ಗದಗ

ಪ್ರವಚನದಿಂದ ಬದುಕು ಪಾವನ: ಹುಡೇದ

Published On :

ಗದಗ: ಮಹಾತ್ಮರ ನುಡಿಗಳನ್ನು ಆಲಿಸುವುದರಿಂದ, ಪ್ರವಚನ ಕೇಳುವುದರಿಂದ ಬದುಕು ಪಾವನವಾಗುತ್ತದೆ ಎಂದು ಗದಗ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಭು ಹುಡೇದ ಹೇಳಿದರು.  ಅವರು ಈಚೆಗೆ ತಾಲೂಕಿನ ಹರ್ತಿ ಗ್ರಾಮದ ಮುರಗಿಸ್ವಾಮಿ ಮಠದಲ್ಲಿ ಜೀವನ ಮೌಲ್ಯಗಳು ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.  ಹೊಸಳ್ಳಿಯ ಬೂದೀಶ್ವರ ಶ್ರೀಗಳು ಪ್ರವಚನ ನೀಡಿ, ಮನಸ್ಸು ದ್ವೇಷ, ಅಹಂಕಾರ ಮತ್ತು ಹೊಟ್ಟೆಕಿಚ್ಚು ಬಿಡಬೇಕು. ಅಲ್ಲದೇ ಬದುಕುವ ಕಲೆಯನ್ನು ಕರಗತ ಮಾಡಿಕೊಂಡು ಜಗದೀಶ ಮೆಚ್ಚುವಂತೆ ಜೀವನವನ್ನು ನಡೆಸಲು ಸೂಚಿಸಿದರು. ಜೀವನ ಮೌಲಿಕ ಮಾಲಿಕೆಗೆ ಅಗಮಿಸಿದ ಭಕ್ತರಿಗೆ ಈಶ್ವರಿ ವಿಶ್ವವಿದ್ಯಾಲಯದ ಪ್ರಜಾಪಿತ ಬ್ರಹ್ಮ ಕುಮಾರಿ ಬಿ.ಕೆ. ಸ್ವಾತಿ ಆಗಮಿಸಿ ರಕ್ಷಾ ಬಂಧನದ ಆಧ್ಯಾತ್ಮಿಕ ರಹಸ್ಯ ತಿಳಿಸಿದರು. ಇದೇ ಸಂದರ್ಭದಲ್ಲಿ ಹಲವು ಮಹನೀಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿ.ಟಿ. ಸೋಮರಡ್ಡಿ, ಬಿ.ಬಿ. ಹೊನ್ನಪ್ಪನವರ, ವಸಂತ ರಡ್ಡೇರ, ಸಿ.ವಿ. ಪಾಟೀಲ, ಪರಶುರಾಮ ಹಡಪದ, ಜೆ.ವಿ. ಲದ್ದಿ, ಎಸ್.ಆರ್. ಬಂಡಿವಡ್ಡರ, ನಾಗರಾಜ ಕಮ್ಮಾರ, ಎಂ.ಸಿ. ಪಾಟೀಲ, ಎಂ.ಎನ್. ಸೋಮರಡ್ಡಿ, ಪ್ರಭು ಲಿಂಗದಾಳ, ಗೂಳಪ್ಪ ರಡ್ಡೇರ, ಗೂಳಪ್ಪ ಗುಡದೂರ, ಬಿ.ಕೆ. ಜ್ಯೋತಿ. ಬಿ.ಕೆ. ಉಮಾ, ಬಿ.ಕೆ. ಶಿವಲೀಲಾ, ಪ್ರಭು ದಂಡಾವತಿಮಠ, ಎಂ.ಎಚ್. ಖುದಾವಂದ ಮುಂತಾದವರು ಉಪಸ್ಥಿತರಿದ್ದರು. ಪ್ರಕಾಶ ಅಂಗಡಿ ಸ್ವಾಗತಿಸಿದರು. ಎ.ವಿ. ಪ್ರಭು ನಿರೂಪಿಸಿದರು. ಎಸ್.ಆರ್. ಯಲಿಗಾರ ವಂದಿಸಿದರು.

