ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಿ
ನರಗುಂದ: ಜಾತ್ಯತೀತ ದೇಶ ಭಾರತದಲ್ಲಿ ಯಾವುದೇ ಜಾತಿ, ಧರ್ಮದವರ ಹಬ್ಬಗಳನ್ನು ಎಲ್ಲ ಸಮುದಾಯದ ಜನ ಕೂಡಿಕೊಂಡು ಆಚರಿಸುತ್ತಾ ಬರಲಾಗುತ್ತಿದ್ದು, ಮುಂಬರುವ ಗಣೇಶ ಹಬ್ಬವನ್ನು ಎಲ್ಲ ಸಮಾಜದವರು ಶಾಂತಿಯುತವಾಗಿ ಆಚರಣೆ ಮಾಡುವಂತೆ ಸಿಪಿಐ ಪ್ರಶಾಂತ ಸಿದ್ದನಗೌಡರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಯ ಕಚೇರಿಯಲ್ಲಿ ಗಣೇಶ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವಿಘ್ನ ನಿವಾರಕನಾದ ಗಣೇಶ ಹಬ್ಬವನ್ನು ಹಲವು ವರ್ಷಗಳಿಂದ ಸಂಭ್ರಮದಿಂದ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಆದರೆ ಇಂದಿನ ಯುವ ಪೀಳಿಗೆ ಈ ಹಬ್ಬಗಳಲ್ಲಿ ಅನ್ಯ ಸಂಸ್ಕೃತಿ ಹಾಡುಗಳನ್ನು ಹಾಕಿಕೊಂಡು ನೃತ್ಯ ಮಾಡುವುದು ವಿಷಾದನೀಯ. ಪಟ್ಟಣದಲ್ಲಿ 53, ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 126 ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಈ ಸಾರ್ವಜನಿಕ ಗಣಪತಿಗಳಿಗೆ ಆಯಾ ಓಣಿಯ, ಸಮಿತಿಯವರು ಕಡ್ಡಾಯವಾಗಿ ಪುರಸಭೆ, ಅಗ್ನಿಶಾಮಕ, ಪೊಲೀಸ್ ಠಾಣೆ, ಲೋಕೋಪಯೋಗಿ ಇಲಾಖೆ, ಹೆಸ್ಕಾಂಗಳಿಂದ ಪರವಾನಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗಣೇಶ ವಿಸರ್ಜನಾ ಸಂದರ್ಭದಲ್ಲಿ ಹೆಚ್ಚು ಪಟಾಕಿ, ನೃತ್ಯ, ಇಸ್ಪೀಟ್ ಆಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಹಾಗೂ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಕಾರಣ ಗಣಪತಿಯನ್ನು ಪ್ರತಿಷ್ಠಾಪಿಸುವ ಯುವಕರು, ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಚರಣೆ ಮಾಡಬೇಕು ಎಂದರು.
ಪಿಎಸ್‌ಐ ಎಲ್.ಎಚ್. ಗೌಂಡಿ ಮಾತನಾಡಿದರು. ಕರವೇ ತಾಲೂಕು ಅಧ್ಯಕ್ಷ ಚನ್ನು ನಂದಿ, ಸದಾ ನರಗುಂದ, ಪುರಸಭೆ ಸದಸ್ಯ ಸಿ.ಬಿ. ಪಾಟೀಲ, ವಾಸು ಜೋಗಣ್ಣವರ, ರಫೀಕ ಧಾರವಾಡ, ನ್ಯಾಯವಾದಿ ಎಫ್.ವೈ. ದೊಡಮನಿ, ರವಿ ಬಾರಕೇರ, ಮಂಜು ಮೆಣಸಗಿ, ಹಸನಸಾಬ ಮಟಗೇರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

