ಸಾಲ ಮನ್ನಾ ಹಣ ಮರಳಿ ರೈತರಿಗೆ ಸಿಗಲಿ
ನರಗುಂದ: ರಾಜ್ಯದಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ರು. 25 ಸಾವಿರದವರೆಗಿನ ರೈತರ ಸಾಲ ಮನ್ನಾ ಮಾಡಿತ್ತು. ಆದರೆ, ರೈತರಿಗೆ ಈ ಸಾಲ ಮನ್ನಾದ ಹಣ ಮತ್ತೆ ಸಾಲದ ರೂಪದಲ್ಲಿ ಸಿಗುವಂತಾಗಬೇಕು ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಅವರು ಗುರುವಾರ ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2011-12ನೇ ಸಾಲಿನಲ್ಲಿ ಗದಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭೀಕರ ಬರಗಾಲ ಇದ್ದ ಕಾರಣ ಅಂದಿನ ಸಿಎಂ ರೈತ ಸಮುದಾಯದಲ್ಲಿ ಭೇದ ಭಾವ ಮಾಡದೇ ದೊಡ್ಡ ಮತ್ತು ಸಣ್ಣ ರೈತರು ಎನ್ನದೇ ಎಲ್ಲ ರೈತರ ರು. 25 ಸಾವಿರದ ವರೆಗಿನ ಸಾಲ ಮನ್ನಾ ಮಾಡಿದ್ದರು. ಆ ಸಾಲ ಮನ್ನಾ ಮಾಡಿದ ಹಣ ಸರ್ಕಾರದಿಂದ ಬಂದು ( 11ಕೋಟಿ) ಕೆಸಿಸಿ ಬ್ಯಾಂಕ್ನ ಖಾತೆಗೆ ಜಮೆ ಆಗಿದೆ. ಕೂಡಲೇ ಕೆಸಿಸಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರು ಆಯಾ ತಾಲೂಕಿನ ರೈತರಿಗೆ ಸಹಕಾರಿ ಸಂಘದ ಮೂಲಕ ಮರು ಸಾಲದ ಮಾದರಿಯಲ್ಲಿ ಸಾಲ ನೀಡಲು ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಕೆಸಿಸಿ ಬ್ಯಾಂಕ್ ಮುಂಭಾಗದಲ್ಲಿ ಬ್ಯಾಂಕ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದ ಅವರು, ಈ ಭಾಗದ ರೈತರ ಜೀವನಾಡಿಯಾದ ಮಲಪ್ರಭಾ ಜಲಾಶಯ ಇಲ್ಲಿಯವರೆಗೂ ಭರ್ತಿಯಾಗದೇ ಇಲ್ಲಿನ ರೈತರು ಆತಂಕವನ್ನು ಎದುರಿಸುವಂತಾಗಿದ್ದು, ಅದಕ್ಕಾಗಿ ಪ್ರಸಕ್ತ ಸಾಲಿನ ಎಲ್ಲ ಸಾಲಗಳನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಸನಗೌಡ ಚಿಕ್ಕನಗೌಡ್ರ, ಅಣ್ಣಪ್ಪಗೌಡ ಪಾಟೀಲ, ಚಳಪ್ಪ ನಾಯ್ಕರ, ಅಲ್ಲಿಸಾಬ ನಧಾಪ್, ಬಸಪ್ಪ ಗುಡದೇರಿ, ರುದ್ರಪ್ಪ ಗಾಣಿಗೇರ, ಗುರಶಾಂತ ನರಸಾಪುರ, ಮುತ್ತಪ್ಪ ಬದಾಮಿ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

