13ರಂದು ಪಿಂಚಣಿ ಅದಾಲತ್
ರೋಣ: ಗದಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೋಣ ಹೋಬಳಿಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ಪಿಂಚಣಿ ಅದಾಲತ್ ಕಾರ್ಯಕ್ರಮ ಸೆ. 13ರಂದು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜರುಗಲಿದೆ ಎಂದು ತಹಸೀಲ್ದಾರ್ ಎ.ಬಿ. ಪಂಡಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯಿಂದ ತಾಲೂಕು ಮಟ್ಟದ ಕ್ರೀಡಾಕೂಟ
ಲಕ್ಷ್ಮೇಶ್ವರ: ಜಿಲ್ಲಾ ಪಂಚಾಯಿತಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಶಿರಹಟ್ಟಿ ತಾಪಂ, ಶಿಗ್ಲಿ ಗ್ರಾಪಂ, ಗ್ರಾಮದ ಯುವಕ ಯುವತಿ ಮಂಡಳ ಹಾಗೂ ತಾಲೂಕು ಯುವ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಮೀಪದ ಶಿಗ್ಲಿ ಗ್ರಾಮದ ಎಸ್.ಎಸ್. ಕೂಡ್ಲಮ ಮಾಧ್ಯಮಿಕ ಶಾಲೆಯಲ್ಲಿ ಸೆ. 12 ಹಾಗೂ 13ರಂದು ಬೆಳಗ್ಗೆ 9ರಿಂದ ತಾಲೂಕು ಮಟ್ಟದ ಗ್ರಾಮೀಣ ಹಾಗೂ ದಸರಾ ಕ್ರೀಡಾಕೂಟಗಳು ಜರುಗಲಿವೆ. ಸೆ. 12ರಂದು ಬೆಳಗ್ಗೆ 9ಕ್ಕೆ ಜರಗುವ ಕ್ರೀಡಾಕೂಟದ ಉದ್ಘಾಟನೆಯನ್ನು ಶಾಸಕ ರಾಮಕೃಷ್ಣ ದೊಡ್ಡಮನಿ ನೆರವೇರಿಸುವರು. ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ ಅಧ್ಯಕ್ಷತೆ ವಹಿಸುವರು. ತಾಪಂ ಅಧ್ಯಕ್ಷೆ ಸುನಂದವ್ವ ಬಿದರಳ್ಳಿ ಓಲಂಪಿಕ್ ಧ್ವಜಾರೋಹಣ ನೆರವೇರಿಸುವರು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಓಲಂಪಿಕ್ ಜ್ಯೋತಿಯನ್ನು ನೆರವೇರಿಸುವರು. ಅತಿಥಿಗಳಾಗಿ ಜಿಪಂ ಸದಸ್ಯ ನಿರ್ಮಲಾ ಬರದೂರ, ಕಮಲವ್ವ ಸಜ್ಜನ, ಸುನಿತಾ ಹಳ್ಳೆಪ್ಪನವರ, ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ, ಶಿಗ್ಲಿ ಗ್ರಾಪಂ ಉಪಾಧ್ಯಕ್ಷ ಮನೋಹರ ಕರ್ಜಗಿ, ತಾಪಂ ಸದಸ್ಯ ಕೋಟೆಪ್ಪ ವರ್ದಿ, ನಿಂಬಣ್ಣ ಮಡಿವಾಳರ, ಸುಶೀಲಾ ಲಮಾಣಿ, ಫಕ್ಕೀರವ್ವ ಮುಂಡವಾಡ, ಚನ್ನಪ್ಪ ಜಗಲಿ, ಶಿವನಗೌಡ ಕಂಠಿಗೌಡ್ರ, ಅನಸವ್ವ ಕಾಳೆ, ಪಾರ್ವತೆವ್ವ ಗಾಣಿಗೇರ, ಸುಷ್ಮಾ ಸೊರಟೂರ, ಪಾರವ್ವ ಈಟಿ, ತಿಮ್ಮರಡ್ಡಿ ಅಳವಂಡಿ, ಗಂಗವ್ವ ಲಮಾಣಿ, ಇಒ ವೈ.ಎಲ್. ಹಂಪಣ್ಣ, ಬಿಇಒ ಆರ್.ಎಸ್. ಬುರಡಿ, ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಶಂಕರ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎ.