ಡಿ.1ರಂದು ಬೆಂಗಳೂರಿನಲ್ಲಿ ವಿಶ್ವಕನ್ನಡಿಗರ ಮಹಾಸಮ್ಮೇಳನ
ಗದಗ: ಕನ್ನಡ ಜಾಗೃತಿ ವೇದಿಕೆ 20 ವರ್ಷ ತುಂಬಿದ ಅಂಗವಾಗಿ ಡಿ. 1ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಕನ್ನಡಿಗರ ಮಹಾ ಸಮ್ಮೇಳನ ನಡೆಸಲಾಗುವುದು ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ ಹೇಳಿದರು.
ಅವರು ನಗರದ ಕೊಪ್ಪರ ಅಕಾಡೆಮಿಯಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಜಾಗೃತಿ ವೇದಿಕೆಯ ವಿಶ್ವ ಕನ್ನಡಿಗರ ಮಹಾ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಪ್ರೊ. ರವೀಂದ್ರ ಕೊಪ್ಪರ ಮಾತನಾಡಿ, ಕನ್ನಡ ಭಾಷೆಗೆ ಅಭಿಮಾನವಿರಲಿ, ದುರಭಿಮಾನ ದೂರಾಗಲಿ, ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಬೇಕು ಎಂದರು. ದಾನು ದಾನಪ್ಪಗೌಡ್ರ, ಸಮರ್ಥನಂ ಶಿಕ್ಷಣ ಸಂಸ್ಥೆಯ ಶಿಕ್ಷಕಿ ದೀಪಿಕಾ ಸಾವಂತ ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲಾ ಸಂಚಾಲಕ ಮುತ್ತು ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ವೀರೇಶ ಕಮ್ಮಾರ, ಸದಸ್ಯ ಚೇತನಕುಮಾರ ಹುಡೇದ, ಭೂಷಣ್ ಅಣ್ಣಿಗೇರಿ, ಸಿ.ಜಿ. ಮುದಿಯಪ್ಪನವರ, ಆನಂದ ಧಾರವಾಡ, ನಾಗರಾಜ ಗೋಕಾವಿ, ಶರಣುರಡ್ಡೇರ, ಸಿದ್ದಪ್ಪ ಭೂಸದ, ವೀರೇಶ ಹೂಗಾರ, ವಿ.ಎಚ್. ಅಣ್ಣಿಗೇರಿ, ನವೀನ ಸಜ್ಜನ, ನಾಗರಾಜ ದೇವದರ್, ಅನಿಲಕುಮಾರ ಹಿರೇಮಠ, ಶಶಿಧರ ಇಟಗುತ್ತಿ, ವಿಜೇತ ಬೆಳಗಾವಿ, ಸುರೇಶ ಶ್ಯಾನವಾಡ ವೇದಿಕೆಯ ಪದಾಧಿಕಾರಿಗಳು ಇದ್ದರು. ಸಲಹಾ ಮಂಡಳಿ ಅಧ್ಯಕ್ಷ ಪ್ರೊ. ಹನಮಂತಗೌಡ ಕಲ್ಮನಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲು ಗೊಲ್ಲರ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ಪ್ರಭುರಾಜಗೌಡ ಪಾಟೀಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

