ಬಂಡಿಹಾಳ ಅವರ ಸ್ಮರನಾರ್ಥವಾಗಿ ದುರ್ಗಾ ದೇವಸ್ಥಾನಕ್ಕೆ ಕಳಸವನ್ನು ದಾನವಾಗಿ ನೀಡಿದರು. ರುದ್ರಮುನಿ ಹಿರೇಮಠ, ಪಪಂ ಸದಸ್ಯ ರಮೇಶ ಕಳಕೊಣ್ಣವರ, ವೀರನಗೌಡ ಸಂಕನಗೌಡ್ರ, ಶಿವಾನಂದಪ್ಪ ಬಂಡಿಹಾಳ, ಮಾಹಾಲಿಂಗಪ್ಪ ಮ್ಯಾಗೇರಿ, ವೀರಪ್ಪ ಹೋಯಿಲಗೊಳ, ವೀರಣ್ಣ ಹಿರೇಮಠ, ಮಂಜುನಾಥ ಕಾತರಕಿ, ಶ್ರೀಶೈಲಪ್ಪ ಬಂಡಿಹಾಳ, ಶೇಖರಪ್ಪ ಬಂಡಿಹಾಳ, ಚನ್ನಪ್ಪ ಮ್ಯಾಗೇರಿ, ರಮೇಶ ಬಂಡಿಹಾಳ, ಶಿವಕುಮಾರ ಬಂಡಿಹಾಳ, ರಾಜು ಶೇಡಜಿ, ಅಶೋಕ ಕಲ್ಲೂರ, ವಸಂತ ಶೇಠ, ವೀರೇಶ ಮುಂಡೆವಾಡಿ, ದುರ್ಗಾದೇವಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಬಸವರಾಜ ಬಾರಕೇರ ಸ್ವಾಗತಿಸಿದರು. ಮುತ್ತು ಹಡಪದ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.