ಇಂದು ಬೀರಲಿಂಗೇಶ್ವರ ಜಾತ್ರೆ
ರೋಣ: ರೇವಣಸಿದ್ದೇಶ್ವರ ಗ್ರಾಮೀಣ ವಿವಿಧೋದ್ದೇಶಗಳ ಸಮಿತಿ ಹಾಗೂ ಬೀರಲಿಂಗೇಶ್ವರ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಹುನಗುಂಡಿ ಸಂಯುಕ್ತವಾಗಿ ತಾಲೂಕಿನ ಹುನಗುಂಡಿ ಗ್ರಾಮದ ಬೀರಲಿಂಗೇಶ್ವರ ಜಾತ್ರಾಮಹೋತ್ಸವವು ಸೆ. 2ರಂದು ಜರುಗಲಿದೆ. ಜಾತ್ರಾಮಹೋತ್ಸವ ನಿಮಿತ್ತವಾಗಿ ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಪೂಜಾ ಕೈಂಕರ್ಯ, ಧಾರ್ಮಿಕ ವಿಧಿ ವಿಧಾನಗಳು ಜರುಗುವವು. ಸೆ. 3ರಂದು ಬೆಳಗ್ಗೆ 8.30 ಗಂಟೆಗೆ ನರೇಗಲ್ಲ ಮುತ್ಯಾತನವರ ಮೆರವಣಿಗೆ ಹಾಗೂ ಡೊಳ್ಳಿನ ಕುಣಿತದ ಪಲ್ಲಕಿ ಉತ್ಸವ ಜರುಗಲಿದೆ ಎಂದು ಬೀರಲಿಂಗೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಸಂಗಪ್ಪ ಕಂಬಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಕದಡಿಯಲ್ಲಿ ನಾಟಕ
ಗದಗ:  ತಾಲೂಕಿನ ಕದಡಿ ಗ್ರಾಮದಲ್ಲಿ ನೀಲಾಂಬಿಕಾದೇವಿ ಜಾತ್ರೆಯ ಅಂಗವಾಗಿ ನೀಲಾಂಬಿಕಾ ನಾಟ್ಯ ಹಾಗೂ ಗ್ರಾಮೀಣ ಸೇವಾ ಸಂಘ ಕದಡಿ ಇದರ ಆಶ್ರಯದಲ್ಲಿ ಆ. 2ರಂದು ರಾತ್ರಿ 10.45 ಗಂಟೆಗೆ ಮಾರುತೇಶ ಮಾಂಡ್ರೆ ವಿರಚಿತ ಕೊಪ್ಪಳ ಗವಿಸಿದ್ದೇಶ್ವರ ಮಹಾತ್ಮೆ ನಾಟಕವನ್ನು ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ವಹಿಸುವರು. ಉದ್ಘಾಟನೆಯನ್ನು ಗದಗನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಾಗೂ ಕದಡಿಯ ನೀಲಮ್ಮ ಮಠದ ಮಹಾದೇವಯ್ಯ ಶ್ರೀಗಳು ನೆರವೇರಿಸುವರು ಎಂದು ಭರಮಗೌಡ ಚಿಕ್ಕನಗೌಡ ಹಾಗೂ ಮಂಜುನಾಥಗೌಡ ಚಿಕ್ಕನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಅಪೌಷ್ಟಿಕತೆ ಜಾಗೃತಿ ಕಾರ್ಯಕ್ರಮ
ನರಗುಂದ: ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಮಿನಿಸ್ಟಿರಿ ಆಫ್ ಇನ್‌ಪಾರ್ಮೆಶನ್ ಮತ್ತು ಬ್ರಾಡಕಾಸ್ಟಿಂಗ್, ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರ ನೇತೃತ್ವದಲ್ಲಿ ಕೊಣ್ಣೂರ ಜೈ ಕಿಸಾನ್ ಯುವಕ ಮಂಡಳದ ವತಿಯಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಹೇಗೆ ಪೌಷ್ಟಿಕರಾಗಬೇಕು ಎಂಬುದರ ಕುರಿತು ಜಾಗೃತಿ ಕುರಿತ ಬೀದಿ ನಾಟಕವನ್ನು ಸೆ. 2ರಂದು ಬೆಳಗ್ಗೆ 10 ಗಂಟೆಗೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ಸದಾಶಿವ ಯೋಗಿಗಳ ಪುಣ್ಯಾರಾಧನೆ
