ಗ್ರಾಮೀಣರಿಗೆ ಆರೋಗ್ಯದ ಕಾಳಜಿ ಇರಲಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಸೆ. 6
ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯವಾಗಿದೆ. ಭಾರತೀಯ ವೈದ್ಯ ಪರಂಪರೆಯ ಆಯುರ್ವೇದ ವೈದಕೀಯ ಪದ್ಧತಿಯ ಚಿಕಿತ್ಸೆಯ ಮೂಲಕ ಅನೇಕ ರೋಗಗಳನ್ನು ಗುಣ ಪಡಿಸಬಹುದಾಗಿದೆ ಎಂದು ಮಾಜಿ ಶಾಸಕ ಎಸ್.ಎನ್. ಪಾಟೀಲ ಹೇಳಿದರು.
ಅವರು ಗುರುವಾರ ಸಮೀಪದ ಹುಲ್ಲೂರಿನಲ್ಲಿ ಸಂಗೊಳ್ಳಿ ರಾಯಣ್ಣ ಜ್ಯೋತಿ ಯಾತ್ರೆ ನಿಮಿತ್ತ ನೇಗಿಲ ಯೋಗಿ ಕೃಷಿ ಕೇಂದ್ರ, ಗದುಗಿನ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರೋಗ್ಯ ಸಂಪತ್ತು ಎಲ್ಲ ಸಂಪತ್ತಿಗಿಂತ ಮಿಗಿಲಾದದ್ದು, ಅದಕ್ಕಾಗಿ ಗ್ರಾಮೀಣ ಜನತೆಯ ಆರೋಗ್ಯದ ದೃಷ್ಠಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ನಡೆಸಬೇಕು ಹಾಗೂ ಗ್ರಾಮೀಣ ಜನರು ಅನಾರೋಗ್ಯದಿಂದ ಬಳಲಬಾರದು ಎನ್ನುವುದು ನಮ್ಮ ಸದುದ್ದೇಶವಾಗಿದೆ. ಸಂಗೊಳ್ಳಿ ರಾಯಣ್ಣನಂತಹ ವೀರ ಪುರುಷರು ನಮ್ಮ ನಾಡಿನಲ್ಲಿ ಹುಟ್ಟಿದ್ದು ಹೆಮ್ಮೆಯ ಸಂಗತಿ. ಈ ವರ್ಷ ಹುಲ್ಲೂರಿನಲ್ಲಿ ಸಂಗೊಳ್ಳಿ ರಾಯಣ್ಣನ ಜ್ಯೋತಿ ಯಾತ್ರೆ ಉಳಿಯುತ್ತದೆ. ಅದರ ನಿಮಿತ್ತ ಪ್ರತಿ ಅಮಾವಾಸ್ಯೆ ದಿನದಂದು ಇಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಿ ಜನರ ಆರೋಗ್ಯ ಸುಧಾರಣೆಯ ಕಾರ್ಯವನ್ನು ಸಮಿತಿಯು ಮಾಡುತ್ತದೆ ಎಂದರು.
ಡಾ. ಎಸ್.ಬಿ. ಗೋವಿಂದಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ತಮ್ಮಲ್ಲಿರುವ ದುಶ್ಚಟಗಳನ್ನು ಬಿಟ್ಟು ಆರೋಗ್ಯ ಸುಧಾರಣೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯದ ಚಿಕಿತ್ಸೆಯನ್ನು ಆಯುರ್ವೇದವು ನೀಡುತ್ತದೆ. ಅದಕ್ಕಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಉಚಿತವಾಗಿ ನೀಡುತ್ತಿರುವ ಚಿಕಿತ್ಸೆಯ ಲಾಭವನ್ನು ಕುಟುಂಬದ ಎಲ್ಲ ಸದಸ್ಯರು ಪಡೆದುಕೊಳ್ಳಬೇಕು ಎಂದರು. ಡಾ. ನಾಗರಾಜ ಬಿರಾದಾರ ಹಾಗೂ ರವಿ ದಂಡಿನ ಮಾತನಾಡಿದರು. ಶಿಬಿರದಲ್ಲಿ ಡಾ. ವೀಣಾ ಕೋರಿ, ರವಿ ನಂದಿ, ವಿಜಯಲಕ್ಷ್ಮೀ ಮೆಣಸಗಿ, ರಾಜೇಶ ಬದ್ರಿಶೆಟ್ಟಿ ತಪಾಸಣೆ ನಡೆಸಿದರು.
ನೇಗಿಲಯೋಗಿ ಕೃಷಿ ಕೇಂದ್ರದ ಮಾಲೀಕ ವಿರೇಂದ್ರ ಪಾಟೀಲ, ನಿಂಗಪ್ಪ ಬನ್ನಿ, ನೀಲಪ್ಪ ಸಂಶಿ, ಗೋವಿಂದಪ್ಪ ಸೆರಸೂರಿ, ಸೋಮನಗೌಡ ಮರಿಗೌಡರ, ಪಂಚಾಕ್ಷರಯ್ಯ ಅಮೋಘಿಮಠ, ದೇವೆಂದ್ರಪ್ಪ ಸಬನೀಸ್, ಶೇಖಣ್ಣ ಸಾಸಲವಾಡ, ದೇವಪ್ಪ ಮತ್ತೂರ ಮುಂತಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು. ಸಂತೋಷ ಹಳ್ಳಿ ಸ್ವಾಗತಿಸಿದರು. ಸುರೇಶ ಗೌಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

