ಹಜ್: ಮಾಹಿತಿ ಅಗತ್ಯ
ಗದಗ: ಹಜ್ ಯಾತ್ರೆಗೆ ತೆರಳುವ ಪ್ರತಿಯೊಬ್ಬರೂ ಅಲ್ಲಿನ ಎಲ್ಲ ವ್ಯವಸ್ಥೆಗಳು ಹಾಗೂ ಅಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮೊದಲೇ ಮಾಹಿತಿ ಹೊಂದುವುದು ಅವಶ್ಯಕ ಎಂದು ಭಾರತೀಯ ಹಜ್ ತರಬೇತಿ ವೇದಿಕೆಯ ಮುಖ್ಯ ತರಬೇತುದಾರ ಕೆಎಎಸ್ ಅಧಿಕಾರಿ ಸೈಯದ್ ಎಜಾಝದ್ ಅಹ್ಮದ್ ಹೇಳಿದರು.
ಅವರು ಶನಿವಾರ ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ, ಭಾರತೀಯ ಹಜ್ ತರಬೇತಿ ವೇದಿಕೆಯಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಹಜ್ ಯಾತ್ರಾರ್ಥಿಗಳಿಗೆ ಎರಡು ದಿನ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಯಾತ್ರೆ ಮುಖ್ಯ ಅಂಶಗಳನ್ನು ವಿವರಿಸಿದ ಅವರು, 1997ರ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಯಾತ್ರಾರ್ಥಿಗಳಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಘಟನೆಯ ನಂತರ ಸರ್ಕಾರ ಯಾತ್ರೆಯ ಮುನ್ನ ಈ ರೀತಿಯ ತರಬೇತಿಯನ್ನು ಕಡ್ಡಾಯಗೊಳಿಸಿದೆ ಎಂದರು.
ಯುವ ಮುಖಂಡ ಸಚಿನ್ ಪಾಟೀಲ ಮಾತನಾಡಿ, ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸುವ ಬಗ್ಗೆ ಅರಿವು ಮೂಡಿಸಲು ತರಬೇತಿ ಅವಶ್ಯ ಎಂದರು. ಗದುಗಿನ ಆಝಾದ್ ಕೋ-ಆಪ್ ಬ್ಯಾಂಕ್ನ ಚೇರ್ಮನ್ ಜನಾಬ ಸರಫರಾಜ ಉಮಚಗಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಹಿಂದೆ ಗದುಗಿನಲ್ಲಿ ಇಂತಹ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು ಇದೀಗ ಗದಗ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಯ ಮುಸ್ಲಿಂ ಸಮಾಜ ಹಜ್ ಯಾತ್ರಾರ್ಥಿಗಳಿಗಾಗಿ ಈ ಶಿಬಿರವನ್ನು ಸಂಘಟಿಸಲಾಗಿದ್ದು, ಯಾತ್ರಿಕರು ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕೆಂದರು.
ವೇದಿಕೆಯ ಮೇಲೆ ಮೌಲಾನಾ ಮೊಹ್ಮದ್ ಲುಥ್ಪುಲ್ಲಾ ಮುಝಹರ್ ರಶ್ದಿ, ಎ.ಎಂ. ಮುಲ್ಲಾ, ಎಂ.ಎಂ. ಶೇಖ್, ಆರ್.ಎಲ್. ಬಾಗಲಕೋಟೆ, ಇಕ್ಬಾಲ್ ಹಣಗಿ, ಸೌದಾಗರ, ಇಸ್ಮಾಯಿಲ್ ಬಿಜಾಪುರ, ಅಲ್ತಾಫ್ ರಾಣೆಬೆನ್ನೂರ, ಮುಸ್ತಾಕ್ ಮನಿಯಾರ, ರಿಯಾಜ್ ಅಹ್ಮದ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮೌಲಾನಾ ಹಾಫೀಜ್ ಮೊಹ್ಮದ್ ಹುಸೇನ್ ಅವರು ಕುರಾಣ ಪಠಿಸಿದರು. ಖದೀರ ಅಹ್ಮದ್ ಖದೀರ್ ಬಾಳೇಕುಂದ್ರಿ ನಿರೂಪಿಸಿದರು. ಪ್ರಾಚಾರ್ಯ ಎ.ಎಂ. ಮುಲ್ಲಾ ವಂದಿಸಿದರು.
