ಸಮರ್ಪಕ ಪಡಿತರ ವಿತರಣೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಸೆ. 2
ಪಡಿತರ ಚೀಟಿ ನೀಡುವಲ್ಲಿ ವಿಳಂಬ ಖಂಡಿಸಿ ಹಾಗೂ ಪಡಿತರ ಧಾನ್ಯಗಳ ಸಮರ್ಪಕ ವಿತರಣೆಗಾಗಿ ಆಗ್ರಹಿಸಿ ಸಾರ್ವಜನಿಕರು ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಪಡಿತರ ಚೀಟಿ ಇಲ್ಲದೆ ಹಾಗೂ ಕಾರ್ಡ್ಗಳು ಇದ್ದರೂ ಪಡಿತರ ಅಂಗಡಿಯವರು ನಿಮಗೆ ಈ ತಿಂಗಳ ಪಡಿತರ ಬಂದಿಲ್ಲವೆಂದು ಸತಾಯಿಸುತ್ತಾರೆ. 3-4 ತಿಂಗಳಿಂದ ಸೀಮೆ ಎಣ್ಣೆ ಕೂಡಾ ನೀಡುತ್ತಿಲ್ಲ. ನಮ್ಮ ರೇಶನ್ ಯಾಕೆ ಬಂದಿಲ್ಲವೆಂದು ಕೇಳಿದರೆ, ಈ ಹಿಂದೆ ನೀಡಿದ ಬೆರಳಚ್ಚು ಗುರುತು ಸರಿಯಾಗಿ ನಮೂದಾಗಿಲ್ಲ. ನೀವು ಬೆರಳಚ್ಚನ್ನು ಇನ್ನೊಮ್ಮೆ ನೀಡಬೇಕು. ಅದಕ್ಕಾಗಿ ಪಡಿತರ ಚೀಟಿ ಪೋಟೊ ತೆಗೆಯಿಸಿಕೊಳ್ಳಲು ಹಾಗೂ ಬೆರಳಚ್ಚು ನೀಡಲು ಸೆಪ್ಟೆಂಬರ್ 2 ರಿಂದ ಪ್ರಾರಂಭಿಸಲಾಗುವುದು ಎಂದು ಪಡಿತರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ಈ ಕುರಿತು ಬೆರಳಚ್ಚು ಗುರುತು ನೀಡುವ ಕಂಪ್ಯೂಟರ್ ಸೆಂಟರ್ಗಳಲ್ಲಿ ಹೋಗಿ ಕೇಳಿದರೆ, ಅವರು ಇದರ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ನಮಗೆ ಮಾಹಿತಿ ಬಂದಿಲ್ಲವೆಂದು ಹೇಳುತ್ತಾರೆ ಎಂದು ಆರೋಪಿಸಿದರು.
ಮಲ್ಲೇಶ ಅಂಕಲಿ, ನೀಲವ್ವ ಕುರ್ತಕೋಟಿ, ಅಶೋಕ ಬೊಮಲೆ, ದೇವರಡ್ಡಿ ಮೂಲಿಮನಿ, ಟಿ.ಎನ್. ಗೊರವರ, ಪಿ.ಎ. ಅಣ್ಣಿಗೇರಿ, ದೇವಪ್ಪ ಶಿರಕೋಳ, ಶೇಖಪ್ಪ ಅಂಬಲಿ, ಅಪ್ಪಣ್ಣ ಲಕ್ಕುಂಡಿ, ಬಸವರಾಜ ಕುಂಬಾರ, ಎಸ್.ಡಿ. ಶಿರಹಟ್ಟಿ, ಫಕ್ಕೀರಪ್ಪ ಅಂಬಲಿ, ಮಹದೇವಪ್ಪ ಕಬಾಡಿ, ಬಾಬುಸಾಬ ನದಾಫ್ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

