ಶಿಕ್ಷಕರು ವಿದ್ಯಾರ್ಥಿಗಳ ಬದುಕಿಗೆ ನೆಲೆ ಕಲ್ಪಿಸಿ
ಗದಗ: ಅಜ್ಞಾನವೆಂಬ ಕತ್ತಲನ್ನು ಓಡಿಸಿ ಜ್ಞಾನದ ಜ್ಯೋತಿ ವಿದ್ಯಾರ್ಥಿಗಳಲ್ಲಿ ಹೊತ್ತಿಸುವ ಮೂಲಕ ಅವರ ಬದುಕಿಗೆ ನೆಲೆ, ಅಮೂಲ್ಯವಾದ ಬೆಲೆಯನ್ನು ನೀಡುವುದು ಶಿಕ್ಷಕನ ಕರ್ತವ್ಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಜಿ.ಪಿ. ಕಟ್ಟಿಮನಿ ಅಭಿಪ್ರಾಯಪಟ್ಟರು.
ಅವರು ಗುರುವಾರ ನಗರದ ಶಿವಾನಂದ ವಿಜ್ಞಾನ ಕಾಲೇಜಿನಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ನಿಮಿತ್ತ ಜರುಗಿದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾ. ಎಸ್.ವಿ. ಸಂಕನೂರ ಮಾತನಾಡಿ, ಶಿಕ್ಷಕನಾದವನಲ್ಲಿ ಅಧ್ಯಯನ-ಅಧ್ಯಾಪನ ಎರಡೂ ಜತೆಯಾಗಿ ಇರಬೇಕು. ಶಿಕ್ಷಕನ ಜವಾಬ್ದಾರಿಯನ್ನು ನೆನಪಿಸುವ ದಿನವೇ ಈ ಶಿಕ್ಷಕರ ದಿನಾಚರಣೆ. ರಾಷ್ಟ್ರದ ಶಿಲ್ಪಿ ಎನಿಸಿಕೊಂಡ ಶಿಕ್ಷಕನು ಆತ್ಮ ವಿಮರ್ಶೆ ಮಾಡಿಕೊಳ್ಳುತ್ತ ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾಗಿದೆ. ಅಲ್ಲದೆ ಸಮರ್ಪಣಾ ಭಾವವು ಶಿಕ್ಷಕರಲ್ಲಿ ಸದಾ ಇರಬೇಕಾದುದು ಅಗತ್ಯ ಎಂದರು.
ಸ್ವಾತಿ ಪೂಜಾರ, ಉಮೇಶ ಹಾಗೂ ಕಿರಣ ಶಿಕ್ಷಕರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುರಲೀಧರ ಸಂಕನೂರ, ಬಿ.ಎಸ್. ಹಳ್ಳದ, ಆರ್.ಎಚ್. ಪಾಟೀಲ, ಕೃಷ್ಣಪ್ರಸಾದ ಜಾಧವ, ಕೌಸಲ್ಯ ರಡ್ಡೇರ, ಸುಸ್ಮಿತ ಜೋಷಿ, ಲೀಲಾ ಹರ್ಲಾಪುರ ಇದ್ದರು. ಸಂಗೀತಾ ಶಿವಸಿಂಪಿ ಪ್ರಾರ್ಥಿಸಿದರು. ಶ್ರಾವಣಿ ಮಹೇಂದ್ರಕರ ಸ್ವಾಗತಿಸಿದರು. ನಂದಾ ಭರಮಗೌಡರ, ಪ್ರಭು ಹಿರೇಮಠ ನಿರೂಪಿಸಿದರು. ಲಕ್ಷ್ಮಿ ಕೆ.ವಿ. ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

