ಗದಗ

ಹೊರಟ್ಟಿಯವರ ಸೇವೆ ಸ್ಮರಣೀಯ

Published On :

ಗದಗ: ಅಂಧ, ಅಂಗವಿಕಲರ ಬಾಳಲ್ಲಿ ಸಂತಸ ತುಂಬುತ್ತಿರುವ ಮಾಜಿ ಶಿಕ್ಷಣ ಸಚಿವ, ವಿಪ ಸದಸ್ಯ ಬಸವರಾಜ ಹೊರಟ್ಟಿಯವರ ಸೇವೆ ಸದಾಕಾಲ ಸ್ಮರಣೀಯ ಎಂದು ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಗಳ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಹೇಳಿದರು.
ಅವರು ಬುಧವಾರ ವಿದ್ಯಾದಾನ ಸಮಿತಿಯ ಬಾಲಕರ ಪ್ರೌಢಶಾಲೆಯಲ್ಲಿ ವಿದ್ಯಾದಾನ ಸಮಿತಿ ಹಾಗೂ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್  ಆಶ್ರಯದಲ್ಲಿ ಆಯೋಜಿಸಿದ್ದ ಅಂಗವಿಕಲರಿಗೆ ನೆರವು ನೀಡುವ ಸೇವಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಸ್.ಎನ್. ಖಾಜಿ, ಎ.ಎನ್. ನಾಗರಳ್ಳಿ, ಶ್ರೀನಿವಾಸ ಹುಯಿಲಗೋಳ, ನಗರಸಭಾ ಸದಸ್ಯ ಅನಿಲ ಗರಗ, ಹೊರಟ್ಟಿಯವರ ಸೇವಾ ಕಾರ್ಯ ಕುರಿತು ಮಾತನಾಡಿದರು. ಡಾ. ಬಸವರಾಜ ಧಾರವಾಡ ಪ್ರಾಸ್ತಾವಿಕವಾಗಿ ಮಾತನಾಡಿ, ಹೊರಟ್ಟಿಯವರ ಕಳೆದ ನಾಲ್ಕು ದಶಕಗಳ ಸಾರ್ವಜನಿಕ ಸೇವೆ ಹಾಗೂ ಶಿಕ್ಷಣ, ಶಿಕ್ಷಕರ ಪರ ಅವರ ಕಾಳಜಿ ಸದಾಕಾಲ ಸಮಾಜದಲ್ಲಿ ನೆನಪು ಉಳಿಯುವಂತೆ ಮಾಡಿದೆ. ಸಾರ್ವಜನಿಕ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರಿಗೂ ಹೊರಟ್ಟಿಯವರು ಮಾದರಿಯಾಗಿದ್ದಾರೆ ಎಂದರು. ಫಲಾನುಭವಿ ಅಂಗವಿಕಲ ವಿದ್ಯಾರ್ಥಿಗಳಾದ ವಿಜಯಕಲಾ ಕಾಲೇಜಿನ ಶಿವಾನಂದ ಎಂ, ಹೊಳೆಆಲೂರಿನ ವೈ.ಎಚ್. ಪಾಟೀಲ, ಚಿಂಚಲಿ ಗ್ರಾಮದ ಮಾರುತಿ ಮಾಯಪ್ಪ ಕರಿಯವರಿಗೆ ಹೊರಟ್ಟಿಯವರು ನೀಡಿದ ತ್ರಿಚಕ್ರ ವಾಹನ ಖರೀದಿಸಲು ಅನುದಾನ ಬಿಡುಗಡೆ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಿ.ಎ. ಕುಲಕರ್ಣಿ, ಎಸ್.ಎಸ್. ಕುರಗುಡಿ, ವಿ.ಎಸ್. ನಿಪ್ಪಾಣಿಕರ, ನಡುವಿನಮನಿ, ಎಂ.ಬಿ. ವಡವಿ, ಆರ್.ಎಸ್. ಪಾಟೀಲ, ವಿ.ಎಸ್. ಪೊಲೀಸ್‌ಪಾಟೀಲ, ಪಿ.ಕೆ. ಕುಬೇರ್, ಸಿ.ವಿ. ಬಡಿಗೇರ, ಆರ್.ಎಸ್. ಪರ್ವತಗೌಡ್ರ, ದೇವೇಂದ್ರ ಮುದ್ದೇಬಿಹಾಳ, ವಿ.ಎಂ. ಅರಹುಣಸಿ, ಹಾಗೂ ವಿದ್ಯಾದಾನ ಸಮಿತಿಯ ಸರ್ವ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎನ್.ಕೆ. ಬಟ್ಟೂರ ಸ್ವಾಗತಿಸಿದರು. ಸಿ.ಡಿ. ಕಾನಡೆ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.