ಗದಗ

ನಂಬಿಕೆ ಇರುವವನು ಭವಿಷ್ಯ ತಾನೇ ಬರೆದುಕೊಳ್ಳುತ್ತಾನೆ

Published On :

ಗದಗ: ಜೀವನದಲ್ಲಿ ನಂಬಿಕೆ ಇರುವವನು ಮಾತ್ರ ತನ್ನ ಭವಿಷ್ಯವನ್ನು ತಾನೇ ಬರೆದುಕೊಳ್ಳುತ್ತಾನೆ ಎಂದು ಸಂಶೋಧಕ ಹಾಗೂ ಉಪನ್ಯಾಸಕ ಡಾ. ಎಂ.ಎನ್. ಕಳಸದ ಅಭಿಪ್ರಾಯ ಪಟ್ಟರು.
ಅವರು ಗುರುವಾರ ನಗರದ ಕೆಎಲ್‌ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ಅಂತಿಮ ವರ್ಷದ ಎಂಎಸ್ಸಿ ವಿದ್ಯಾರ್ಥಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಎಂಎಸ್ಸಿ ವಿದ್ಯಾರ್ಥಿಗಳ ನೋವಸ್-13 ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎಸ್. ಯಂಕಂಚಿ ಮಾತನಾಡಿ, ಕೆಎಲ್‌ಇ ಸಂಸ್ಥೆಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ, ಸಂಶೋಧನಾತ್ಮಕ ಹಾಗೂ ಗ್ರಂಥಸೌಲಭ್ಯ ನೀಡಿದೆ ಎಂದರು.
ಕೆಎಲ್‌ಇ ಬಿಬಿಎ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಬಿ. ಚನ್ನಪ್ಪಗೌಡರ, ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಎಂ. ನರಗುಂದ, ಕೆ.ಎಸ್.ಎನ್. ಮೂರ್ತಿ, ಡಾ. ಐ.ಐ. ಪಟ್ಟಣಶೆಟ್ಟಿ, ಪ್ರೊ. ವಿ.ಬಿ. ಡಾವಣಗೇರಿ, ವಿ.ಎಂ. ಕಿಣಗಿ, ಜಿ.ಪಿ. ಕುದರಿ, ಎಸ್.ವಿ. ಅಂಗಡಿ, ಪಿ.ಎಂ. ಮೇಟಿ, ಪಿ.ಬಿ. ಗಂಜಿಹಾಳ, ಗಂಗಾಧರ ಬಿ.ಎಂ., ಜ್ಯೋತಿ ರಾಯರ್, ವೇದಾ ಕೊಂಡಿ, ರೇಖಾ ಪಾಟೀಲ, ಚಂದ್ರಶೇಖರ, ಡಿ.ಆರ್. ಮಮದಾಪುರ ಮುಂತಾದವರು ಇದ್ದರು. ವಿಜಯಲಕ್ಷ್ಮಿ ಪ್ರಾರ್ಥಿಸಿದರು. ವಿದ್ಯಾ ಬೀಳಗಿ ಸ್ವಾಗತಿಸಿದರು. ವಿದ್ಯಾ ಕೆ. ಮತ್ತು ಮಂಜುಳಾ ಪಿ. ನಿರೂಪಿಸಿದರು. ವಿಭಾ ಮತ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.