ಗದಗ

ವಸತಿರಹಿತ ಕುಟುಂಬಗಳ ಗಣತಿ

Published On :

ಗಜೇಂದ್ರಗಡ: ಕೇಂದ್ರದ ಮಹತ್ವಾಕಾಂಕ್ಷಿಯ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ 2011ರ ವಸತಿ ರಹಿತ ಕುಟುಂಬಗಳನ್ನು ಗಣತಿಗೆ ಒಳಪಡಿಸುವ ಕಾರ್ಯಕ್ಕೆ ಸ್ಥಳೀಯ ಪುರಸಭೆ ವತಿಯಿಂದ ಗುರುವಾರ ಸಂಜೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಳಿಕ ಕೇಂದ್ರ ಸರ್ಕಾರ ನಗರ ಪಟ್ಟಣಗಳ ವ್ಯಾಪ್ತಿಯ ವಸತಿ ಹೀನ ಕುಟುಂಬಗಳನ್ನು ಗುರುತಿಸಿ ಅಂತಹ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಾಸಿಸಲು ವಸತಿ ರಹಿತ ಕುಟುಂಬಗಳು ಸಾಮಾನ್ಯವಾಗಿ ಯಾವುದೇ ಶಾಶ್ವತ ಸೂರಿಲ್ಲದೆ ಹಗಲೆಲ್ಲ ಚಿಂದಿ ಆಯ್ದು ಭಿಕ್ಷಾಟಣೆ ಮಾಡಿ ಬಸ್ ನಿಲ್ದಾಣ, ದೇವಸ್ಥಾನ, ಚರ್ಚ, ಮಸೀದಿ, ಶಾಲಾ ಆವರಣ, ಹೊಲ ಗದ್ದೆಗಳು, ಸೇತುವೆ ಕೆಳಗಡೆಯಂತಹ ಪ್ರದೇಶಗಳಲ್ಲಿ ವಾಸವಾಗಿರುವ ಕುಟುಂಬಗಳ ಸಮೀಕ್ಷೆ ಮಾಡಿ ವಸತಿ ರಹಿತ ಕುಟುಂಬಗಳಿಗೆ ಸೂರು ಜೊತೆ ಮೂಲ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು.
ಸಂಜೆ 6ಕ್ಕೆ ಆರಂಭವಾದ ಗಣತಿ ಕಾರ್ಯ ಬೆಳಗಿನವರೆಗೂ ಪಟ್ಟಣದ ವಿವಿಧ ಸ್ಥಳಗಳಿಗೆ ತೆರಳಿ ನಿರಾಶ್ರಿತರ ಗಣತಿ ಮಾಡಿದರು.
ಯೋಜನಾಧಿಕಾರಿ ಕೆ.ಓ. ಮುಲ್ಲಾ, ಸಿ.ವಿ. ಕುಲಕರ್ಣಿ, ಎಂ.ಬಿ. ನಿಡಶೇಶಿ, ಎಂ.ಬಿ. ಒಂಟಿ, ಪಿ.ಎನ್. ದೊಡ್ಡಮನಿ, ಎ.ಎಸ್. ನಾವಳ್ಳಿ, ಜಿ.ಎನ್. ಕಾಳೇ, ಎಂ.ಎಂ. ಕಡೆತೋಟದ, ಆರ್.ಎಂ. ಘೋರ್ಪಡೆ, ಆರ್.ಎಸ್. ಬೋಯಿಟೆ, ಎಚ್.ಎಂ. ನಿಶಾನದಾರ, ಆರ್.ಎಚ್. ಮಂತಾ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.