ಎ.ಎಸ್. ಖವಾಸ, ಎಂ.ಎನ್. ಮಕಾನದಾರ, ಎಂ.ಎ. ಹಣಗಿ, ಕರೀಮಸಾಬ ನವಲಗುಂದ, ಜೀವನಸಾಬ ಮಂಗಳೂರ, ಹಿರಿಯ ನ್ಯಾಯವಾದಿ ಎಂ.ಎನ್. ದಾಯಮ್ಮನವರ, ಎ.ಜಿ. ಯರಗುಡಿ, ಜಿ.ಎಂ.ದಂಡಿನ ಮುಂತಾದವರು ಹಾಜರಿದ್ದರು. ಶಿಬಿರದಲ್ಲಿ ಧಾರವಾಡ ಜಿಲ್ಲೆಯ 293, ಬಾಗಲಕೋಟೆ ಜಿಲ್ಲೆಯ 171, ಗದಗ ಜಿಲ್ಲೆಯ 59 ಹಾಗೂ ಖಾಸಗಿ ಟ್ರಾವೆಲ್ಸ್ ಮೂಲಕ ಯಾತ್ರೆ ಕೈಗೊಳ್ಳಲಿರುವ 83 ಯಾತ್ರಾರ್ಥಿಗಳು ಸೇರಿದಂತೆ ಒಟ್ಟು 606 ಹಜ್ ಯಾತ್ರಿಕರು ಈ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕಿದ್ದು ಇವರಲ್ಲಿ ಮೊದಲ ದಿನ 500ಕ್ಕೂ ಹೆಚ್ಚಿನ ಯಾತ್ರಿಕರು ಪಾಲ್ಗೊಂಡಿದ್ದರು.
ಇಂದು ಮುಕ್ತಾಯ: ಸೆ. 8ರ ಸಂಜೆ 5 ಗಂಟೆಗೆ ನಡೆಯುವ ಶಿಬಿರದ ಮುಕ್ತಾಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಆಗಮಿಸುವರು. ಅಧ್ಯಕ್ಷತೆಯನ್ನು ಗದುಗಿನ ಆಝಾದ್ ಕೋ-ಆಪ್ ಬ್ಯಾಂಕ್ನ ಚೇರ್ಮನ್ ಜನಾಬ ಸರಫರಾಜ ಉಮಚಗಿ ಅವರು ವಹಿಸುವರು.
ಹಜ್ ಯಾತ್ರೆಗೆ ವಿಮಾನ ಪ್ರಯಾಣ, ಅಂತರಾಷ್ಟ್ರೀಯ ಕಾನೂನು ಕ್ರಮಗಳು, ಸೌದಿ ಸರ್ಕಾರದ ರೂಪುರೇಷೆಗಳು, ಜನದಟ್ಟಣೆಯ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು, ವಿದೇಶದಲ್ಲಿ ವಸತಿ, ಊಟ, ಪ್ರಯಾಣ ಇಂತಹ ಸಾಮಾಜಿಕ ಸಮಸ್ಯೆಗಳ ಅರಿವು ಮೂಡಿಸುವ, ಇಂತಹ ಸಮಸ್ಯೆಗಳನ್ನು ಹೇಗೆ ಎದುರಿಸಬೇಕೆಂಬ ತಿಳಿವಳಿಕೆಯನ್ನು ಎರಡು ದಿನದ ಈ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ನೀಡಲಾಗುವುದು.
- ಸೈಯದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