ರೋಣ:  ಸಂತ ಶಿಸುನಾಳ ಶರೀಫರ ಎರಡನೇ ಅವತಾರ ಪುರುಷರೆಂದು ಪ್ರಸಿದ್ಧಿ ಪಡೆದ ರೋಣದ ಶಿವಾನಂದ ಮಠದ ಲಿಂಗೈಕ್ಯ ಸದಾಶಿವ ಮಹಾಶಿವಯೋಗಿಶ್ವರ ಶ್ರೀಗಳ 12ನೇ ಪುಣ್ಯಾರಾಧನೆಯು ಸೆ. 2ರಂದು ಜರುಗಲಿದೆ. ಶ್ರಾವಣ ಮಾಸದ ಕೊನೆಯ ಸೋಮವಾರವಾದಂದು ಪಟ್ಟಣದ ಶಿವಾನಂದ ಮಠದಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆ, ಧಾರ್ಮಿಕ ಮುಂತಾದ ತತ್ವ ಬೋಧನಾ ಚಿಂತನಾ, ಕೈವಲ್ಯ ಪದ್ಧತಿ (ಪ್ರವಚನ) ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 2 ಗಂಟೆಗೆ ಸದಾಶಿವಯೋಗಿಶ್ವರರ ನೂತನ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ಜರುಗಲಿದೆ. ಶ್ರಾವಣ ಮಾಸದಲ್ಲಿ ಶ್ರೀ ಮಠದಲ್ಲಿ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರಂತರವಾಗಿ ದವಸ, ಧಾನ್ಯಗಳನ್ನು ನೀಡಿದ ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ರೋಣ ಪಟ್ಟಣದ ಶಿವಾನಂದ ಮಠದ ಪೀಠಾಧ್ಯಕ್ಷರಾದ ಶ್ರವಣಕುಮಾರ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕು ಮಟ್ಟಕ್ಕೆ ಆಯ್ಕೆ
ಗಜೇಂದ್ರಗಡ: ಪಟ್ಟಣದ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಈಚೆಗೆ ನಡೆದ ಗಜೇಂದ್ರಗಡ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕೆಜಿಎಂಎಸ್ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಐಶ್ವರ್ಯ ಚಿಲಕಾ, ರೇಣುಕಾ ಕಾಡದ, ಮಧು ಮೇಹರವಾಡೆ, ಪೂಜಾ ಕರಿಗೌಡರ, ಜೀಜಾಬಾಯಿ ಮಲ್ಕೋಜಿ, ದೀಪಾ ಮಳಗಿ, ವಿದ್ಯಾ ಸೂಡಿ, ಹಸೀನಾ ಕಡ್ಲಿಮಟ್ಟಿ, ಆಯುಶಾ ಇಟಗಿ, ದೀಪಾ ಸಿಂದೆ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ, 200 ಮೀ. ಓಟದಲ್ಲಿ ಶ್ವೇತಾ ಮುಂಜಿ ಪ್ರಥಮ ಸ್ಥಾನ ಹಾಗೂ 400 ಮೀ. ಓಟದಲ್ಲಿ ರೇಣುಕಾ ಕಾಡದ ಪ್ರಥಮಸ್ಥಾನ ಮತ್ತು ಅಡತಡೆ ಓಟದಲ್ಲಿ ಪಲ್ಲವಿ ಕಮ್ಮಾರ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಪ್ರಧಾನ ಗುರುಮಾತೆ ಕೆ.ಡಿ. ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.