ಜೆ. ಮೌಲಾಸಾಬನವರ, ಪಿಎಸ್ಐ ವಿಕಾಸ ಲಮಾಣಿ, ಶಿಗ್ಲಿ ಗ್ರಾಮದ ಭಾರತಿ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ವೈ.ಎಫ್. ಹಂಜಿ, ಮುಖ್ಯ ಶಿಕ್ಷಕ ಎನ್.ಎನ್. ನೆಗಳೂರ ಮುಂತಾದವರು ಆಗಮಿಸುವರು. ಸೆ. 12ರಂದು ಬೆಳಗ್ಗೆ 9ಕ್ಕೆ ಜರಗುವ ಗ್ರಾಮೀಣ ಕ್ರೀಡಾಕೂಟದಲ್ಲಿ ತಾಲೂಕಿನ 16 ವರ್ಷದೊಳಗಿನ ಯುವಕ ಯುವತಿಯರು ಭಾಗವಹಿಸಬಹುದಾಗಿದ್ದು, ಸೆ. 13ರಂದು ಜರುಗುವ ದಸರಾ ಕ್ರೀಡಾಕೂಟ ಎಲ್ಲ ವಯೋವಾನದವರಿಗೆ ಮುಕ್ತವಾಗಿದೆ. ಕ್ರೀಡಾಕೂಟದಲ್ಲಿ ತಾಲೂಕಿನ ಎಲ್ಲ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಹಾಯಕ ಯುವ ಜನಸೇವಾ ಹಾಗೂ ಕ್ರೀಡಾಧಿಕಾರಿ ಎಂ.ಡಿ. ತಳ್ಳಳ್ಳಿ ಮತ್ತು ಶಿಗ್ಲಿ ಪಿಡಿಒ ಬಿ.ಟಿ. ಅಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕರು ಸಮಾಜಮುಖಿಯಾಗಿ ಚಿಂತಿಸುವುದು ಅವಶ್ಯ
ನರೇಗಲ್ಲ: ಯುವಕರು ಸಮಾಜಮುಖಿಯಾಗಿ ಚಿಂತಿಸುವ, ಪ್ರಗತಿಪರ ವಿಚಾರಗಳನ್ನು ಒಪ್ಪಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಗದಗ ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರವಿ ದಂಡಿನ ಹೇಳಿದರು.
ಅವರು ಈಚೆಗೆ ಸ್ಥಳೀಯ ಕೆಎಸ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿವಿಧ ಸಾಂಘಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಓದಿನೊಂದಿಗೆ ಸಾಂಸ್ಕೃತಿಕ ಮನೋಭಾವನೆ ಬೆಳೆಸಿಕೊಳ್ಳಿ. ಇದರಿಂದ ಮನಸ್ಸು ಹಾಗೂ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದರು. ಉಪನ್ಯಾಸಕ ಸಂಗಪ್ಪ ಗುಳಗಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಪರ ಕಾಳಜಿಯನ್ನು ತಾಳುವ ಮೂಲಕ ಪರಿಸರ ಪ್ರಜ್ಞೆಯನ್ನು ತಿಳಿದುಕೊಳ್ಳುವ ಅಗತ್ಯ ಹಾಗೂ ಅನಿವಾರ್ಯತೆ ಇಂದು ಅವಶ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎಸ್. ಬೆನಕನವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಶೇಠ, ರಾಮಣ್ಣ ಸಕ್ರೋಜಿ, ಸಂತೋಷ ಹಳ್ಳದ, ಉಪನ್ಯಾಸಕ ಬಿ.ಕೆ. ಕಂಬಳಿ, ಎಸ್.ಬಿ. ಅಂಗಡಿ, ಎ.ಎಸ್. ಶಿವಬಸನಗೌಡ, ವಿದ್ಯಾರ್ಥಿ ಪ್ರತಿನಿಧಿಗಳಾದ ಹನುಮಂತ ಬಂಡಿವಡ್ಡರ, ಲಕ್ಷೀ ರಾಠೋಡ ಮುಂತಾದವರು ಉಪಸ್ಥಿತರಿದ್ದರು. ಸೌಭಾಗ್ಯಾ ಅಯ್ಯನಗೌಡರ ಸ್ವಾಗತಿಸಿದರು. ಶರಣಮ್ಮ ಗುರಿಕಾರ ನಿರೂಪಿಸಿದರು. ಭೀಮವ್ವ ಕುರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

